Close Menu
Ain Live News
    Facebook X (Twitter) Instagram YouTube
    Friday, June 20
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ರೇಷನ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್: ತಿದ್ದುಪಡಿ ಈಗ ಬಲು ಸುಲಭ!

    By AIN AuthorJanuary 29, 2025
    Share
    Facebook Twitter LinkedIn Pinterest Email
    Demo

    ಬೆಂಗಳೂರು:- ಪ್ರಮುಖ ದಾಖಲೆಗಳಲ್ಲಿ ಪಡಿತರ ಚೀಟಿ ಕೂಡ ಒಂದಾಗಿದೆ. ಇದರಿಂದ ಮಧ್ಯಮ ವರ್ಗದವರಿಗೆ ಕಡಿಮೆ ದರದಲ್ಲಿ ಪಡಿತರವನ್ನು ವಿತರಣೆ ಮಾಡಲಾಗುತ್ತದೆ. ಇದೇ ರೇಷನ್‌ ಕಾರ್ಡ್‌ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಆಗಾಗ ಹೊಸ ನಿಯಮಗಳನ್ನು ಜಾರಿ ಮಾಡುತ್ತಲೇ ಇರುತ್ತದೆ. ಹಾಗೆಯೇ ಇದೀಗ ಮಹತ್ವದ ಅಪ್ಡೇಟ್‌ವೊಂದನ್ನು ಕೊಟ್ಟಿದೆ.

    ದರ ಏರಿಕೆ ಅನಿವಾರ್ಯ: ಎಲ್ಲನೂ ಫ್ರೀ ಕೊಡೋಕೆ ಆಗಲ್ಲ: DCM ಡಿಕೆಶಿ!

    ಹೌದು, ರೇಷನ್ ಕಾರ್ಡ್ ಇರುವವರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಯಾವುದೇ ರೀತಿಯ ತಿದ್ದುಪಡಿ ಮಾಡುವುದು ಈಗ ಬಲು ಸುಲಭ ಎನ್ನಲಾಗಿದೆ.

    ಪ್ರತಿಯೊಬ್ಬರೂ ಆಧಾರ್ ಕಾರ್ಡ್ ಹೊಂದುವ ರೀತಿಯಲ್ಲಿ ರೇಷನ್ ಕಾರ್ಡ್ ಅನ್ನೂ ಹೊಂದಬೇಕಾಗುತ್ತದೆ. ಜೊತೆಗೆ ರೇಷನ್ ಕಾರ್ಡುಗಳಲ್ಲಿ ದೋಷವಿದ್ದರೆ ಪ್ರಯೋಜನ ಪಡೆಯಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ರೇಷನ್ ಕಾರ್ಡ್ ತಿದ್ದುಪಡಿಯನ್ನು ಸುಲಭಗೊಳಿಸಿದೆ.

    ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯಾಹಾರಗಳ ಸಚಿವಾಲಯವು ರೇಷನ್ ಕಾರ್ಡುಗಳಲ್ಲಿ ಏನಾದರೂ ತಿದ್ದುಪಡಿ ಇದ್ದರೆ, ಅಂದರೆ ಹೆಸರು, ಊರು ಮತ್ತಿತರ ಮಾಹಿತಿಗಳು ತಪ್ಪಾಗಿ ನಮೂದಾಗಿದ್ದರೆ ಅವುಗಳನ್ನು ಸರಿಪಡಿಸಬಹುದು. ತೀರಿಕೊಂಡಿರುವವರು ಮತ್ತು ಕುಟುಂಬ ಭಾಗವಾಗಿದ್ದರೆ ಅಂತವರ ಹೆಸರುಗಳನ್ನು ಹಾಲಿ ರೇಷನ್ ಕಾರ್ಡುಗಳಿಂದ ಡಿಲೀಟ್ ಮಾಡಬಹುದು. ಮದುವೆಯಾದವರು ಹೆಂಡತಿ ಹೆಸರನ್ನು ಮತ್ತು ಮಕ್ಕಳಾದ ಬಳಿಕ ಅವರ ಹೆಸರುಗಳನ್ನು ರೇಷನ್ ಕಾರ್ಡುಗಳಿಗೆ ಹೊಸದಾಗಿ ಸೇರಿಸಬಹುದು.

    ಸಾಮಾಜಿಕ ಜಾಲತಾಣದಲ್ಲಿ ಹೊಸದಾಗಿ ರೇಷನ್ ಕಾರ್ಡ್ ಪಡೆಯಲು ಮತ್ತು ತಿದ್ದುಪಡಿ ಮಾಡಲು ಜನವರಿ 31 ಕಡೆಯ ದಿನ ಎನ್ನುವ ಸುಳ್ಳು ಸುದ್ದಿಗಳು ಹರಿದಾಡಿದ್ದವು. ಇದರಿಂದಾಗಿ ಗ್ರಾಮ ಒನ್ ಕೇಂದ್ರಗಳ ಬಳಿ ಜನ ಸೇರಿ ಗೊಂದಲ ಉಂಟಾಗುತ್ತಿತ್ತು. ಇದನ್ನು ತಪ್ಪಿಸಲು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯಾಹಾರಗಳ ಇಲಾಖೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ಬಗ್ಗೆ ಸ್ಪಷ್ಟಿಕರಣ ನೀಡಿದೆ.

    ತಿದ್ದುಪಡಿಗೆ ಪ್ರತಿ ತಿಂಗಳು ಕೂಡ ಅವಕಾಶ ಕಲ್ಪಿಸಲಾಗಿದೆ. ಹಳೆಯ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮತ್ತಿತರ ದಾಖಲೆಗಳನ್ನು ಇಟ್ಟುಕೊಂಡು ಪ್ರತಿ ತಿಂಗಳ ಮೊದಲ ವಾರ ಗ್ರಾಮ ಒನ್ ಮತ್ತು ಬೆಂಗಳೂರು ಒನ್ ಕಚೇರಿಗಳಿಗೆ ಹೋದರೆ ಸುಲಭದಲ್ಲಿ ತಿದ್ದುಪಡಿ ಮಾಡಿಸಬಹುದು. ಅದು ಬಿಟ್ಟು ಯಾವಾಗಲೋ ಹೋಗಿ ನಮ್ಮ ಕೆಲಸ ಆಗಲಿಲ್ಲ ಎಂದು ಕೊರಗುವುದು ಬೇಡ ಎಂದು ಇಲಾಖೆ ತಿಳಿಸಿದೆ.

    Demo
    Share. Facebook Twitter LinkedIn Email WhatsApp

    Related Posts

    ನಿಯಮ ಉಲ್ಲಂಘನೆ: ಬೆಂಗಳೂರಿನ 17ಕ್ಕೂ ಹೆಚ್ಚು ಡ್ಯಾನ್ಸ್‌ ಬಾರ್‌ಗಳ ಮೇಲೆ ಖಾಕಿ ದಾಳಿ!

    June 20, 2025

    ಗ್ಯಾಸ್ ಸಿಲಿಂಡರ್ ಕದ್ದೊಯ್ದ ಖದೀಮ: ಹೆಲ್ಮೆಟ್ ಧರಿಸಿ ಕೃತ್ಯ!

    June 20, 2025

    ಓಮ್ನಿ ಕಾರುಗಳೇ ಇವರ ಟಾರ್ಗೆಟ್: ಖಾಕಿ ಬಲೆಗೆ ಬಿದ್ದ ಖದೀಮರ ಗ್ಯಾಂಗ್!

    June 20, 2025

    ನಿಮ್ಮ ಮನೆಯಲ್ಲಿ ಮನಿ ಪ್ಲಾಂಟ್ ಇದೆಯೇ..? ಹಾಗಿದ್ರೆ ಅಪ್ಪಿತಪ್ಪಿಯೂ ಈ ತಪ್ಪುಗಳನ್ನ ಮಾಡಬೇಡಿ.!

    June 20, 2025

    `UPI’ ಬಳಕೆದಾರರೇ ಎಚ್ಚರ.. ಈ ಆಪ್ಷನ್ ತಕ್ಷಣ ನಿಷ್ಕ್ರಿಯಗೊಳಿಸಿ, ಇಲ್ಲ ಅಂದ್ರೆ ನಿಮ್ಮ ಬ್ಯಾಂಕ್ ಖಾತೆ ಖಾಲಿ!

    June 20, 2025

    ಬೆಂಗಳೂರಿಗೆ ಭೇಟಿ ಕೊಟ್ಟ ಕೇಂದ್ರ ಸಚಿವ ಅಮಿತ್ ಶಾ: ಹೂಗುಚ್ಛ ನೀಡಿ ಸ್ವಾಗತಿಸಿದ ಬಿವೈ ವಿಜಯೇಂದ್ರ!

    June 19, 2025

    ವಸತಿ ಯೋಜನೆಯಲ್ಲಿ ಮುಸ್ಲಿಮರ ಮೀಸಲು ಹೆಚ್ಚಳ: ಇದು ಸಂವಿಧಾನಕ್ಕೆ ಮಾಡಿದ ಅಪಚಾರ – ಆರ್‌.ಅಶೋಕ್ ವಾಗ್ದಾಳಿ!

    June 19, 2025

    Breaking News: ಬೆಂಗಳೂರಿನ Pixies Spa ಮೇಲೆ CCB ದಾಳಿ: ವೇಶ್ಯವಾಟಿಕೆ ಶಂಕೆ, ಬಾಂಗ್ಲಾದೇಶದ ಯುವತಿ ಪತ್ತೆ!

    June 19, 2025

    ಇಸ್ರೇಲ್​​ ನಲ್ಲಿ ಸಿಲುಕಿದ್ದ 18 ಕನ್ನಡಿಗರು ತಾಯ್ನಾಡಿಗೆ ವಾಪಸ್: ಅಲ್ಲಿನ ಪರಿಸ್ಥಿತಿ ಬಗ್ಗೆ ಹೇಳಿದ್ದೇನು?

    June 19, 2025

    ರಸ್ತೆ ಬದಿಯ ಮರಗಳ ಸುತ್ತ ಹಾಕಲಾದ ಕಾಂಕ್ರೀಟ್, ಕಲ್ಲು ಮತ್ತು ಸಿಮೆಂಟ್ ಬ್ಲಾಕ್ ತೆರವಿಗೆ ಆದೇಶ: ಪ್ರೀತಿ ಗೆಹ್ಲೋಟ್!

    June 19, 2025

    ರಾಹುಲ್ ಗಾಂಧಿ ಜನ್ಮದಿನ: ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಂದ ನೇತ್ರದಾನ!

    June 19, 2025

    ರಾಜ್ಯಾದ್ಯಂತ ಪರಿಸರ ಸ್ನೇಹಿ ಹಾಲಿನ ಪ್ಯಾಕೇಟ್ ಪರಿಚಯಿಸುವ ಚಿಂತನೆ ಇದೆ: ಬಮೂಲ್ ನೂತನ ಅಧ್ಯಕ್ಷ ಡಿ ಕೆ ಸುರೇಶ್ ಹೇಳಿಕೆ !

    June 19, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.