Close Menu
Ain Live News
    Facebook X (Twitter) Instagram YouTube
    Friday, July 4
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಸರ್ಕಾರಿ ಸೇವೆಗಳನ್ನು ನೌಕರರು ಉತ್ತಮ ರೀತಿ ನಿರ್ವಹಿಸಿದ್ದಾರೆ -ಸಿ.ಎಸ್.ಷಡಾಕ್ಷರಿ

    By AIN AuthorNovember 6, 2023
    Share
    Facebook Twitter LinkedIn Pinterest Email
    Demo

    ಚಾಮರಾಜನಗರ;- ರಾಜ್ಯದಲ್ಲಿ ಸರ್ಕಾರಿ ಸೇವೆಗಳನ್ನು ನೌಕರರು ಉತ್ತಮವಾಗಿ ನಿರ್ವಹಿಸುತ್ತಾ ಬಂದಿದ್ದಾರೆ ಎಂದು ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದ್ದಾರೆ.

    ರಾಜ್ಯದಲ್ಲಿ ಸರ್ಕಾರಿ ಸೇವೆಗಳನ್ನು ನೌಕರರು ಉತ್ತಮವಾಗಿ ನಿರ್ವಹಿಸುತ್ತಾ ಬಂದಿದ್ದಾರೆ. ಜೊತೆಗೆ ನೌಕರರ ಮಕ್ಕಳ ಹೆಚ್ಚಿನ ವಿದ್ಯಾಭಾಸಕ್ಕೆ ಸಂಘದ ವತಿಯಿಂದ ಅನುಕೂಲಗಳನ್ನು ಮಾಡಲಾಗುತ್ತಿದೆ ವಿದ್ಯಾರ್ಥಿಗಳನ್ನು ಪ್ರೋತಾಹಿಸುವ ನಿಟ್ಟಿನಿಂದ ೨೦೨೦ನೇ ವರ್ಷದಿಂದ ನಗದು ಪ್ರತಿಭಾ ಪುರಸ್ಕಾರ ೬೦೦೦ ರಾಜ್ಯದ ಸರ್ಕಾರಿ ನೌಕರರ ಮಕ್ಕಳಿಗೆ ನೀಡುತ್ತಾ ಬಂದಿದ್ದೇವೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.

    ನಗರದ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಜಿಲ್ಲಾ ಘಟಕದ ವತಿಯಿಂದ ಚಾಮರಾಜನಗರ ಜಿಲ್ಲೆಯ ನೂತನ ಶಾಸಕರು, ಸಚಿವರಿಗೆ ಹಾಗೂ ಸರ್ಕಾರಿ ನೌಕರರ ಪ್ರತಿಭಾವಂತ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರವನ್ನು ನೀಡಿ ಅವರು ಮಾತನಾಡಿದರು.

    ಸಂಘನೆಗಳು ಜಿಲ್ಲೆಯಲ್ಲಿ ೧೩೮ ವಿದ್ಯಾರ್ಥಿಗಳು ೯೦ ಗಿಂತ ಹೆಚ್ಚು ಅಂಕಗಳನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಅಂತಹ ಮಕ್ಕಳನ್ನು ಗುರುತಿಸುವುದು ನಮ್ಮೆಲ್ಲರ ಕರ್ತವ್ಯ. ಒಂದು ಸಂಘವನ್ನು ಬೆಳೆಸುವುದು ಬಹಳ ಕಷ್ಟದ ಕೆಲಸ ರಾಜ್ಯದಲ್ಲಿಯೇ ಕರ್ನಾಟಕ ಸರ್ಕಾರಿ ನೌಕರರ ಸಂಘವು ನೌಕರರಿಗೆ ಅನುಕೂಲಗಳನ್ನು ಮಾಡುತ್ತ ಬಂದಿದೆ ವಿದ್ಯಾರ್ಥಿಗಳು ನಿಮಗೆ ಉತ್ತೇಜನ ನೀಡುವ ತಂದೆ, ತಾಯಿಯನ್ನು ಮರೆಯ ಬಾರದು ಎಂದು ಹೇಳಿದರು.

    ಮುಂದಿನ ದಿನಗಳಲ್ಲಿ ೭ನೇ ವೇತನ ಆಯೋಗವನ್ನು ಕೊಡಿಸುವ ನಿಟ್ಟಿನಲ್ಲಿ ಸಂಘವು ಶ್ರಮಿಸುತ್ತಿದೆ. ಈ ಸಂಘವು ೧೦೨ವರ್ಷಗಳಿಂದ ನೌಕರರ ಅಭಿವೃದ್ದಿಗೆ ಹೋರಾಟವನ್ನು ಮಾಡುತ್ತಲೇ ಬಂದಿದೆ. ಪ್ರತಿವರ್ಷವು ನೌಕರರು ನೀಡುವ ೨೦೦ರೂ ನಾಲ್ಕು ವರ್ಷದಲ್ಲಿ ೨೭ ಕೋಟಿರೂ ಉಳಿಸಲು ಕಾರಣವಾಗಿದೆ ಪ್ರತಿಯೊಬ್ಬ ಸದಸ್ಯರು ಸಂಘಟನೆಯನ್ನು ನಮ್ಮ ಕುಟುಂಬವೆಂದು ತಿಳಿಯಬೇಕು ಶಿಕ್ಷಕ ಸಂಘ ಬೇರೆಯಲ್ಲಿ ಅದುವೇ ಸರ್ಕಾರಿ ಸಂಘದ ಒಂದು ಭಾಗ ಎಲ್ಲರೂ ಜೊತೆಯಾಗಿ ಸಂಘದ ಕೆಲಸಗಳನ್ನು ಮಾಡಬೇಕು ಎಂದು ಹೇಳಿದರು.

    ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಕೊಳ್ಳೇಗಾಲ ಶಾಸಕರಾದ ಎ.ಆರ್. ಕೃಷ್ಣಮೂರ್ತಿ ರಾಜ್ಯದ ಸಮಗ್ರ ಅಭಿವೃದ್ದಿಗೆ ಬಹಳಷ್ಟು ಶ್ರಮಿಸುತ್ತಿದ್ದಾರೆ. ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗದಲ್ಲಿ ಪ್ರಮಾಣಿ ಕಥೆಯನ್ನು, ಮೌಲ್ಯಗಳನ್ನು ಬಯಸುತ್ತಾರೆ. ಇವತ್ತಿನಸ ಸಮಾಜದಲ್ಲಿ ಜವಾಬ್ದಾರಿವಾಗಿ ಸೇವೆಗಳನ್ನು ನೀಡುವುದು ಕಷ್ಟದ ಕೆಲಸ ದೇಶದ ಅಭಿವೃದ್ದಿಗೆ ಮಾಡಲು ಮೌಲ್ಯಗಳು, ಪ್ರಮಾಣಿಕವಾಗಿ ನಿರ್ವಹಿಸಬೇಕಾಗುತ್ತದೆ. ೪ ವರ್ಷಗಳಿಂದ ರಾಜ್ಯ ಸರ್ಕಾರಿ ನೌಕರರ ಸಂಘವು ಉತ್ತಮ ಕೆಲಸಗಳನ್ನು ಮಾಡುತ್ತ ಬಂದಿದೆ. ಯಾವುದೇ ಸಂಘಗಳು ಬೆಳೆಯಲು ಅಧ್ಯಕ್ಷರ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಚಾಮರಾಜನಗರ ಜಿಲ್ಲಾ ಸಂಘವು ವಿದ್ಯಾರ್ಥಿಗಳಿಗೆ ಪ್ರೊತ್ಸಾಹಿಸುವ ಕೆಲಸಗಳನ್ನು ಮಾಡುತ್ತಿದೆ ೧೩೮ ಜಿಲ್ಲೆಯ ವಿದ್ಯಾರ್ಥಿಗಳಿಗೆ ಗೌರವಿಸುತ್ತಿರುವುದು ಶ್ಲಾಘನೀಯ ಎಂದರು.

    ಚಾಮರಾಜನಗರ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಮಾತನಾಡಿ ಸರ್ಕಾರಿ ನೌಕರರ ಸಂಘ ಎಲ್ಲರಿಗೂ ಸ್ಪಂದಿಸುವಂತೆ ಇರಬೇಕು. ಜಿಲ್ಲೆ ಸಂಘವು ನೌಕರರಿಗೆ ಅನುಕೂಲಗಳನ್ನು ಮಾಡುತ್ತಿದೆ. ಜೊತೆಗೆ ರಾಜ್ಯಸ ಸಂಘದ ಬೆಂಬಲ ನಮ್ಮಸ ಜಿಲ್ಲೆಗೆ ಹೆಚ್ಚಿದೆ. ೨೩ ಕೋಟಿ ಅನುದಾನವನ್ನು ಪಡೆದು ರಾಜ್ಯದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ೧೦೦೦ರೂ ಗೌರವಸ ಧನ ನೀಡಿ ಪ್ರೋತಾಸಿಸುತ್ತಿದ್ದಾರೆ. ಬೇರೆ ರಾಜ್ಯ ಗಳಿಗಿಂತಸ ಕರ್ನಾಟಕ ರಾಜ್ಯದ ಸಂಘವು ನೌಕರರನ್ನು ಬೆಳೆಸುವ ಕಾರ್ಯಗಳನ್ನುಸ ಮಾಡುತ್ತಿದೆ ಎಂದರು.

    ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ಚಿದಂಬರ, ಕೇಂದ್ರ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಶ್ರೀನಿವಾಸ್, ಖಜಾಂಚಿ ಆರ್.ಶ್ರೀನಿವಾಸ್, ಕಾಐಆಧ್ಯಕ್ಷ ಮಲ್ಲಿಕಾರ್ಜನ ಬಿ.ಬಳ್ಳಾರಿ, ಗೌರವಾಧ್ಯಕ್ಷ ಬಿ.ಹೆಚ್.ವೆಂಕಟೇಶಯ್ಯ, ಹಿರಿಯ ಉಪಾಧ್ಯಕ್ಷ ಎಂ.ವಿ.ರುದ್ರಪ್ಪ, ಬಸವರಾಜು,ಉಪಾಧ್ಯಕ್ಷ ಆರ್.ಮೋಹನ್‌ಕುಮಾರ್, ಚಾಮರಾಜನಗರ ಜಿಲ್ಲಾ ಸರ್ಕಾರಿಸ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್. ಮಹದೇವಸ್ವಾಮಿ, ಖಜಾಂಚಿ ಎಸ್.ಮಹದೇವಯ್ಯ, ಗೌರವಾಧ್ಯಕ್ಷ ಹೆಚ್.ಎಸ್.ಶಿವಮೂರ್ತಿ, ಕಾರ್ಯಾಧ್ಯಕ್ಷ ಆರ್.ಸಿದ್ದರಾಜು, ಉಪಾಧ್ಯಕ್ಷ ಶೈಲೇಂದ್ರಸ.ವಿಸ, ಎಂ.ಸಿ.ಮAಜುನಾಥ್, ಜಿ.ವಿನಯ್, ಸಿ.ಎಂ.ಶಿವಕುಮಾರ್, ಎಂ.ಆರ್.ಯೋಗೇಶ್, ಮಹೇಂದ್ರ.ಕೆ.ಎಸ್, ಮಲ್ಲಿಕಾರ್ಜು.ಸಿ ಹಾಗೂ ಕೊಳ್ಳೇಗಾಲ, ಯಳಂದೂರು, ಗುಂಡ್ಲುಪೇಟೆ, ಹನೂರು ಅಧ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು

    ಶಾಸಕರಾದ ಎ.ಆರ್.ಕೃಷ್ಣಮೂತಿ ರವರು ಮತ್ತು ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ೯೦% ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಮತ್ತು ಜಿಲ್ಲೆಯಿಂದ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಸರ್ಕಾರಿ ನೌಕರರಾದ ಎ.ಎಂ. ಪ್ರಭಾಕರ್, ಮಂಜುನಾಥ್, ಪ್ರವೀಣ್ ಕುಮಾರ್, ಆರ್. ನಂದಿನಿ, ಶ್ವೇತಾದ್ರಿ, ಮಹಾಂತೇಶ್ ಹಾಗೂ ವೀಣಾ ಕೌಶಲ್ ಅವರನ್ನು ಗೌರವಿಸಲಾಯಿತು.

    Demo
    Share. Facebook Twitter LinkedIn Email WhatsApp

    Related Posts

    ಸಣ್ಣಪುಟ್ಟ ಹೇಳಿಕೆಯಿಂದ ಸಿಎಂ ಬದಲಾವಣೆ ಚರ್ಚೆಯಾಗಲ್ಲ: ಶಿವರಾಜ್ ತಂಗಡಗಿ

    July 4, 2025

    ಬೀದರ್: ಅದ್ಧೂರಿಯಾಗಿ ನಡೆದ ಸದಸ್ಯತ್ವ ನೋಂದಣಿ ಅಭಿಯಾನ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆ

    July 4, 2025

    ಹೃದಯ ಜೋಪಾನ ; ಮಿಮ್ಸ್ ನಲ್ಲಿ ಹೃದಯ ವೈದ್ಯರೇ ಇಲ್ಲ

    July 4, 2025

    ಕಾರು ಹರಿದು ಮೂರು ವರ್ಷದ ಬಾಲಕಿ ಮೃತ್ಯು

    July 4, 2025

    ಹೃದಯ ಜೋಪಾನ – ಹಾಸನದಲ್ಲಿ ಹೃದಯಾಘಾತಕ್ಕೆ ಮತ್ತಿಬ್ಬರು ಬಲಿ

    July 4, 2025

    ತುಮಕೂರು ಜಿಲ್ಲೆಯಲ್ಲಿ ಸರ್ಕಾರಿ ಹಾರ್ಟ್ ಸ್ಪೆಷಲಿಸ್ಟೇ ಇಲ್ಲ..!?

    July 4, 2025

    ಬೆಳಗಾವಿಯ ಬಿಮ್ಸ್‌ನಲ್ಲಿ ಇರೋದು ಒಬ್ಬರೇ ಹೃದಯ ವೈದ್ಯರು

    July 4, 2025

    ಕಾವೇರಿ ನದಿ ಪ್ರವಾಹಕ್ಕೆ ಸಿಲುಕಿದ್ದ ಮಹಿಳೆ ರಕ್ಷಣೆ

    July 4, 2025

    ಲಾರಿಗಳ ನಡುವೆ ಭೀಕರ ಅಪಘಾತ; ಚಾಲಕನ ಕಾಲು ಕಟ್

    July 4, 2025

    ನಾವೆಲ್ಲರೂ ಜನರೊಂದಿಗೆ ಬೆರೆತು ಕೆಲಸ ಮಾಡೋಣ: ನಿಖಿಲ್ ಕುಮಾರಸ್ವಾಮಿ

    July 4, 2025

    ಕಿಮ್ಸ್ ಆಸ್ಪತ್ರೆಗೆ ನೂತನ ಡೈರೆಕ್ಟರ್ ಆಗಿ ಅಧಿಕಾರ ಸ್ವೀಕರಿಸಿದ ಡಾ. ಈಶ್ವರ ಹೊಸಮನಿ

    July 4, 2025

    ವಿವಾಹಿತ ಮಹಿಳೆಯೊಂದಿಗೆ ಸಹಜೀವನ, ಕಲಹ : ವಿಡಿಯೋ ಮಾಡಿಟ್ಟು ಆತ್ಮಹತ್ಯೆ

    July 4, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.