ಮೊದಲ ಮದುವೆ ಮುರಿದು ಬಿದ್ದ ಬಳಿಕ ಹಲವು ವರ್ಷಗಳ ಕಾಲ ಒಂಟಿಯಾಗಿದ್ದ ಈ ನಟಿ ಇದೀಗ ಸ್ಟಾರ್ ನಟನ ಕೈ ಹಿಡಿದು ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ನ್ಯೂ ಕಪಲ್ ವೈವಾಹಿಕ ಜೀವನವನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಈ ನಟಿ ಯಾರು ಅವರೇ ಸ್ಟಾರ್ ಹೀರೋಯಿನ್ ಅದಿತಿ ರಾವ್ ಹೈದರಿ.
45 ವರ್ಷದ ನಟ ಸಿದ್ಧಾರ್ಥ್, 37 ವರ್ಷದ ನಟಿ ಅದಿತಿ ರಾವ್ ಹೈದರಿ ಜೊತೆ ಹಸೆಮಣೆ ಏರಿದ್ದು, ಹೊಸ ಜೀವನ ಶುರು ಮಾಡಿದ್ದಾರೆ. ನಟ ಸಿದ್ದಾರ್ಥ್ 2003ರಲ್ಲಿಯೇ ಮೇಘನಾ ಎಂದಬ ಯುವತಿಯನ್ನು ಮದುವೆ ಆಗಿದ್ದು, ಬಳಿಕ 2007ರಲ್ಲಿ ವಿಚ್ಛೇದನ ಪಡೆದು ದೂರವಾದ್ರು. ಅಂದಿನಿಂದ ಒಂಟಿಯಾಗಿದ್ದ ನಟ ಸಿದ್ದಾರ್ಥ್ ಇದೀಗ ಅದಿತಿ ಜೊತೆ ಜಂಟಿ ಆಗಿದ್ದಾರೆ.
ನೀವು ಸ್ವಿಮಿಂಗ್ ಮಾಡುತ್ತೀರಾ..? ಹಾಗಾದ್ರೆ ಮೊದಲು ಈ ವಿಷಯಗಳನ್ನು ತಿಳಿದುಕೊಳ್ಳಿ..!
ಅದಿತಿ ರಾವ್ ಹೈದರಿ ರಾಜಮನೆತನದಿಂದ ಬಂದವರಾಗಿದ್ದಾರೆ. ಆಕೆಯ ಅಜ್ಜ (ತಂದೆಯ ತಂದೆ) ಅಕ್ಬರ್ ಹೈದರಿ ಆ ಸಮಯದಲ್ಲಿ ಹೈದರಾಬಾದಿನ ಪ್ರಧಾನಿಯಾಗಿದ್ದರು. ಅಲ್ಲದೆ, ಮತ್ತೊಬ್ಬ ತಾತ ರಾಮೇಶ್ವರ ರಾವ್ (ತಾಯಿಯ ತಂದೆ) ತೆಲಂಗಾಣದ ವನಪರ್ತಿಯ ರಾಜ್ಯಪಾಲರಾಗಿದ್ದು, ಮತ್ತೊಬ್ಬ ಬಾಲಿವುಡ್ ಸ್ಟಾರ್ ಹೀರೋ ಅಮೀರ್ ಖಾನ್ ಅವರ ಮಾಜಿ ಪತ್ನಿ ಮತ್ತು ನಿರ್ದೇಶಕಿ ಕಿರಣ್ ರಾವ್ ಕೂಡ ಅದಿತಿಯ ಹತ್ತಿರದ ಸಂಬಂಧಿ ಆಗಿದ್ದಾರೆ.
ಆದ್ರೆ ಅದಿತಿ ಎರಡು ವರ್ಷದವಳಿದ್ದಾಗಲೇ ಅವರ ಪೋಷಕರು ಬೇರ್ಪಟ್ಟರು. ಬಳಿಕ ನಟಿ ಅದಿತಿ ತಾಯಿಯೊಂದಿಗೆ ದೆಹಲಿಗೆ ಬಂದ್ರು. ಅಲ್ಲಿಯೇ ಬೆಳೆದ್ರು. 2006ರಲ್ಲಿ ಚಿತ್ರರಂಗ ಪ್ರವೇಶಿಸಿದ ಅದಿತಿ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ನಟಿಸಿದ್ದರು.
ತೆಲುಗು, ತಮಿಳಿನಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಮಹಾ ಸಮುದ್ರ ಚಿತ್ರೀಕರಣದ ವೇಳೆ ಅದಿತಿ ನಟ ಸಿದ್ಧಾರ್ಥ್ ಅವರನ್ನು ಪ್ರೀತಿಸುತ್ತಿದ್ದರು. ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಇತ್ತೀಚೆಗಷ್ಟೇ ಏಳು ಹೆಜ್ಜೆ ಇಟ್ಟಿದ್ದರು. ಅದಿತಿ ಈ ಹಿಂದೆ ಹಿಂದಿ ನಟ ಸತ್ಯದೀಪ್ ಮಿಶ್ರಾ ಅವರನ್ನು 2007 ರಲ್ಲಿ ವಿವಾಹವಾಗಿದ್ದರು. ಆದರೆ 6 ವರ್ಷಗಳ ನಂತರ ಅವರು ವಿಚ್ಛೇದನ ಪಡೆದು ದೂರವಾದ್ರು.
ದಕ್ಷಿಣ ಭಾರತ್ ಸಂಪ್ರದಾಯದಂತೆ ಇಬ್ಬರ ಮದುವೆ ನಡೆಯಿತು. 400 ವರ್ಷಗಳ ಹಳೆಯ ವನಪರ್ತಿಯ ದೇವಸ್ಥಾನದಲ್ಲಿ ಅದಿತಿ ಮತ್ತು ಸಿದ್ಧಾರ್ಥ್ ಸಪ್ತಪದಿ ತುಳಿದ್ರು. ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯರಾದ ಅದಿತಿ ರಾವ್ ಹೈದರಿ, ಕೇವಲ ಒಂದಲ್ಲ, ಎರಡು ರಾಜ ಮನೆತನಕ್ಕೆ ಸೇರಿದವರು. ಅವಳು ಅಕ್ಬರ್ ಹೈದರಿಯ ಮೊಮ್ಮಗಳು. ನಟಿ ರಾಯಲ್ ಹೈದರಾಬಾದಿ ಮತ್ತು ವನಪರ್ತಿಯ ವಂಶಸ್ಥರಾಗಿದ್ದಾರೆ. ಅದಿತಿ ಆಸ್ತಿ ಮೌಲ್ಯ 60 ರಿಂದ 65 ಕೋಟಿ ಎಂದು ವರದಿಯಾಗಿದೆ.