ಗದಗ: ಪಂಚಮಸಾಲಿ ಸಮಾಜದ ಯುವಕ, ಎಬಿವಿಪಿ ಕಾರ್ಯಕರ್ತರ ರವಿ ನರೇಗಲ್ ಮೇಲೆ ಬಾಗಲಕೋಟೆ ಜಿಲ್ಲೆ ಬದಾಮಿ ಪೊಲೀಸ್ ಠಾಣೆಯ ಪಿಎಸ್ಐ ವಿಜಯಕುಮಾರ ರಾಥೋಡ್, ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ಪಿಎಸ್ ಐ ಅಮಾನತು ಮಾಡುವಂತೆ ಒತ್ತಾಯಿಸಿ ಗದಗ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಲಾಯಿತು.
ರವಿ ನರೇಗಲ್ ಬದಾಮಿ ಪಟ್ಟಣದ ರಾಮದುರ್ಗ ಸರ್ಕಲ್ ನಲ್ಲಿ ಚಹಾ ಕುಡಿಯುವ ವೇಳೆ ರಾತ್ರಿ 11ಕ್ಕೆ ಅಂಗಡಿ ಬಂದ್ ಮಾಡುವಂತೆ ಬಂದಿದ್ದ ಪಿಎಸ್ಐ, ಈ ವೇಳೆ ರವಿಗೆ ರಾಬರಿ ಮಾಡಿದ್ದೀಯಾ ಎಂದು ಬೈದಿದ್ದಾರಂತೆ. ದೇವಸ್ಥಾನಕ್ಕೆ ಬಂದಿದ್ದೇನೆ, ಬಿಡಿ ಎಂದರೂ ಬಿಡದೇ ಹಲ್ಲೆ ಮಾಡಿದ್ದಾರೆ. ಅಲ್ಲದೆ, ಪೊಲೀಸ್ ಠಾಣೆಗೆ ಕರೆದೊಯ್ದು ಹಿವ್ಗಾಮುಗ್ಗ ಥಳಿಸಿದ್ದಾರೆ ಎಂದು ಗದಗ ಜಿಲ್ಲಾ ವೀರರಾಣಿ ಕಿತ್ತೂರು ಚನ್ನಮ್ಮ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಆರೋಪಿಸಿದೆ.
ಬಿಜೆಪಿಗೆ ಮಾನ ಮರ್ಯಾದೆ ಇಲ್ಲ. ಸುಳ್ಳು ಹೇಳ್ತಾರೆ, ನೀವು ನಂಬ್ತೀರಿ: ಸಿಎಂ ಕೋಪತಾಪವೇಕೆ ?
ಬದಾಮಿ ಪಿಎಸ್ಐ ವಿಜಯಕುಮಾರ ರಾಥೋಡ್ ಅಮಾನತು ಮಾಡುವಂತೆ ಆಗ್ರಹಿಸಿ ಗದಗ ಜಿಲ್ಲಾಧಿಕಾರಿಗಳ ಮೂಲಕ ಪೊಲೀಸ್ ಮಹಾನಿರ್ದೆಶಕರಿಗೆ ಮನವಿ ಸಲ್ಲಿಸಲಾಯಿತು.