ದೇವನಹಳ್ಳಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಘರ್ಷಣೆಯಲ್ಲಿ ಬಾಗೇಪಲ್ಲಿ ಸಮೀಪದ ಆಂಧ್ರಪ್ರದೇಶದ ಗೋರಂಟ್ಲು ತಾಲೂಕಿನ ಕಲ್ಲಿಕೊಂಡ ಗ್ರಾಮದ ಮುರಳಿ ನಾಯಕ್ ವೀರ ಮರಣವನ್ನಪ್ಪಿದ್ದು, ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಮೃತನ ಪಾರ್ಥೀವ ಶರೀರ ಇಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದು,
ಏರ್ಪೋಟ್ ನ ಕಾರ್ಗೋ ಟರ್ಮಿನಲ್ ನಲ್ಲಿ ಯೋಧರಿಂದ ಅಂತಿಮ ನಮನಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಸೇನೆಯ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿ ಪಾರ್ಥಿವ ಶರೀರ ಆಂದ್ರಕ್ಕೆ ರವಾನಿಸಲಿದ್ದಾರೆ. ಯೋಧರ ಮರಣದ ಸುದ್ದಿ ತಿಳಿಯುತ್ತಿದ್ದಂತೆಯೇ ಗೋರಂಟ್ಲ ಮಂಡಲದ ಪುದಗುಂಡ್ಲಪಲ್ಲಿ ತಾಂಡಾದಲ್ಲಿ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.
ಚಾಣಕ್ಯನ ಪ್ರಕಾರ ಈ ಕೆಲಸ ಮಾಡಿದ್ರೆ ಸಾಕು ಜೀವನದ ಪ್ರತಿ ಹೆಜ್ಜೆಯಲ್ಲೂ ಸಿಗುತ್ತೆ ಸಂತೋಷ-ಯಶಸ್ಸು..!
ಹುತಾತ್ಮ ಮುರಳಿ ನಾಯಕ್ ಮನೆಗೆ ಆಂಧ್ರ ಸಮಾಜ ಕಲ್ಯಾಣ ಸಚಿವೆ ಸುಮಿತ್ರಮ್ಮ ಭೇಟಿ ನೀಡಿ ಕುಟುಂಬದವರನ್ನು ಸಂತೈಸಿದ್ದಾರೆ. ಭಾರತ ಮಾತೆಯ ವೀರಪುತ್ರ ಮುರಳಿ ನಾಯಕ್ ಹೆಸರು ಸೂರ್ಯ-ಚಂದ್ರರಿರುವ ತನಕವೂ ಇರುತ್ತದೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮುರಳಿ ನಾಯಕ್ ಕುಟುಂಬದ ಜೊತೆ ಆಂಧ್ರ ಸರ್ಕಾರ ನಿಲ್ಲುತ್ತದೆ ಎಂದರು. ಮುಖ್ಯಮಂತ್ರಿ ಚಂದ್ರ ಬಾಬುನಾಯ್ಡು ಸಹ ಸಂತ್ರಸ್ತ ಕುಟುಂಬಕ್ಕೆ ಕರೆ ಮಾಡಿ ಸಂತೈಸಿದ್ದಾರೆ.