ನವದೆಹಲಿ:; ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ತುಟ್ಟಿಭತ್ಯೆ ಶೇ.2 ರಷ್ಟು ಏರಿಕೆ ಮಾಡಲಾಗಿದೆ. ಯುಗಾದಿ ಹಬ್ಬದ ಹೊತ್ತಲ್ಲೇ ಈ ಸಿಹಿ ಸುದ್ದಿ ಸಿಕ್ಕಿದೆ. ತುಟ್ಟಿಭತ್ಯೆಯನ್ನು ಶೇ.2ರಷ್ಟು ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಹುಬ್ಬಳ್ಳಿ: ನೆನೆಗುದಿಗೆ ಬಿದ್ದ ಪ್ಲೈಓವರ್ ಕಾಮಗಾರಿ ಆರಂಭಕ್ಕೆ ಒತ್ತಾಯ!
ಈ ಮೂಲಕ ತುಟ್ಟಿಭತ್ಯೆ ಶೇ.53ರಿಂದ ಶೇ.55ಕ್ಕೇರುತ್ತದೆ. ತುಟ್ಟಿಭತ್ಯೆ ಹೆಚ್ಚಳದಿಂದಾಗಿ 1.5 ಕೋಟಿ ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರು ಅನುಕೂಲ ಪಡೆದುಕೊಳ್ಳಲಿದ್ದಾರೆ.
ಇನ್ನೂ ಕಳೆದ ವರ್ಷ ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಶೇ.50ರಿಂದ ಶೇ.53ಕ್ಕೇರಿಕೆಯಾಗಿತ್ತು. ಇದೀಗ ಸರ್ಕಾರ ಅದನ್ನು ಶೇ.2ರಷ್ಟು ಹೆಚ್ಚಿಸಲು ನಿರ್ಧರಿಸಿದೆ. ಈ ಡಿಎ ಇದೇ ಜನವರಿಯಿಂದ ಅನ್ವಯವಾಗಲಿದ್ದು, ಮಾರ್ಚ್ ತಿಂಗಳ ಸಂಬಳದಲ್ಲಿ ಮೂರು ತಿಂಗಳ ಅರಿಯರ್ಸ್ ಸೇರಿ ಖಾತೆಗೆ ಜಮೆಯಾಗಲಿದೆ.