ಫಾರಿನ್ ನಲ್ಲಿ ಓದಬೇಕು ಎಂಬ ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು, 1 ಕೋಟಿವರೆಗೂ ಎಜುಕೇಷನ್ ಲೋನ್ ಸಿಗಲಿದೆ. ಫಾರೀನ್ಗೆ ಹೋಗಿ ಓದೋದು ದೊಡ್ಡ ಕೆಲಸವಲ್ಲ. ಆದರೆ, ನೀವು ಅದಕ್ಕಾಗಿ ಹಣ ಹೊಂದಿಸೋದು ಭಾರೀ ದೊಡ್ಡ ಕೆಲಸ. ನೀವು ಫಾರೀನ್ ಎಜುಕೇಷನ್ ಲೋನ್ ಪಡೆಯೋದ ಮುನ್ನ ಒಂದಷ್ಟು ಅಂಶಗಳನ್ನು ಅರ್ಥ ಮಾಡಿಕೊಳ್ಳಬೇಕು. ನಿಮ್ಮ ಓದಿಗೆ ಬೇಕಿರೋ ಹಣ ಎಷ್ಟು? ಅದಕ್ಕಾಗಿ ನೀವು ಎಷ್ಟು ಬಡ್ಡಿ ಕಟ್ಟಬೇಕು? ಅನ್ನೋ ಲೆಕ್ಕ ಇರಬೇಕು. ಇಂಟ್ರೆಸ್ಟ್ ರೇಟ್, ರೀಪೇಮೆಂಟ್ ಟೈಮ್, ಗ್ರೇಸ್ ಪಿರಿಯಡ್ ಎಲ್ಲದರ ಬಗ್ಗೆ ತಿಳಿದುಕೊಳ್ಳುವುದು ಬಹಳ ಅಗತ್ಯ.
ಇಂದು ಮನ್ಮುಲ್ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ: ಅಧಿಕಾರದ ಗದ್ದುಗೆ ಹಿಡಿಯಲು ಕಾಂಗ್ರೆಸ್ ಸಿದ್ಧತೆ!
ಹೆಚ್ಚಿನ ವ್ಯಾಸಂಗಕ್ಕೆ ಎಂದು ವಿದೇಶಕ್ಕೆ ಹೋಗಲು ಬಯಸುವ ವಿದ್ಯಾರ್ಥಿಗಳಿಗೆ ಸಾಲದ ರೂಪದಲ್ಲಿ ನೀಡುವ ಹಣ ಸಹಾಯವನ್ನು Education loan ಎನ್ನಲಾಗುತ್ತದೆ. ಸಾಮಾನ್ಯವಾಗಿ ಇದು ಭಾರತದ ಎಲ್ಲಾ ಪ್ರಮುಖ ಬ್ಯಾಂಕುಗಳಲ್ಲಿ ಈ ರೀತಿಯ ಸೇವೆ ಲಭ್ಯವಿದೆ. ಈ ರೀತಿಯ ಸಾಲದ ಮೇಲಿನ ಬಡ್ಡಿ 8.1 ಪ್ರತಿಶತದಿಂದ ಶುರುವಾಗಿ 16 ಪ್ರತಿಶತದ ವೆರೆಗೂ ಹೋಗುತ್ತದೆ.
ವಿದ್ಯಾಭ್ಯಾಸ ಮುಗಿದ ನಂತರ ಆರು ತಿಂಗಳಿನಿಂದ, ಹನ್ನೆರೆಡು ತಿಂಗಳವರೆಗೆ ಕೆಲಸ ಹುಡುಕಿಕೊಳ್ಳಲು ಕೂಡ ಸಮಯ ನೀಡಲಾಗುತ್ತದೆ. ಸಾಲ ಮರು ವಾಪಸಾತಿ ಶುರುವಾಗುವುದು ಕೆಲಸ ಸಿಕ್ಕ ನಂತರ ಅಥವಾ ಕೋರ್ಸ್ ಮುಗಿದ 6/12 ತಿಂಗಳ ನಂತರ. ಅಂದರೆ ಓದು ಮುಗಿದ ನಂತರ ಕೇವಲ ಎರಡು ತಿಂಗಳಲ್ಲಿ ಕೆಲಸ ಸಿಕ್ಕರೆ ಸಾಲ ಮರುಪಾವತಿ ಕೆಲಸ ಸಿಕ್ಕ ತಿಂಗಳಿಂದ ಶುರುವಾಗುತ್ತದೆ. ಕೆಲಸ ಸಿಗದೇ ಹೋದರೂ ಕೂಡ ಗರಿಷ್ಟ 12 ತಿಂಗಳ ಕಾಲಾವಕಾಶವಿರುತ್ತದೆ. ಇದು ಮುಗಿದ ನಂತರ ಸಾಲ ವಾಪಸಾತಿ ಪ್ರಕ್ರಿಯೆ ಶುರುವಾಗುತ್ತದೆ.
ಪಿಯುಸಿ ನಂತರ ಪದವಿ ಶಿಕ್ಷಣ ಪಡೆಬೇಕು, ಪದವಿ ನಂತರ ಮಾಸ್ಟರ್ಸ್ ಪದವಿ ಪಡೆಯಬೇಕು ಅನ್ನೋರಿಗೆ ಎಜುಕೇಷನ್ ಲೋನ್ ನೀಡಲಾಗುತ್ತದೆ. ವೃತ್ತಿ ನಿಪುಣತೆ ಹೆಚ್ಚಿಸಿಕೊಳ್ಳಲು ಯಾವುದಾದ್ರೂ ಸರ್ಟಿಫಿಕೇಷನ್ ಕೋರ್ಸ್ ಮಾಡೋದಾದ್ರೂ ಲೋನ್ ಸಿಗುತ್ತೆ. ಪೋಸ್ಟ್ ಗ್ರ್ಯಾಜುಯೆಟ್ ಡಿಪ್ಲೋಮ, ವೊಕೇಷನಲ್ ಟ್ರೈನಿಂಗ್ ಕೋರ್ಸ್ಗಳು, ಡಾಕ್ಟೋರಲ್ ಪ್ರೋಗ್ರಾಮ್ಸ್, ನರ್ಸರಿ ಇಂದ ಉನ್ನತ ವ್ಯಾಸಂಗದ ವರೆಗೆ ಎಲ್ಲಾ ರೀತಿಯ ಶೈಕ್ಷಣಿಕ ಸಾಲವನ್ನು ಪೋಷಕರು ಮಕ್ಕಳ ಪರವಾಗಿ ಕೂಡ ಪಡೆಯಬಹುದು.
ಬರೋಬ್ಬರಿ 1 ಕೋಟಿವರೆಗೂ ಎಜುಕೇಷನ್ ಲೋನ್ ಸಿಗುತ್ತೆ. ಜೊತೆಗೆ ಸಾಲವನ್ನು ಮರು ಪಾವತಿ ಮಾಡಲು ನೀಡುವ ಅವಧಿ ಕೂಡ 15 ರಿಂದ 20 ವರ್ಷದ ವರೆಗೂ ನೀಡಲಾಗುತ್ತದೆ. ಹೀಗೆ ಪಡೆದ ಸಾಲದ ಮೊತ್ತವನ್ನು ಕೆಳಗಿನ ಖರ್ಚುಗಳಿಗೆ ಬಳಸಿಕೊಳ್ಳಬಹುದು. ಬೇರೆ ರೀತಿಯ ಖರ್ಚಿಗೆ ಅನುಮತಿ ಇರುವುದಿಲ್ಲ.
ಟ್ಯೂಷನ್ ಫೀಸ್, ಹಾಸ್ಟೆಲ್ ಫೀಸ್, ಊಟ , ತಿಂಡಿ, ಉಳಿದುಕೊಳ್ಳಲು ನೀಡುವ ಸೌಲಭ್ಯ ಎಲ್ಲವೂ ಸೇರಿಕೊಳ್ಳುತ್ತದೆ. ವಿದ್ಯಾರ್ಥಿ ವಿದೇಶದಲ್ಲಿ ಇದ್ದಾಗ ಅಲ್ಲಿಗೆ ಹೋಗಿ ಬರಲು ಬೇಕಾಗುವ ವಿಮಾನದ ಖರ್ಚು, ಭಾರತದ ಇತರ ಭಾಗದಲ್ಲಿದ್ದರೆ ಪ್ರಯಾಣದ ಖರ್ಚು, ಆರೋಗ್ಯ ಮತ್ತು ಜೀವ ವಿಮೆ ಖರ್ಚು, ವಿದ್ಯಾಭ್ಯಾಸಕ್ಕೆ ಬೇಕಾಗುವ ಪೆನ್ನು , ಪುಸ್ತಕ ಮತ್ತಿತರೇ ಪರಿಕರಗಳನ್ನು ಕೊಳ್ಳಲು ಬೇಕಾಗುವ ಹಣ, ಲ್ಯಾಬೊರೇಟರಿ, ಲೈಬ್ರರಿ ಖರ್ಚುಗಳು, ಕೋರ್ಸ್ ಮುಗಿಸಲು ಅವಶ್ಯಕವಾಗುವ ಲ್ಯಾಪ್ ಟ್ಯಾಪ್ , ಕಂಪ್ಯೂಟರ್ , ಮೊಬೈಲ್ ಇನ್ನಿತರೇ ಪರಿಕರಗಳು, ಶಾಲೆ ಅಥವಾ ಕಾಲೇಜಿನಲ್ಲಿ ಕೇಳುವ ಯಾವುದೇ ರೀತಿಯ ವಾಪಸ್ಸು ನೀಡುವ ಸೆಕ್ಯುರಿಟಿ ಡೆಪಾಸಿಟ್ ಮೊತ್ತ, ಪ್ರವೇಶ ಪಡೆದ ಕೋರ್ಸ್ ಮುಗಿಸಲು ಬೇಕಾಗುವ ಇನ್ನ್ಯಾವುದೇ ರೀತಿಯ ಪರಿಕರ ಅಥವಾ ಖರ್ಚು ಕೂಡ ಈ ಹಣದಲ್ಲಿ ಮಾಡಬಹುದಾಗಿದೆ.