ಬೆಂಗಳೂರು: ಬಿಎಂಆರ್ಸಿಎಲ್ ಯಲ್ಲೋ ಲೈನ್ ಆರಂಭಿಸಲು ಮತ್ತಷ್ಟು ವಿಳಂಬ ಮಾಡುತ್ತಿದೆ. ಶೀಘ್ರ ಆರಂಭಿಸುವಂತೆ ಪ್ರಯಾಣಿರು ಸೇರಿದಂತೆ ರಾಜಕೀಯ ನಾಯಕರಿಂದ ಒತ್ತಾಯಿಸಲಾಗಿತ್ತು. ಇದೀಗ ನಮ್ಮ ಮೆಟ್ರೋನಿಂದ ಸಿಹಿಸುದ್ದಿ ಸಿಕ್ಕಿದೆ. ಆಗಸ್ಟ್ 15ರ ಒಳಗೆ ಹಳದಿ ಮಾರ್ಗಕ್ಕೆ ಚಾಲನೆ ನೀಡಲಾಗುವುದು ಎಂದು ಬಿಎಂಆರ್ಸಿಎಲ್ ಎಂಡಿ ಮಹೇಶ್ವರ್ ರಾವ್ ಹೇಳಿದ್ದಾರೆ.
ಯೆಲ್ಲೊ ಲೈನ್ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅವರು, ನಮಗೆ ಎರಡು ಮನವಿ ಬಂದಿದೆ. ಯೆಲ್ಲೋ ಲೈನ್ ಆರಂಭ ಮಾಡೋಕೆ ಈಗಾಗಲೇ ಮೂರು ಕೋಚ್ ಬಂದಿದೆ. ಎಲ್ಲಾ ರೆಗ್ಯುಲಾರಿಟೀಸ್ ಒಂದು ತಿಂಗಳ ಒಳಗೆ ಆಗಬಹುದು ಎಂದು ಮಾಹಿತಿ ನೀಡಿದ್ದಾರೆ.
ಕುಂಬಳಕಾಯಿ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ? ಕಣ್ಣು, ಚರ್ಮ, ಕೂದಲು ಎಲ್ಲದಕ್ಕೂ ಮದ್ದು!
ಸೇಫ್ಟಿ ಟೆಸ್ಟ್ ಏಜೆನ್ಸಿ ಇದೆ. ಅವರು ಎಲ್ಲಾ ಚೆಕ್ ಮಾಡ್ತಾರೆ. ಮುಂದಿನ ವಾರದ ಒಳಗೆ ಸೇಫ್ಟಿ ಅಸೆಸ್ಮೆಂಟ್ ಟೆಸ್ಟ್ ಮುಗಿಯಬಹುದು. 17 ಕಿ.ಮೀನಲ್ಲಿ 17 ಸ್ಟೇಷನ್ ಇದೆ. ನಾವು ಸರ್ಕಾರದ ಮುಂದೆ ಹೋಗ್ತೇವೆ. ಎಲ್ಲಾ ಮಾಡೋದ ಅಥವಾ ಮೂರ್ನಾಲ್ಕು ಸ್ಟೇಷನ್ನಲ್ಲಿ ಮಾತ್ರ ಓಡ್ಸೋದಾ ನೋಡ್ತೀವಿ ಎಂದು ಹೇಳಿದ್ದಾರೆ. ನಾವು ಆಗಸ್ಟ್ ತಿಂಗಳಲ್ಲಿ ಎಷ್ಟು ಬೇಗ ಆಗುತ್ತೋ ಅಷ್ಟು ಬೇಗ ಚಾಲನೆ ಕೊಡ್ತೀವಿ. ಜಯನಗರದಲ್ಲಿ ಅಂಡರ್ ಪಾಸ್ಗೆ ಮನವಿ ಕೊಟ್ಟಿದ್ದಾರೆ. ಸರ್ಕಾರ ಫಂಡಿಂಗ್ ಕೊಡುತ್ತಾ ಅಥವಾ ಇಲ್ಲವಾ ಅನ್ನುವ ಬಗ್ಗೆ ನೋಡ್ಬೇಕು ಎಂದಿದ್ದಾರೆ.