ಭಾರತದಲ್ಲಿ ಚಿನ್ನದ ಮೇಲಿನ ವ್ಯಾಮೋಹ ಎಂದಿಗೂ ಬದಲಾಗಲ್ಲ. ಇಲ್ಲಿ ಜನ ಕೇವಲ ಆಭರಣವಾಗಿ ನೋಡದೇ ಅದನ್ನು ಉಳಿತಾಯ, ಹೂಡಿಕೆಯಾಗಿ ನೋಡುತ್ತಾರೆ. ಹೀಗಾಗಿ ಚಿನ್ನ ದಿನೇ ದಿನೇ ತನ್ನ ಮೌಲ್ಯ ಹೆಚ್ಚಿಸಿಕೊಂಡು ಗಗನಕ್ಕೇರುತ್ತಿದೆ. ಬಹಳ ಹಿಂದೆ ಭಾರತೀಯರಿಗೆ ಈ ಚಿನ್ನ, ಬೆಳ್ಳಿ ವಸ್ತುಗಳನ್ನು ಹೆಚ್ಚು ಆಭರಣವಾಗಿ ಮಾತ್ರ ಹೆಚ್ಚು ಬಳಸುತ್ತಿದ್ದರು.
ಆದರೆ ಈಗ ಚಿನ್ನ ಕೇವಲ ಅಲಂಕಾರಿಕ ವಸ್ತುವಾಗಿ ಉಳಿದಿಲ್ಲ. ಬದಲಿಗೆ ಬಂಗಾರವನ್ನು ಈಗ ಬಾಂಡ್ ರೂಪದಲ್ಲಿ, ಷೇರು ರೂಪದಲ್ಲಿ ಹೂಡಿಕೆ-ಉಳಿತಾಯವಾಗಿ ಇಡುತ್ತಿದ್ದಾರೆ. ಇದೇ ಕಾರಣಕ್ಕೆ ಗ್ರಾಹಕರು ಚಿನ್ನ-ಬೆಳ್ಳಿ ದರ ಎಷ್ಟೇ ಏರಿದ್ದರೂ ತಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಇವುಗಳನ್ನು ಖರೀದಿ ಮಾಡುತ್ತಾರೆ.
ಮಾವಿನಹಣ್ಣನ್ನು ರಾತ್ರಿ ವೇಳೆ ತಿಂತೀರಾ!? ಹಾಗಿದ್ರೆ ಈ ಸುದ್ದಿ ಮಿಸ್ ಮಾಡ್ದೆ ನೋಡಿ!
ಇಂದು ಚಿನ್ನದ ಬೆಲೆ ಗ್ರಾಮ್ಗೆ 62 ರೂನಷ್ಟು ಕುಸಿತ ಆಗಿದೆ. ಒಂದು ಗ್ರಾಮ್ಗೆ 9,002 ರೂ ಇದ್ದ 22 ಕ್ಯಾರಟ್ ಚಿನ್ನದ ಬೆಲೆ 8,940 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 9,753 ರೂ ಆಗಿದೆ. ಬೆಳ್ಳಿ ಬೆಲೆಯೂ ಅಲ್ಪ ಇಳಿಕೆ ಕಂಡಿದೆ. ವಿದೇಶಗಳಲ್ಲೂ ಚಿನ್ನದ ಬೆಲೆಯಲ್ಲಿ ತುಸು ಮಟ್ಟಿಗಿನ ಇಳಿಕೆ ಆಗಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 89,400 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 97,530 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,180 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 89,400 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 10,180 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಏಪ್ರಿಲ್ 28ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 89,400 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 97,530 ರೂ
- 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 73,150 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 1,018 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 89,400 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 97,530 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 1,018 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 89,400 ರೂ
- ಚೆನ್ನೈ: 89,400 ರೂ
- ಮುಂಬೈ: 89,400 ರೂ
- ದೆಹಲಿ: 89,550 ರೂ
- ಕೋಲ್ಕತಾ: 89,400 ರೂ
- ಕೇರಳ: 89,400 ರೂ
- ಅಹ್ಮದಾಬಾದ್: 89,450 ರೂ
- ಜೈಪುರ್: 89,550 ರೂ
- ಲಕ್ನೋ: 89,550 ರೂ
- ಭುವನೇಶ್ವರ್: 89,400 ರೂ