ಭೂಮಿಯ ಮೇಲಿನ ಸ್ವರ್ಗ..ಹೀಗೆ ಕರೆಸಿಕೊಳ್ಳುವ ದೇಶ ಅಂದ್ರೆ ಅದು ಕಾಶ್ಮೀರ. ಆದ್ರೆ ದಶಕಗಳಿಂದ, ಭಯೋತ್ಪಾದನೆ ಮತ್ತು ಅಶಾಂತಿ ಅಲ್ಲಿ ತಾಂಡವವಾಡುತ್ತಿದೆ. ಈ ನೆಲದಲ್ಲಿ ಬರೋಬ್ಬರಿ 38 ವರ್ಷಗಳಿಂದ ಒಂದೇ ಒಂದು ಸಿನಿಮಾ ಪ್ರದರ್ಶನವಾಗಿರಲ್ಲಿಲ್ಲವೆಂದರೇ ನೀವು ನಂಬಲೇಬೇಕು. ಹೀಗಾಗಿ ಕಣಿವೆಯ ಜನರಿಗೆ ಸಿನಿಮಾ ಕನಸಾಗಿಯೇ ಉಳಿದಿತ್ತು. ಆದರೀಗ 38 ವರ್ಷದ ಬಳಿಕ ಮೊದಲ ಬಾರಿಗೆ ಚಿತ್ರದ ಪ್ರದರ್ಶನವೊಂದು ನಡೆದಿದೆ.
38 ವರ್ಷಗಳ ಸುಧೀರ್ಘ ಗ್ಯಾಪ್ ಬಳಿಕ, ಕಾಶ್ಮೀರದಲ್ಲಿ ಬೆಳ್ಳಿ ಪರದೆಯಲ್ಲಿ ಸಿನಿಮಾ ಪ್ರದರ್ಶನ ಆರಂಭವಾಗಿದೆ. ಬಾಲಿವುಡ್ ನಟ ಇಮ್ರಾನ್ ಹಶ್ಮಿ ಅವರ ‘ಗ್ರೌಂಡ್ ಝೀರೋ’ ಚಿತ್ರವು ಶ್ರೀನಗರದಲ್ಲಿ ಹೊಸದಾಗಿ ನಿರ್ಮಿಸಲಾದ ಐನಾಕ್ಸ್ ಚಿತ್ರಮಂದಿರದಲ್ಲಿ ವಿಶೇಷ ಪ್ರಥಮ ಪ್ರದರ್ಶನಗೊಂಡಿದೆ. ಸುಮಾರು ನಾಲ್ಕು ದಶಕಗಳಲ್ಲಿ ಕಾಶ್ಮೀರದ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿರುವ ಮೊದಲ ಚಿತ್ರ ಇದಾಗಿದೆ. ಇಮ್ರಾನ್ ಹಶ್ಮಿ, ನಿರ್ಮಾಪಕ ಫರ್ಹಾನ್ ಅಖ್ತರ್, ನಟಿ ಸಾಯಿ ತಮ್ಹಂಕರ್ ಮತ್ತು ಉಳಿದ ಚಿತ್ರತಂಡ ಸ್ಪೆಷಲ್ ಸ್ಕ್ರೀನ್ ನಲ್ಲಿ ಭಾಗವಹಿಸಿದ್ದರು.
ತೇಜಸ್ ಪ್ರಭಾ ವಿಜಯ್ ನಿರ್ದೇಶನದ ‘ಗ್ರೌಂಡ್ ಝೀರೋ’ ಚಿತ್ರವನ್ನು ಫರ್ಹಾನ್ ಅಖ್ತರ್ ಅವರ ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ ನಿರ್ಮಿಸಲಾಗಿದೆ. ಇಮ್ರಾನ್ ಹಶ್ಮಿ ಬಿಎಸ್‌ಎಫ್ ಕಮಾಂಡರ್ ನರೇಂದ್ರ ನಾಥ್ ಧಾರ್ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಕಥೆಯು ಗಡಿಯಲ್ಲಿ ಬಿಎಸ್‌ಎಫ್ ಸೈನಿಕರ ಜೀವನ ಮತ್ತು ಹೋರಾಟವನ್ನು ತೆರೆದಿಟ್ಟಿದೆ.