ಚಿತ್ರದುರ್ಗ: ಹಿರಿಯೂರಿನ ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿ ಇಬ್ಬರು ನಗರಸಭೆ ಸದಸ್ಯರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಅವರ ಬೆಂಬಲಿಗರು ಸೇರಿದಂತೆ 16 ಮಂದಿಯನ್ನು ಬಂಧಿಸಿ, 4ಲಕ್ಷದ 37ಸಾವಿರ ನಗದು ವಶಪಡಿಸಿಕೊಂಡ ಘಟನೆ ನಡೆದಿದೆ.
ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಜಲಾಶಯದ ಟಿಬಿ ವೃತ್ತದ ಬಳಿ ಇರುವ ಪ್ರವಾಸಿ ಮಂದಿರದಲ್ಲಿ 16 ಮಂದಿ ಇಸ್ಪೀಟ್ ಆಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ. ಇಬ್ಬರು ಕಾಂಗ್ರೆಸ್ ನಗರಸಭೆ ಸದಸ್ಯರು ಸೇರಿದಂತೆ 16 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಇನ್ನು ಆರೋಪಿಗಳನ್ನು ಬಂಧಿಸಿ 4ಲಕ್ಷದ 37 ಸಾವಿರ ರೂಪಾಯಿ ನಗದು,52 ಇಸ್ಪೀಟ್ ಎಲೆಗಳು,
Aishwarya Rai: ಗಂಡನ ಮನೆಯಿಂದ ಹೊರಬಂದ ಐಶ್ವರ್ಯಾ ರೈ..! ಬಿಗ್’ಬಿ ಮನೆಯಲ್ಲಿ ಅತ್ತೆ-ಸೊಸೆಯ ಬಿರುಕು
ಹಾಗೂ ಆಟಕ್ಕೆ ಬಳಸಿದ ಬಿಳಿ ಬಟ್ಟೆಯ ಟವಲ್ ವಶಪಡಿಸಿಕೊಂಡಿದ್ದಾರೆ. ಇಬ್ಬರು ನಗರಸಭೆ ಸದಸ್ಯ ಕೆ ಹಿಂದೆ ಕೂಡ ಇಸ್ಪೀಟ್ ಜೂಜಾಟದಲ್ಲಿ ಒಮ್ಮೆ ಸಿಕ್ಕಿಬಿದ್ದಿದ್ದರು. ಇದೀಗ ಸಚಿವ ಡಿ ಸುಧಾಕರ್ ಅವರ ತವರು ಕ್ಷೇತ್ರದಲ್ಲಿ ತನ್ನ ಬೆಂಬಲಿಗರೇ ಇಂತಹ ದಂಧೆಗೆ ಇಳಿದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.