ಬೆಂಗಳೂರು: ಕಳೆದೊಂದು ವಾರದಿಂದ ಚಿನ್ನದ ಬೆಲೆ ಸಾಕಷ್ಟು ಏರಿಕೆ ಕಾಣುತ್ತಿತ್ತು. ಇವತ್ತಿನ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ. ನೀವು ಚಿನ್ನ ಖರೀದಿಸುವ ಯೋಚನೆ ಮಾಡುತ್ತಿದ್ದೀರಾ, ಹಾಗಾದ್ರೆ ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನಕ್ಕೆ ಎಷ್ಟು ಬೆಲೆ ಇದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಕಳೆದ ಎರಡು ದಿನಗಳಿಂದ 10 ಗ್ರಾಂ ಚಿನ್ನದ ಬೆಲೆ ಏರಿಕೆಯಾಗಿತ್ತು.
ವಿಜ್ಞಾನಿಗಳನ್ನೇ ಅಚ್ಚರಿಗೊಳಿಸಿದೆ ಈ ಹಣ್ಣು..! ಎಷ್ಟೇ ಗಂಭೀರ ಕಾಯಿಲೆಯಾಗಿದ್ರೂ ಅದರಿಂದ ಸಿಗಲಿದೆ ಮುಕ್ತಿ
ಇದೀಗ 8,880 ರೂ ಇದ್ದ ಆಭರಣ ಚಿನ್ನದ ಬೆಲೆ 8,765 ರೂಗೆ ಇಳಿದಿದೆ. ಎರಡು ದಿನದಲ್ಲಿ ಬೆಲೆ ಗ್ರಾಮ್ಗೆ 280 ರೂನಷ್ಟು ತಗ್ಗಿದೆ. ಕಳೆದ ವಾರಾಂತ್ಯದಲ್ಲಿ ಬೆಲೆ 9,045 ರೂ ಇತ್ತು. ವಿದೇಶಗಳಲ್ಲೂ ಬಹುತೇಕ ಕಡೆ ಬೆಲೆ ತಗ್ಗಿದೆ. ಚೀನಾ ಮತ್ತು ಅಮೆರಿಕ ನಡುವಿನ ಟ್ಯಾರಿಫ್ ಕದನಕ್ಕೆ ಈಗ 90 ದಿನಗಳ ತಾತ್ಕಾಲಿಕ ಬ್ರೇಕ್ ಸಿಕ್ಕಿರುವುದರಿಂದ ಚಿನ್ನದ ಬೆಲೆ ಮತ್ತಷ್ಟು ಇಳಿಯುವ ನಿರೀಕ್ಷೆ ಇದೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 87,650 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 95,620 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,800 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 87,650 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 9,900 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ 13ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 87,650 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 95,620 ರೂ
- 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 71,720 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 980 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 87,650 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 95,620 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 980 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 87,650 ರೂ
- ಚೆನ್ನೈ: 87,650 ರೂ
- ಮುಂಬೈ: 87,650 ರೂ
- ದೆಹಲಿ: 87,800 ರೂ
- ಕೋಲ್ಕತಾ: 87,650 ರೂ
- ಕೇರಳ: 87,650 ರೂ
- ಅಹ್ಮದಾಬಾದ್: 87,700 ರೂ
- ಜೈಪುರ್: 87,800 ರೂ
- ಲಕ್ನೋ: 87,800 ರೂ
- ಭುವನೇಶ್ವರ್: 87,650 ರೂ