ಶನಿವಾರ ನಡೆದ IPL ಪಂದ್ಯದಲ್ಲಿ ಮುಂಬೈ ಮಣಿಸಿ 36 ರನ್ ಗಳ ಭರ್ಜರಿ ಜಯವನ್ನು ಗುಜರಾತ್ ದಾಖಲಿಸಿದೆ. ನಿನ್ನೆ ಗುಜರಾತ್ ತಂಡ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಿದ್ದವು. ಈ ವೇಳೆ ಗುಜರಾತ್ ತಂಡವು ಮುಂಬೈ ವಿರುದ್ಧ 36 ರನ್ಗಳ ಜಯ ಸಾಧಿಸಿದೆ.
ಈ ರಾಶಿಯವರಿಗೆ ಮದುವೆ ಸಂಭ್ರಮ: ಭಾನುವಾರದ ರಾಶಿ ಭವಿಷ್ಯ30 ಮಾರ್ಚ್ 2025!
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 20 ಓವರ್ಗೆ 8 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿತು. ಗುರಿ ಬೆನ್ನತ್ತಿದ ಮುಂಬೈ 20 ಓವರ್ಗೆ 6 ವಿಕೆಟ್ ನಷ್ಟಕ್ಕೆ 140 ರನ್ ಅಷ್ಟೇ ಗಳಿಸಿ ಸೋಲೊಪ್ಪಿಕೊಂಡಿತು.
ರೋಹಿತ್ ಶರ್ಮಾ ಶನಿವಾರ ಕೂಡ ಮಂಕಾದರು. ಕೇವಲ 8 ರನ್ ಗಳಿಸಿ ಪೆವಿಲಿಯನ್ ಕಡೆ ಮುಖ ಮಾಡಿದರು. ರಯಾನ್ ರಿಕೆಲ್ಟನ್ ಕೂಡ 6 ರನ್ ಗಳಿಸಿ ಔಟಾದರು. ತಿಲಕ್ ವರ್ಮಾ 39 ರನ್ ಗಳಿಸಲಷ್ಟೇ ಶಕ್ತರಾದರು.
ಈ ನಡುವೆ ಸೂರ್ಯಕುಮಾರ್ ಯಾದವ್ (48 ರನ್, 28 ಬಾಲ್, 1 ಫೋರ್, 4 ಸಿಕ್ಸರ್) ಜವಾಬ್ದಾರಿಯುತ ಆಟ ಗೆಲುವಿನ ಭರವಸೆ ಮೂಡಿಸಿತ್ತು. ಆದರೆ, ದೊಡ್ಡ ಹೊಡೆತಕ್ಕೆ ಮುಂದಾಗಿ ಕ್ಯಾಚಿತ್ತು ಹೊರನಡೆದಿದ್ದು, ನಿರಾಸೆ ಮೂಡಿಸಿತು. ರಾಬಿನ್ ಮಿಂಜ್ 3, ಹಾರ್ದಿಕ್ ಪಾಂಡ್ಯ 11, ನಮನ್ ಧೀರ್ 18, ಮಿಚೆಲ್ ಸ್ಯಾಂಟ್ನರ್ 18 ರನ್ ಗಳಿಸಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.