Close Menu
Ain Live News
    Facebook X (Twitter) Instagram YouTube
    Monday, June 2
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಇಂದು ಮಧ್ಯಾಹ್ನ ನಿರ್ಮಾಪಕ ಸೌಂದರ್ಯ ಜಗದೀಶ್ ಅಂತ್ಯಕ್ರಿಯೆ

    By Author AINApril 15, 2024
    Share
    Facebook Twitter LinkedIn Pinterest Email
    Demo

    ಸ್ಯಾಂಡಲ್ ವುಡ್ ನಿರ್ಮಾಪಕ, ಉದ್ಯಮಿ ಸೌಂದರ್ಯ ಜಗದೀಶ್ ಏ.14ರಂದು ಬೆಳಗ್ಗೆ ನೇಣಿಗೆ ಶರಣಾಗಿದ್ದಾರೆ. ಬಳಿಕ ಎಂ.ಎಸ್​. ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಯಿತು. ಮಧ್ಯಾಹ್ನದ ವೇಳೆಗೆ ಸೌಂದರ್ಯ ಜಗದೀಶ್​ ಅವರ ಮೃತದೇಹವನ್ನು ಮನೆಗೆ ತೆಗೆದುಕೊಂಡು ಬರಲಾಗಿದೆ.

    ಇಂದು ಚೆನ್ನರಾಯಪಟ್ಟಣ ತಾಲೂಕಿನ ಹಿರಿಸಾವೆಯಲ್ಲಿ ಸೌಂದರ್ಯ ಜಗದೀಶ್​ ಅವರ ಅಂತ್ಯಕ್ರಿಯೆ ನಡೆಯಲಿದೆ. ಬೆಳಗ್ಗೆ 9 ಗಂಟೆವರೆಗೆ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಮಧ್ಯಾಹ್ನ 12 ಗಂಟೆಯಿಂದ 1 ಗಂಟೆ ಒಳಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಸೌಂದರ್ಯ ಜಗದೀಶ್​ ಅವರ ನಿಧನದಿಂದ ಚಿತ್ರರಂಗಕ್ಕೆ ಆಘಾತ ಉಂಟಾಗಿದೆ.

    ಉದ್ಯಮಿ ಆಗಿದ್ದ ಸೌಂದರ್ಯ ಜಗದೀಶ್​ ಅವರು ನಂತರ ಸಿನಿಮಾದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಚಿತ್ರರಂಗದ ಹಲವರ ಜೊತೆ ಅವರು ಒಡನಾಟ ಹೊಂದಿದ್ದರು. ಶ್ರೀಮುರಳಿ, ದರ್ಶನ್​, ಉಪೇಂದ್ರ, ಗುರುಕಿರಣ್​, ತರುಣ್​ ಸುಧೀರ್​, ಸಾರಾ ಗೋವಿಂದು, ಕೆ. ಮಂಜು ಮುಂತಾದವರು ಬಂದು ಸೌಂದರ್ಯ ಜಗದೀಶ್​ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಜಗದೀಶ್​ ಪುತ್ರ ಸ್ನೇಹಿತ್​ ಅವರು ನಟನಾಗಿ ಗುರುತಿಸಿಕೊಂಡಿದ್ದಾರೆ.

    ಸೌಂದರ್ಯ ಜಗದೀಶ್​ ಅವರ ಸಾವಿಗೆ ಸಂಬಂಧಿಸಿದಂತೆ ಕುಟುಂಬದವರು ಮಹಾಲಕ್ಷ್ಮೀ ಲೇಔಟ್​ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದ ಜಗದೀಶ್​ ಅವರು ಆರ್ಥಿಕ ಸಂಕಷ್ಟ ಹಾಗೂ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ. ಹೆಚ್ಚು ಸಾಲ ಆಗಿತ್ತು. ಮರು ಪಾವತಿ ಮಾಡಲಾಗದೇ ನೊಂದಿದ್ದರು. ಕಳೆದ ತಿಂಗಳು ಸೌಂದರ್ಯ ಜಗದೀಶ್​ ಅವರ ಅತ್ತೆ ನಿಧನರಾಗಿದ್ದರು. ಆ ಬಳಿಕ ಜಗದೀಶ್​ ಮಾನಸಿಕವಾಗಿ ಕುಗ್ಗಿದ್ದರು. ಬಳಿಕ ಕುಟುಂಬದವರು ಕೌನ್ಸಲಿಂಗ್​ ಮಾಡಿಸಿದ್ದರು. ಡಿಪ್ರೆಷನ್​ಗೆ ಜಗದೀಶ್​ ಅವರು ಔಷಧಿ ಸೇವಿಸುತ್ತಿದ್ದರು. ಕಳೆದು ಒಂದು ತಿಂಗಳಿಂದ ಒಂಟಿಯಾಗಿ ಮನೆಯಲ್ಲಿ ಇರುತ್ತಿದ್ದರು ಎನ್ನಲಾಗಿದೆ.

    Demo
    Share. Facebook Twitter LinkedIn Email WhatsApp

    Related Posts

    ಸೀತಾರಾಮ ಸೀರಿಯಲ್‌ ಮುಕ್ತಾಯಗೊಳ್ಳುತ್ತಿದ್ದಂತೆ ಗುಡ್‌ ನ್ಯೂಸ್‌ ಕೊಟ್ಟ ನಟಿ ವೈಷ್ಣವಿ ಗೌಡ!

    June 2, 2025

    ʼಥಗ್‌ ಲೈಫ್‌ʼ ಬಿಡುಗಡೆಗೆ ಸಂಕಷ್ಟ: ಕಾನೂನು ಮೊರೆ ಹೋದ ಕಮಲ್ ಹಾಸನ್!

    June 2, 2025

    ಅಯ್ಯೋ ವಿಧಿಯೇ? ಸ್ಕ್ರೀಪ್ಟ್‌ ಹೇಳಿ ಬರುವಾಗ ಎದೆ ನೋವಿನಿಂದ ಖ್ಯಾತ ನಿರ್ದೇಶಕ ಸಾವು!

    June 2, 2025

    ವಿರಾಟ್ ಕೊಹ್ಲಿ-ಶ್ರೇಯರ್ ಅಯ್ಯರ್‌ನ್ನು ಶ್ಲಾಘಿಸಿದ ಬಾಹುಬಲಿ ನಿರ್ದೇಶಕ…ಯಾರಿಗೆ ʼಕಪ್ʼ ರಾಜಮೌಳಿ ಹೇಳಿದ್ದೇನು?

    June 2, 2025

    ಕನ್ನಡ ವಿರೋಧಿ ಕಮಲ್ ಹಾಸನ್‌ಗೆ ಕನ್ನಡ ಪುಸ್ತಕ ಕೊಟ್ಟ ʼಕನ್ನಡತಿʼ! Video ವೈರಲ್!

    June 2, 2025

    ಕರ್ನಾಟಕದಲ್ಲಿ ‘ಥಗ್ ಲೈಫ್’ ಸಿನಿಮಾ ರಿಲೀಸ್ ಮಾಡಿದ್ರೆ ಬೆಂಗಳೂರು ಬಂದ್ ಗ್ಯಾರಂಟಿ: ಪ್ರವೀಣ್ ಶೆಟ್ಟಿ!

    June 2, 2025

    ಫೈನಲ್‌ಗೆ ಲಗ್ಗೆಯಿಟ್ಟ ಆರ್‌ಸಿಬಿ – `ಈ ಸಲ ಕಪ್‌ ನಮ್ದೇʼ ಎಂದ ಡಿಂಪಲ್ ಕ್ವೀನ್ ರಚಿತಾ ರಾಮ್

    June 1, 2025

    ಅವನೊಬ್ಬ ಅಯೋಗ್ಯ.. ಆತನಿಂದ ಅವಮಾನ ಆಗಿದೆ: ಕಮಲ್ ಹಾಸನ್ ವಿರುದ್ಧ ಮುಖ್ಯಮಂತ್ರಿ ಚಂದ್ರು ಕಿಡಿ!

    June 1, 2025

    ನಮ್ಮ ಕನ್ನಡದ ಬಗ್ಗೆ ಯಾರೇ ತಪ್ಪಾಗಿ ಮಾತಾಡಿದ್ರೂ ಒಪ್ಪಲ್ಲ: ನಟಿ ಸುಧಾರಾಣಿ!

    June 1, 2025

    ನಾನು ಕಮಲ್ ಹಾಸನ್ ದೊಡ್ಡ ಫ್ಯಾನ್, ಆದರೆ ಕಮಲ್ ಹಾಸನ್ ಕ್ಷಮೆ ಕೇಳಬೇಕು- ರಚಿತಾ ರಾಮ್!

    June 1, 2025

    ಕನ್ನಡಕ್ಕಾಗಿ ಏನು ಮಾಡಿದ್ದೇನೆ ಎಂಬುದು ಕರ್ನಾಟಕದ ಜನರಿಗೆ ಗೊತ್ತಿದೆ: ಶಿವಣ್ಣ!

    May 31, 2025

    ಆ ಕಮಲ್ ಹಾಸನ್ ಕ್ಷಮೆ ಕೇಳಲೇಬೇಕು, ಅಲ್ಲಿಯವರೆಗೂ ಬಿಡಲ್ಲ: ಶಿವರಾಜ್ ತಂಗಡಗಿ!

    May 31, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.