ಬೆಂಗಳೂರು: ಇಂದು ಸಂಜೆ 7.30ಕ್ಕೆ ಚಿನ್ನಸ್ವಾಮಿಯಲ್ಲಿ ಬೆಂಗಳೂರು ಮತ್ತು ರಾಜಸ್ಥಾನ್ ತಂಡಗಳು ಸೆಣಸಾಟ ನಡೆಸಲಿವೆ. ಎರಡೂ ತಂಡಗಳು ಪ್ಲೇ–ಆಫ್ ಕನಸು ಕಾಣುತ್ತಿದ್ದು, ಗೆಲುವು ಯಾರಿಗೆ ಸಿಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಪ್ಲೇ–ಆಫ್ಗೆ ಹೋಗಬೇಕು ಅಂದ್ರೆ ಆರ್ಸಿಬಿ ಇವತ್ತಿನ ಪಂದ್ಯ ಗೆಲ್ಲಲೇಬೇಕಿದೆ.
ಈಗಾಗಲೇ 8 ಪಂದ್ಯಗಳಲ್ಲಿ ಐದು ಗೆದ್ದಿರುವ ಆರ್ಸಿಬಿ, ಪಾಯಿಂಟ್ಸ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಸಂಚಾರ ದಟ್ಟಣೆ ನಿರೀಕ್ಷಿಸಲಾಗಿದೆ. ಕ್ವೀನ್ಸ್ ರಸ್ತೆ, ಎಂಜಿ ರಸ್ತೆ ಮುಂತಾದ ಪ್ರಮುಖ ರಸ್ತೆಗಳಲ್ಲಿ ಭಾರೀ ಸಂಚಾರ ದಟ್ಟಣೆಯಾಗುವ ಸಾಧ್ಯತೆ ಇದೆ.
ಫ್ರಿಡ್ಜ್ ನಲ್ಲಿ ಈ ಹಣ್ಣುಗಳನ್ನು ಇಡ್ತಿದ್ದೀರಾ!? ಇದರಿಂದ ದೇಹಕ್ಕಾಗುವ ಹಾನಿ ಎಷ್ಟು ಗೊತ್ತಾ!?
ಅದಲ್ಲದೆ ಐಪಿಎಲ್ ಪಂದ್ಯಗಳ ದಿನ ಮೆಟ್ರೋ ಸೇವೆಯನ್ನು ತಡ ರಾತ್ರಿ 12.30ರ ವರೆಗೆ ವಿಸ್ತರಿಸಲಾಗಿದೆ ಎಂದು ಬಿಎಂಆರ್ಸಿಎಲ್ ಈ ಹಿಂದೆಯೇ ತಿಳಿಸಿದೆ. ಈ ಹಿಂದಿನ ಪಂದ್ಯಗಳ ವೇಳೆಯೂ ಮೆಟ್ರೋ ರೈಲು ಸಂಚಾರ ಅವಧಿ ವಿಸ್ತರಣೆಯಾಗಿತ್ತು. ಎಲ್ಲಾ ನಾಲ್ಕು ಟರ್ಮಿನಲ್ಗಳಿಂದ, ಅಂದರೆ ವೈಟ್‌ಫೀಲ್ಡ್ (ಕಾಡುಗೋಡಿ), ಚಲ್ಲಘಟ್ಟ ರೇಷ್ಮೆ ಸಂಸ್ಥೆ ಮತ್ತು ಮಾದಾವರ ಮೆಟ್ರೋ ನಿಲ್ದಾಣಗಳಿಂದ ಕೊನೆಯ ಮೆಟ್ರೋ ರೈಲು ಸೇವೆಯನ್ನು ರಾತ್ರಿ 12.30ರ ವರೆಗೆ ವಿಸ್ತರಿಸಲಾಗಿದೆ.
ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ನಿಂದ ಎಲ್ಲಾ ನಾಲ್ಕು ದಿಕ್ಕುಗಳ ಕಡೆಗೆ ಕೊನೆಯ ರೈಲು ಮಧ್ಯರಾತ್ರಿ 01.15 ಕ್ಕೆ ಹೊರಡಲಿದೆ ಎಂದು ಬಿಎಂಆರ್ಸಿಎಲ್ ಪ್ರಕಟಣೆ ತಿಳಿಸಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈವರೆಗೆ ಆಡಿರುವ ಎಂಟು ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಗೆದ್ದಿದೆ. ಆದರೆ, ತವರಿನಲ್ಲಿ ಆಡಿರುವ ಎಲ್ಲ ಪಂದ್ಯಗಳಲ್ಲಿ ಸೋಲನುಭವಿಸಿದೆ.