Close Menu
Ain Live News
    Facebook X (Twitter) Instagram YouTube
    Tuesday, July 1
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್: ದೇಶಾದ್ಯಂತ ಇಂದು ಮತ್ತೆ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ!

    By Author AINMay 1, 2025
    Share
    Facebook Twitter LinkedIn Pinterest Email
    Demo

    ಬೆಂಗಳೂರು: ಆರ್ಥಿಕ ಸುರಕ್ಷತೆಯ ವಿಷಯದಲ್ಲೂ ಚಿನ್ನದ ಎತ್ತಿದ ಕೈ ಎನ್ನಬಹುದು. ಒಬ್ಬ ವ್ಯಕ್ತಿಯಿಂದ ಹಿಡಿದು ರಾಷ್ಟ್ರದ ಆರ್ಥಿಕ ಸದೃಢತೆಯಲ್ಲೂ ಚಿನ್ನ ಮಹತ್ವದ ಪಾತ್ರವಹಿಸಿದೆ. ಆರ್ಥಿಕವಾಗಿ ತಲೆದೋರುವ ಕಷ್ಟಕಾಲದ ಆಪದ್ಬಾಂಧವನಂತೆ ಚಿನ್ನ ಕಾರ್ಯ ನಿರ್ವಹಿಸುತ್ತದೆ.

    ಇನ್ನು, ಚಿನ್ನದ ಬೆಲೆ ಯಾವಾಗಲೂ ಒಂದೇ ತೆರನಾಗಿರುವುದಿಲ್ಲ. ಹಲವಾರು ಜಾಗತಿಕ ವಿದ್ಯಮಾನಗಳು ಹಾಗೂ ಸ್ಥಳೀಯ ಕಾರಣಗಳಿಂದಾಗಿ ನಿತ್ಯ ಅದರ ಬೆಲೆ ಪ್ರಭಾವಿಸಲ್ಪಡುತ್ತಲೇ ಇರುತ್ತದೆ. ಹಾಗಾಗಿ ನಿತ್ಯದ ಬೆಲೆಯ ಅಪ್ಡೇಟ್ ಸಾಕಷ್ಟು ಜನರಿಗೆ ಉಪಯುಕ್ತ ಎನ್ನಬಹುದು.

    ಇಂದು ಗುರುವಾರ ಭರ್ಜರಿ ಇಳಿಕೆ ಕಂಡಿವೆ. ಚಿನ್ನದ ಬೆಲೆ ಗ್ರಾಮ್​​​ಗೆ ಬರೋಬ್ಬರಿ 200 ರೂ ಕಡಿಮೆ ಆಗಿದೆ. 22 ಕ್ಯಾರಟ್ ಆಭರಣ ಚಿನ್ನದ ಬೆಲೆ 8,975 ರೂ ಇದ್ದದ್ದು 8,775 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 9,573 ರೂಗೆ ಇಳಿದಿದೆ. ವಿದೇಶಗಳಲ್ಲಿ ಕೆಲವೆಡೆ ಸ್ವರ್ಣ ಬೆಲೆ ಇಳಿಕೆಯಾಗಿದೆ. ಇನ್ನು, ಚಿನ್ನದಂತೆ ಬೆಳ್ಳಿ ಬೆಲೆಯೂ ಭರ್ಜರಿ ಇಳಿಕೆ ಕಂಡಿದೆ. ಗ್ರಾಮ್​​ಗೆ 2 ರೂನಷ್ಟು ಇಳಿಮುಖವಾಗಿದೆ ಬೆಳ್ಳಿ ಬೆಲೆ. ಬೆಂಗಳೂರು, ಮುಂಬೈ ಮೊದಲಾದ ಕಡೆ ಈಗ ಬೆಳ್ಳಿ ಬೆಲೆ 98 ರೂ ಇದೆ.

    ಊಟದ ಬಳಿಕ ಪಾತ್ರೆಗಳನ್ನು ತೊಳೆಯದೇ ಹಾಗೆ ಬಿಡ್ತೀರಾ!? ನೀವು ನೋಡಲೇಬೇಕಾದ ಸ್ಟೋರಿ!

    ತಮಿಳುನಾಡು, ಕೇರಳ ಮೊದಲಾದ ಕಡೆ ಬೆಲೆ 107 ರೂಗೆ ಇಳಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 87,750 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 95,730 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,800 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 87,750 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,800 ರುಪಾಯಿಯಲ್ಲಿ ಇದೆ.

    ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ 1ಕ್ಕೆ)

    • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 87,750 ರೂ
    • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 95,730 ರೂ
    • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 71,800 ರೂ
    • ಬೆಳ್ಳಿ ಬೆಲೆ 10 ಗ್ರಾಂಗೆ: 980 ರೂ

    ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

    • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 87,750 ರೂ
    • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 95,730 ರೂ
    • ಬೆಳ್ಳಿ ಬೆಲೆ 10 ಗ್ರಾಂಗೆ: 980 ರೂ

    ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

    • ಬೆಂಗಳೂರು: 87,750 ರೂ
    • ಚೆನ್ನೈ: 87,750 ರೂ
    • ಮುಂಬೈ: 87,750 ರೂ
    • ದೆಹಲಿ: 87,900 ರೂ
    • ಕೋಲ್ಕತಾ: 87,750 ರೂ
    • ಕೇರಳ: 87,750 ರೂ
    • ಅಹ್ಮದಾಬಾದ್: 87,800 ರೂ
    • ಜೈಪುರ್: 87,900 ರೂ
    • ಲಕ್ನೋ: 87,900 ರೂ
    • ಭುವನೇಶ್ವರ್: 87,750 ರೂ

    Demo
    Share. Facebook Twitter LinkedIn Email WhatsApp

    Related Posts

    ದೋಷಪೂರಿತ ಆದೇಶ: ಕೆಎಎಸ್‌ ಅಧಿಕಾರಿ ಅಪೂರ್ವ ಬಿದರಿ ವಿರುದ್ಧ ಕ್ರಿಮಿನಲ್ ಕೇಸ್!

    July 1, 2025

    ಡಿಕೆಶಿ ಸಿಎಂ ಆಗುವ ಕಾಲ ಹತ್ತಿರವಿದೆ ಎಂದಿದ್ದ ಇಕ್ಬಾಲ್‌ ಹುಸೇನ್‌ಗೆ ವಾರ್ನಿಂಗ್: ಡಿಕೆಶಿಯಿಂದ ನೋಟಿಸ್!

    July 1, 2025

    ನಾವೆಲ್ಲರೂ ಸಮುದಾಯವಾಗಿ ಯೋಚಿಸಿ ಸಮಾಜಕ್ಕಾಗಿ ಒಳಿತು ಮಾಡುವ ಕೆಲಸ ಮಾಡೋಣ: ಸುರಳ್ಕರ್ ವಿಕಾಸ್ ಕಿಶೋರ್

    July 1, 2025

    ಸರಣಿ ಹೃದಯಸ್ತಂಭನಕ್ಕೆ ಕೋವಿಡ್ ಲಸಿಕೆ ಕಾರಣನಾ.? ಮೋದಿಯತ್ತ ಬೊಟ್ಟು ಮಾಡಿದ ಸಿದ್ದರಾಮಯ್ಯ…!

    July 1, 2025

    BRAKING : ವಾಲ್ಮೀಕಿ ನಿಗಮದ ಹಗರಣ ತನಿಖೆ ಸಿಬಿಐಗೆ ; ಹೈಕೋರ್ಟ್ ಆದೇಶ

    July 1, 2025

    ಕಾಲ್ತುಳಿತ ಪ್ರಕರಣ, ಸಿಎಟಿ ಆದೇಶ: ಮೇಲ್ಮನವಿ ಸಲ್ಲಿಸಲು ಅವಕಾಶವಿದೆ – ಸಿಎಂ ಸಿದ್ದರಾಮಯ್ಯ

    July 1, 2025

    ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಆಗುತ್ತಿಲ್ಲ, ನಮ್ಮ ಗಮನವೆಲ್ಲ 2028 ರ ಚುನಾವಣೆ ಮೇಲಿದೆ: ಶಿವಕುಮಾರ್

    July 1, 2025

    ಬೆಂಗಳೂರು ಕಾಲ್ತುಳಿತ, ಸರ್ಕಾರಕ್ಕೆ ಮುಖಭಂಗ: ಸಿಎಟಿ ಆದೇಶ ಪ್ರತಿ ಇನ್ನೂ ನೋಡಿಲ್ಲವೆಂದ ಜಿ ಪರಮೇಶ್ವರ್!

    July 1, 2025

    ಲಕ್ಕಿ ಲಾಟರಿ ಸಿಎಂ ಎಂದ BR ಪಾಟೀಲ್​ ಗುಮ್ಮಿದ ಸಿದ್ದರಾಮಯ್ಯ!

    July 1, 2025

    ರೈತರಿಗೆ ಭರ್ಜರಿ ಸಿಹಿ ಸುದ್ದಿ: ಕೃಷಿ ಭೂಮಿಯಲ್ಲಿ ಮರ ಕಡಿಯಲು ನಿಯಮ ಸರಳೀಕರಣ!

    July 1, 2025

    ನಿಜ ಸುದ್ದಿಗಾಗಿ ಹೋರಾಟ ನಡೆಸುವ ಸಂದರ್ಭ ಬಂದಿದೆ ಎಂದರೆ, ಸುಳ್ಳು ಸುದ್ದಿಗಳು ಹೆಚ್ಚಾಗಿವೆ ಅಂಥ ತಾನೇ ಅರ್ಥ: ಸಿಎಂ ಪ್ರಶ್ನೆ

    July 1, 2025

    1 ವರ್ಷದಿಂದ RR ನಗರ ಏರಿಯಾ ಮನೆಗಳೇ ಟಾರ್ಗೆಟ್..! ಪೊಲೀಸರ ನಿದ್ದೆಗೆಡಿಸಿದ್ದ ತಮಿಳುನಾಡಿನ ಕಳ್ಳ ಅರೆಸ್ಟ್

    July 1, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.