ಬೆಂಗಳೂರು:- ಕಳೆದ 10ನೇ ತಾರೀಖು ಚಂದ್ರಲೇಔಟ್ ಠಾಣವ್ಯಾಪ್ತಿಯಲ್ಲಿ ಡಾಕ್ಟರ್ ಮನೆಗೆ ಬೆಂಕಿಯಿಟ್ಟ ಪುಂಡರು ಪೊಲೀಸ್ರ ಬಲೆಗೆ ಬಿದ್ದಿದ್ದಾರೆ. ಆದ್ರೆ ಬೊಮ್ಮಹಳ್ಳಿಯ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಆಪ್ತ ರವಿ ತಲೆ ಮರೆಸಿಕೊಂಡಿದ್ದಾನೆ.
ಕೆಲವರು ಕುತಂತ್ರ ಮಾಡಿ ದೂರು ಕೊಡಿಸಿದ್ದಾರೆ: ವಿಚಾರಣೆಯಲ್ಲಿ ಮನು ಹೇಳ್ತಿರೋದೇನು?
ವೈದ್ಯ ಗಂಗಾಧರ್ ಮನೆಗೆ ಬೆಂಕಿ ಇಡಲು ಕೊಲೆ ಕೇಸ್ ನಲ್ಲಿ ಜೈಲು ಸೇರಿದ್ದ ಪ್ರಜ್ವಲ್ , ರಾಕೇಶ್, ಸಚಿನ್ ಮತ್ತು ಜೀವನ್ ಚಂದ್ರಾ ಲೇಔಟ್ ಪೊಲೀಸ್ರು ಬಂಧಿಸಿದ್ದಾರೆ. ತಲೆಗೆ ಹೆಲ್ಮೆಟ್ಟ್ ಧರಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದ. ಆರೋಪಿಗಳಿಗೆ ಸುಪಾರಿ ನೀಡಿದ್ದು ಬಿಜೆಪಿ ಕಾರ್ಯಕರ್ತ ರವಿ ಅನ್ನೋದು ಗೊತ್ತಾಗಿದೆ. ಆದ್ರೆ ಈ ರವಿ ಯಾಕೆ ಸುಫಾರಿ ನೀಡಿದ್ದ ಅನ್ನೋದು ರವಿ ಬಂಧನದ ನಂತರವಷ್ಟೆ ಗೊತ್ತಾಗಬೇಕಿದೆ. ಇನ್ನೂ ಆರೋಪಿಗಳಿಗೆ 50 ಸಾವಿರ ಹಣ ನೀಡಿದ್ದ ರವಿ ವೈದ್ಯ ಗಂಗಾಧರ್ ಮನೆ ತೋರಿಸಿ ಬೆಂಕಿ ಹಚ್ಚಲು ಹೇಳಿದ್ನಂತೆ. ಇದಕ್ಕಾಗಿ ಆರೋಪಿಗಳು ಎಲೆಕ್ಟ್ರಾನಿಕ್ ಸಿಟಿಯಿಂದ 40 ಲೀಟರ್ ಪೆಟ್ರೋಲ್ ತಂದಿದ್ರಂತೆ. ಆದ್ರೆ ರವಿ ಯಾವ ಕಾರಣಕ್ಕೆ ವೈದ್ಯ ಗಂಗಾಧರ್ ಮನೆಗೆ ಬೆಂಕಿ ಇಡಲು ಹೇಳಿದ್ದ ಅನ್ನೋದು ಇನ್ನೂ ನಿಗೂಢವಾಗಿದೆ.