ಹುಬ್ಬಳ್ಳಿ:- ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾಗಿರುವ ಗೃಹಲಕ್ಷ್ಮೀ ಯೋಜನೆ ಮಹಿಳೆಯರಿಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ. ರಾಜ್ಯದಲ್ಲಿ ಸರಿಸುಮಾರು 1.25 ಕೋಟಿ ಗೃಹಣಿಯರು ಈ ಯೋಜನೆಯ ಫಲಾನುಭವಿಗಳಾಗಿದ್ದು, ಈ ಯೋಜನೆಗಾಗಿಯೇ ಕಳೆದ ಬಜೆಟ್ ನಲ್ಲಿ ಸರ್ಕಾರ ಬಜೆಟ್ ನಲ್ಲಿ 28608 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಆದ್ರೆ ಗೃಹಲಕ್ಷ್ಮಿ ಹಣ ಸರಿಯಾಗಿ ಪ್ರತಿ ತಿಂಗಳು ಖಾತೆಗೆ ಜಮೆಯಾಗದಿರುವುದರಿಂದ ಫಲಾನುಭವಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಒಂದೇ ರಾಜ್ಯದವರಾಗಿ ನಾವು ನಾವೇ ನೀರಿಗಾಗಿ ಕಿತ್ತಾಡುವುದು ಬೇಡ: ಡಿಸಿಎಂ ಡಿ.ಕೆ. ಶಿವಕುಮಾರ್
ಗೃಹಲಕ್ಷ್ಮಿ ಹಣದ ವಿಚಾರವಾಗಿ ವಿರೋಧ ಪಕ್ಷಗಳು ಆಗಾಗ ಸರ್ಕಾರದ ವಿರುದ್ದ ಹರಿಹಾಯುತ್ತಲೇ ಇವೆ. ಸರ್ಕಾರದ ಗ್ಯಾರಂಟಿ ಯೋಜನೆಗಳು ವಿಫಲವಾಗಿವೆ ಎಂದು ಆರೋಪಿಸುತ್ತಿವೆ. ಸರ್ಕಾರ ಕೂಡಾ ಸರಿಯಾಗಿ ಹಣ ಹಾಕುತ್ತೇವೆ ಎಂದು ಹೇಳುತ್ತಲೇ ಇದೆ. ಆದ್ರೆ ಕಳೆದ ಮೂರು ತಿಂಗಳಿಂದ ಗೃಹಲಕ್ಷ್ಮಿಯರಿಗೆ ಹಣ ಬಂದಿಲ್ಲವಂತೆ. ಪ್ರತಿ ತಿಂಗಳು ಹಣ ಜಮೆಯಾಗದಿರುವುದಕ್ಕೆ ಹುಬ್ಬಳ್ಳಿಯಲ್ಲಿ ಫಲಾನುಭವಿಗಳು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಹಿಂದೆ ಸರ್ಕಾರ ಪ್ರತಿ ತಿಂಗಳು ಹಣ ಹಾಕುವುದಾಗಿ ಹೇಳಿತ್ತು. ಆದ್ರೆ ಕಳೆದ ಮೂರು ತಿಂಗಳಿಂದ ನಮ್ಮ ಅಕೌಂಟ್ ಗೆ ಹಣ ಬಂದಿಲ್ಲ. ಹಣ ಬಂದಿದೆ ಎಂದು ಬ್ಯಾಂಕ್ ಗೆ ಹೋಗಿ ಬರುತ್ತಿದ್ದೇವೆ. ಆದ್ರೆ ಬ್ಯಾಂಕ್ ನವರು ಯಾವುದೇ ಹಣ ಜಮೆಯಾಗಿಲ ಎಂದು ಹೇಳುತ್ತಿದ್ದಾರೆ
ವೃದ್ದರು ಮಾತ್ರೆ ಖರ್ಚಿಗಾಗಿ ಈ ಹಣ ಬಳಸಿದ್ರೆ, ಕೆಲವರು ಮಕ್ಕಳ ಶಾಲೆ ಪೀಸ್ ಕಟ್ಟಲು ಹಣ ಬಳಸಿಕೊಳ್ಳುತ್ತಿದ್ದೇವೆ. ಪ್ರತಿ ತಿಂಗಳು ಮನೆಯ ರೇಷನ್ ಖರ್ಚಿಗೆ ಹಣ ಬಳಕೆ ಆಗ್ತಿತ್ತು. ಆದ್ರೆ ಸರಿಯಾಗಿ ಹಣ ಬಾರದೇ ಇದ್ದಿದ್ದರಿಂದ ಇದೀಗ ಎಲ್ಲದಕ್ಕೂ ತೊಂದರೆಯಾಗಿದೆ. ಹೀಗಾಗಿ ಸರ್ಕಾರ ಪ್ರತಿ ತಿಂಗಳು ಅಕೌಂಟ್ ಗೆ ಹಣ ಜಮೆ ಮಾಡುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದಾರೆ.