ಭಾರತ ದೇಶ ಚಿನ್ನವನ್ನ ಖರೀದಿಸುವಲ್ಲಿ ವಿಶ್ವದ ಅತಿ ದೊಡ್ಡ ಎರಡನೇ ದೇಶವಾಗಿದೆ. ಮೊದಲನೇ ಸ್ಥಾನದಲ್ಲಿ ಚೀನಾ ಇದೆ. ನಿಜಕ್ಕೆ ಸ್ಥಳೀಯ ಪೂರೈಕೆಗಿಂತ ಹೆಚ್ಚಿನ ಪ್ರಮಾಣದ ಚಿನ್ನ ಭಾರತಕ್ಕೆ ಬೇಕಾಗುತ್ತೆ. ಎಲ್ಲರಿಗೂ ಗೊತ್ತಿರುವಂತೆ, ಭಾರತ ಅಗತ್ಯವಿರುವ ಚಿನ್ನವನ್ನು ಆಮದು ಮಾಡಿಕೊಳ್ಳುವುದರಿಂದ, ಮರುಬಳಕೆ ಮಾಡಿಕೊಳ್ಳುವುದರಿಂದ ಪೂರೈಸಿಕೊಳ್ತಿದೆ. ಈ ಚಿನ್ನದ ಧಾರಣೆಯನ್ನ ಅಂತಾರಾಷ್ಟ್ರೀಯ ಬೆಲೆಗಳ ಜೊತೆ, ಆಮದು ಸುಂಕ ಮತ್ತು ಇತರೆ ತೆರಿಗೆಗಳು ಪ್ರಭಾವ ಬೀರುವಂತೆ ಮಾಡುತ್ತವೆ.
ಆಸ್ಪತ್ರೆ ನಿರ್ಮಾಣಕ್ಕೆ ಮುಂದಾದ ಪ್ರಭಾಸ್…ಲವ್ ಯೂ ʼಡಾರ್ಲಿಂಗ್ʼ ಎಂದ ಫ್ಯಾನ್ಸ್!
ಏಪ್ರಿಲ್ 17 ಗುರುವಾರದ ವೇಳೆಗೆ, ಭಾರತದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1,140 ರೂ. ಏರಿಕೆಯಾಗಿದೆ. ಅಂದ್ರೆ ಈಗ 10 ಗ್ರಾಂಗೆ 97,310 ರೂ ಬೆಲೆ ಇದೆ. 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1,050 ರೂ. ಏರಿಕೆಯಾಗಿದೆ. ಈಗ ಇದರ 10 ಗ್ರಾಂ ಬೆಲೆ 89,200 ರೂ. ಆಗಿದೆ. ಅದೇ ರೀತಿ, 18 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 860 ರೂ. ಏರಿಕೆಯಾಗಿದ್ದು.. ಇದರ 10 ಗ್ರಾಂ ಬೆಲೆ 72,990 ರೂ. ತಲುಪಿದೆ.
ಚಿನ್ನದ ದರದಲ್ಲಿನ ಇಷ್ಟೊಂದು ದೊಡ್ಡ ಏರಿಕೆಗೆ ಹಲವು ಅಂಶಗಳಿವೆ. ಅವುಗಳಲ್ಲಿ ಪ್ರಮುಖವಾದದ್ದು ಅಮೆರಿಕಾ-ಚೀನಾ ವ್ಯಾಪಾರ ಯುದ್ಧ, ಈ ಎರಡೂ ದೇಶಗಳು ಪರಸ್ಪರ ಸುಂಕಗಳನ್ನು ವಿಧಿಸುತ್ತಿವೆ. ಮಾರುಕಟ್ಟೆಯಲ್ಲಿನ ಈ ಸಂದಿಗ್ಧತೆ, ಎರಡು ದೇಶಗಳ ಆರ್ಥಿಕತೆ ಬಂಗಾರವನ್ನ ಅಂಬರಕ್ಕೇರುವಂತೆ ಮಾಡಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 89,200 ರೂ. ಆಗಿದ್ದರೆ, 24 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 97,310 ರೂ. ಏರಿಕೆಯಾಗಿದೆ. ಈ ವರ್ಷ ದೇಶೀಯ ಸ್ಪಾಟ್ ಚಿನ್ನದ ಬೆಲೆಗಳು ಶೇಕಡಾ 24 ರಷ್ಟು ಏರಿಕೆಯಾಗಿವೆ.