ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ದೀ ನ್ಯಾಷನಲ್ ಹೈ ಸ್ಪೀಡ್ ಟ್ರೈನ್ ಕಾರ್ಪೊರೆಷನ್ ಲಿಮಿಟೆಡ್ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಕೆಯು ಈಗಾಗಲೇ ಆರಂಭವಾಗಿದೆ. ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ, ಅರ್ಜಿ ಸಲ್ಲಿಕೆ ಮಾಡಬಹುದು. ಈ ನೇಮಕಾತಿ ಹೈ-ಸ್ಪೀಡ್ ರೈಲು ವಲಯದಲ್ಲಿ ವೃತ್ತಿಜೀವನ ಆರಂಭಿಸಲು ಬಯಸುವ ಅಭ್ಯರ್ಥಿಗಳಿಗೆ ಅತ್ಯುತ್ತಮ ಅವಕಾಶ ಆಗಿದೆ. ಎಷ್ಟು ಉದ್ಯೋಗಗಳು ಇವೆ, ವಿದ್ಯಾರ್ಹತೆ ಏನು, ವಯೋಮಿತಿ, ಅರ್ಜಿ ಶುಲ್ಕ ಸೇರಿ ಇತರೆ ಮಾಹಿತಿ ಇಲ್ಲಿದೆ. ತಾಂತ್ರಿಕ ಮತ್ತು ವ್ಯವಸ್ಥಾಪಕ ಎರಡೂ ಕ್ಷೇತ್ರಗಳಲ್ಲಿ ಹುದ್ದೆಗಳನ್ನು ಸದ್ಯಕ್ಕೆ ಭರ್ತಿ ಮಾಡಲಾಗುತ್ತಿದೆ.
ಹುದ್ದೆಗೆ ನೇಮಕ ಆದವರಿಗೆ ಸಂಬಳ?
40,000 ದಿಂದ 1,60,000 ರೂಪಾಯಿಗಳು (ಹುದ್ದೆಗಳಿಗೆ ತಕ್ಕಂತೆ ಸಂಬಳ ಇದೆ)
ಹುದ್ದೆಯ ಹೆಸರು, ಎಷ್ಟು ಕೆಲಸಗಳು ಇವೆ?
ಜೂನಿಯರ್ ಟೆಕ್ನಿಕಲ್ ವ್ಯವಸ್ಥಾಪಕ (ಸಿವಿಲ್)- 35 ಉದ್ಯೋಗಗಳು
ಜೂನಿಯರ್ ಟೆಕ್ನಿಕಲ್ ವ್ಯವಸ್ಥಾಪಕ (ಎಲೆಕ್ಟ್ರಿಕಲ್)- 17 ಹುದ್ದೆಗಳು
ಜೂನಿಯರ್ ಟೆಕ್ನಿಕಲ್ ವ್ಯವಸ್ಥಾಪಕ (ಎಸ್ಎನ್ಟಿ)- 3 ಉದ್ಯೋಗಗಳು
ಜೂನಿಯರ್ ಟೆಕ್ನಿಕಲ್ ವ್ಯವಸ್ಥಾಪಕ (ಆರ್ಎಸ್)- 4 ಕೆಲಸಗಳು
ಜೂನಿಯರ್ ಟೆಕ್ನಿಕಲ್ ವ್ಯವಸ್ಥಾಪಕ (ಎಸ್ಎನ್ಟಿ)- 3 ಉದ್ಯೋಗಗಳು
ಅಸಿಸ್ಟೆಂಟ್ ಟೆಕ್ನಿಕಲ್ ವ್ಯವಸ್ಥಾಪಕ (ಆರ್ಟಿಕಲ್ಚರ್)- 8 ಹುದ್ದೆ
ಒಟ್ಟು ಹುದ್ದೆಗಳು– 72
ವಿದ್ಯಾರ್ಹತೆ ಏನು ಕೇಳಲಾಗಿದೆ?
ಬಿಇ, ಬಿಟೆಕ್, ಆರ್ಟಿಕಲ್ಚರ್ ಹಾಗೂ ಇವುಗಳಿಗೆ ಸಂಬಂಧಿಸಿದ ಕೋರ್ಸ್
ವಯಸ್ಸಿನ ಅರ್ಹತೆ
ಗರಿಷ್ಠ 35 ವರ್ಷದ ಒಳಗಿನವರಿಗೆ ಅವಕಾಶ
ಅರ್ಜಿ ಶುಲ್ಕ ಎಷ್ಟು ಇದೆ?
ಜನರಲ್, ಇಡಬ್ಲುಎಸ್, ಒಬಿಸಿ ವರ್ಗಗಳಿಗೆ- 400 ರೂಪಾಯಿ
ಎಸ್ಸಿ, ಎಸ್ಟಿ, ಮಹಿಳೆಯರಿಗೆ ಶುಲ್ಕ ವಿನಾಯತಿ ಇದೆ