ಬೆಂಗಳೂರು: ರಾತ್ರಿಯಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಸಿಲಿಕಾನ್ ಸಿಟಯ ಹಲವು ತಗ್ಗು ಪ್ರದೇಶಗಳಿಗೆ ಹಾಗೂ ಮನೆಗಳಿಗೆ ನೀರು ನುಗ್ಗಿವೆ. ರಸ್ತೆಗಳು, ಅಂಡರ್ಪಾಸ್ಗಳು, ಕೆಲ ಅಪಾರ್ಟ್ಮೆಂಟ್ಗಳ ಆವರಣಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಇದರಿಂದ ಜನರು ರಾತ್ರಿಯೆಲ್ಲ ಪರದಾಡುವಂತೆ ಆಗಿದೆ.
ಭಾರೀ ಮಳೆಯಿಂದಾಗಿ ಬೆಂಗಳೂರಿನ ಅನೇಕ ಪ್ರದೇಶಗಳು ಜಲಾವೃತಗೊಂಡ ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮೇಲೆ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರು ಆಡಳಿತವನ್ನು ಸುಗಮಗೊಳಿಸುವ ಉದ್ದೇಶದೊಂದಿಗೆ ಮೇ 15 ರಂದು ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ ಜಾರಿಗೆ ಬಂದಿತ್ತು. ಇದೀಗ ಅದನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಈ 3 ರಾಶಿಯವರು ತಾಮ್ರದ ಉಂಗುರ ಧರಿಸುವುದರಿಂದ ಬದಲಾಗುತ್ತೆ ಅದೃಷ್ಟ: ಹಣದ ರಾಶಿಯೇ ಹರಿದು ಬರುತ್ತಂತೆ!
ಭಾರೀ ಮಳೆಯಾದಾಗ ಗ್ರೇಟರ್ ಬೆಂಗಳೂರು ಮುಳುಗುತ್ತದೆ ಮತ್ತು ಲಘು ಮಳೆಯಾದಾಗ ತೇಲುತ್ತದೆ ಎಂದು ಕುಮಾರಸ್ವಾಮಿ ಪತ್ರಿಕಾ ಹೇಳಿಕೆಯಲ್ಲಿ ಟೀಕಿಸಿದ್ದಾರೆ ತಿಳಿಸಿದ್ದಾರೆ. ಮೂಲಸೌಕರ್ಯಗಳನ್ನು ಸರಿಪಡಿಸುವಲ್ಲಿ ಆಡಳಿತಾರೂಢ ಕಾಂಗ್ರೆಸ್ ವಿಫಲವಾಗಿದೆ ಎಂದು ಅವರು ಟೀಕಿಸಿದ್ದಾರೆ.
ಗುಂಡಿಗಳು, ತೆರೆದ ಚರಂಡಿಗಳು ಮತ್ತು ಪದೇ ಪದೇ ಪ್ರವಾಹ ಉಂಟಾಗುವುದು ದುರಾಡಳಿತದ ಪುರಾವೆಯಾಗಿದೆ. ಮಳೆ ಪರಿಸ್ಥಿತಿ ಎದುರಿಸಲು ಸರ್ಕಾರ ಸಿದ್ಧವಾಗದೇ ಇರುವುದರ ಸೂಚಕವಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಸಾರ್ವಜನಿಕರ ಹಣವನ್ನು ವ್ಯಯಿಸುವಲ್ಲಿನ ಹೊಣೆಗಾರಿಕೆ, ಬದ್ಧತೆಯನ್ನೂ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ರಸ್ತೆ ಗುಂಡಿಯನ್ನು ಮುಚ್ಚಲು ಮಣ್ಣು ಕೂಡ ಇಲ್ಲ, ಆದರೆ ಸುರಂಗ ರಸ್ತೆಗಳಿಗೆ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಟೆಂಡರ್ಗಳನ್ನು ಕರೆಯಲಾಗುತ್ತದೆ ಎಂದು ವ್ಯಂಗ್ಯವಾಡಿದ ಅವರು, ಜನರು ಪ್ರತಿಭಟಿಸದ ನಿರ್ಜೀವ ಕಲ್ಲುಗಳು ಎಂದು ಕಾಂಗ್ರೆಸ್ ಸರ್ಕಾರ ಭಾವಿಸಿದೆಯೇ ಎಂದು ಪ್ರಶ್ನಿಸಿದ್ದಾರೆ.