ಗದಗ:- ನವ ದಂಪತಿಯ ಆತ್ಮಹತ್ಯೆ ಘಟನೆ ಜಿಲ್ಲೆಯ ಹುಲಕೋಟಿ ಗ್ರಾಮದಲ್ಲಿ ಜರುಗಿದೆ. ವಿಕ್ರಮ ಶಿರಹಟ್ಟಿ (30) ಹಾಗೂ ಪತ್ನಿ ಶಿಲ್ಪಾ (28) ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ತಮ್ಮ ವೈಯಕ್ತಿಕ ಆರೋಗ್ಯ ಸಮಸ್ಯೆಗಳ ಹಿನ್ನೆಲೆಯಲ್ಲಿ ದಂಪತಿಗಳು ಮಾನಸಿಕವಾಗಿ ಹತಾಶರಾಗಿದ್ದ ಶಂಕೆ ವ್ಯಕ್ತವಾಗಿದೆ. ಶಿಲ್ಪಾಗೆ ಬಲ ಕಣ್ಣಿನ ಸಮಸ್ಯೆ ಇದ್ದರೆ, ವಿಕ್ರಮಗೆ ಉಸಿರಾಟದ ತೊಂದರೆ ಇದ್ದುದಾಗಿ ಕುಟುಂಬದ ಮೂಲಗಳು ತಿಳಿಸಿವೆ. ಈ ಕಾರಣದಿಂದಾಗಿ ಜೀವನದಲ್ಲಿ ನಿರಾಸೆಯ ಅನುಭವಕ್ಕೆ ಒಳಗಾದ ದಂಪತಿ ಆತ್ಮಹತ್ಯೆಗೆ ಶರಣಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಘಟನೆ ಬಗ್ಗೆ ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಗದಗ ಗ್ರಾಮೀಣ ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.