ನೀವು ದಿನನಿತ್ಯ ತುಪ್ಪಾ ತಿಂದೀರಾ? ನೀವು ಮಿನರಲ್ ವಾಟರೇ ಕುಡಿಯೋದಾ? ಹಾಗಿದ್ದರೇ ಹುಷಾರ್. ಆರೋಗ್ಯ ಇಲಾಖೆ ಇಂದು ಶಾಕಿಂಗ್ ವಿಚಾರವನ್ನು ಬಹಿರಂಗಪಡಿಸಿದೆ. ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತುಪ್ಪ ಹಾಗೂ ಮಿನರಲ್ ವಾಟರ್ ಅಸುರಕ್ಷತೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗದಲ್ಲಿನ ತುಪ್ಪದ ಮಾದರಿಗಳನ್ನು ಪರೀಕ್ಷೆ ನಡೆಸಿದೆ. ಇದರಲ್ಲಿ 49 ಸ್ಯಾಂಪಲ್ಸ್ ಪರೀಕ್ಷೆಗೆ ಒಳಪಟ್ಟಿದ್ದು, ಎಲ್ಲವೂ ಸುರಕ್ಷಿತಲ್ಲ ಅನ್ನೋದನ್ನು ತಿಳಿದು ಬಂದಿದೆ. 296 ಮಿನೆರಲ್ ವಾಟರ್ ಬಾಟೆಲ್ ಸ್ಯಾಂಪಲ್ಸ್ ಮಾಡಲಾಗಿತ್ತು. ಈ ಪೈಕಿ 72 ನೀರಿನ ಬಾಟೆಲ್ ಸುರಕ್ಷಿತವಾಗಿದ್ದು, 95 ಅಸುರಕ್ಷಿತವಲ್ಲ ಹಾಗೂ 88 ಕಳಪೆ ನೀರಿನ ಬಾಟೆಲ್ ಎಂದು ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.