ಇತ್ತೀಚಿನ ಕೆಲ ದಿನಗಳ ಏರಿಕೆ ನೋಡಿ, ಎಲ್ಲರ ಬಾಯಲ್ಲೂ ಗೋಲ್ಡ್ ರೇಟ್‌ನದ್ದೇ ಮಾತಾಗಿದೆ. ಏನಪ್ಪಾ, ಹೀಗೆ ದಿನ ದಿನ ಏರಿಕೆಯಾಗ್ತಿದೆ, ಮದುವೆ, ಹಬ್ಬಗಳಿಗೆ ಖರೀದಿ ಮಾಡೋದು ಹೇಗೆ ಅನ್ನೋ ಚಿಂತೆ ಕಾಡ್ತಿದೆ. ಕೆಲ ವರದಿಗಳಂತೂ ಮುಂದಿನ ವರ್ಷ ಮುಗಿಯುವುದರಲ್ಲಿ ಬಂಗಾರದ ಬೆಲೆ ಎಷ್ಟಾಗುತ್ತದೆ ಎಂದು ಊಹಿಸೋದು ಕೂಡ ಕಷ್ಟ ಎನ್ನುತ್ತಿವೆ.
ದೆಹಲಿಯಲ್ಲಿ ಚಿನ್ನದ ಬೆಲೆಯೂ 1,650 ರೂಪಾಯಿ ಏರಿಕೆಯಾಗಿದ್ದು 1 ಲಕ್ಷ ರೂಪಾಯಿಗೆ ಇನ್ನೊಂದು ಹೆಜ್ಜೆ ಮಾತ್ರ ಬಾಕಿ ಇದೆ.
ಅಖಿಲ ಭಾರತ ಸರಾಫಾ ಸಂಘದ ನಂತೆ ದೆಹಲಿಯಲ್ಲಿ ಶೇಕಡಾ 99.9 ರಷ್ಟು ಶುದ್ಧತೆಯ ಚಿನ್ನವು 10 ಗ್ರಾಂಗೆ 99,800 ರೂಪಾಯಿ ಆಗಿದೆ. ಕಳೆದ ಶುಕ್ರವಾರ ಇದರ ಬೆಲೆಯಲ್ಲಿ 20 ರೂಪಾಯಿ ಕಡಿಮೆಯಾಗಿ 10 ಗ್ರಾಂ ಚಿನ್ನಕ್ಕೆ 98,150 ರೂಪಾಯಿ ಇತ್ತು. ಆದರೆ ಇದೀಗ ಏಕಾಏಕಿ 1,650 ರೂಪಾಯಿ ಏರಿಕೆ ಆಗಿದ್ದರಿಂದ ಬಂಗಾರವೂ 1 ಲಕ್ಷ ರೂಪಾಯಿ ತಲುಪಲು ಕೇವಲ 200 ರೂಪಾಯಿ ಮಾತ್ರ ಬೇಕಿದೆ ಅಷ್ಟೇ.
ಬಂಗಾರವು ಸ್ಥಳೀಯ ಮಾರುಕಟ್ಟೆಗಳಲ್ಲಿ 1,600 ರೂಪಾಯಿ ಏರಿಕೆ ಆಗಿದ್ದು 10 ಗ್ರಾಂಗೆ 99,300 ರೂಪಾಯಿಗೆ ತಲುಪಿದೆ. ಬೆಳ್ಳಿಯ ಬೆಲೆಯಲ್ಲೂ ಭಾರೀ ಏರಿಕೆ ಆಗಿರುವುದು ಗ್ರಾಹಕರಿಗೆ ಇನ್ನಷ್ಟು ಬೇಸರದ ಸಂಗತಿ ಎನ್ನಬಹುದು. ಪ್ರತಿ ಕೆಜಿ ಸಿಲ್ವರ್ಗೆ 500 ರೂಪಾಯಿ ಏರಿಕೆಯಾಗಿದ್ದು ಈಗ 98,500 ರೂಪಾಯಿಗೆ ತಲುಪಿದೆ. ಏಪ್ರಿಲ್ 18 ರಂದು ಬೆಳ್ಳಿ ಬೆಲೆ ಕೆಜಿಗೆ 98,000 ರೂಪಾಯಿ ಇತ್ತು. ಆದರೆ ಇದರಲ್ಲೂ ದರ ಏರಿಕೆ ಆಗಿದೆ ಎಂದು ಹೇಳಲಾಗಿದೆ.