Close Menu
Ain Live News
    Facebook X (Twitter) Instagram YouTube
    Wednesday, June 25
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಕೂದಲು ಸಿಕ್ಕಾಪಟ್ಟೆ ಉದುರುತ್ತಿದೆಯಾ? ಹಾಗಾದ್ರೆ ಈ ಇದನ್ನು ಒಮ್ಮೆ ಟ್ರೈ ಮಾಡಿ!

    By AIN AuthorJune 25, 2025
    Share
    Facebook Twitter LinkedIn Pinterest Email
    Demo

    ಕೂದಲು ಉದುರುವಿಕೆ ತುಂಬಾ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಮಾಲಿನ್ಯ, ಒತ್ತಡ ಮತ್ತು ಕೆಟ್ಟ ಗುಣಮಟ್ಟದ ನೀರು ಇದು ಕೂದಲು ಉದುರುವಿಕೆಗೆ ಪ್ರಮುಖ ಕಾರಣಗಳು. ಒತ್ತಡದ ಜೀವನಶೈಲಿ, ಪೋಷಕಾಂಶಗಳ ಕೊರತೆ, ಅಲರ್ಜಿ, ಹಾರ್ಮೋನ್ ಅಸಮತೋಲನ, ಕೂದಲಿನ ಕೆಟ್ಟ ಆರೈಕೆ ಮತ್ತು ಅನುವಂಶೀಯವಾಗಿಯೂ ಇದು ಬರಬಹುದು. ತಜ್ಞರ ಪ್ರಕಾರ ಕೂದಲು ತೆಳ್ಳಗಾಗುವುದು ಮತ್ತು ಕೂದಲು ಉದುರುವಿಕೆ ಸಮಸ್ಯೆಯು ಇಂದಿನ ದಿನಗಳಲ್ಲಿ ಅತಿಯಾಗಿದೆ.

    ಇನ್ಮುಂದೆ ಎಲ್ಲಾ ಇಲಾಖೆಗಳಲ್ಲೂ ‘ಕನ್ನಡ ಬಳಕೆ’ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

    ಕೂದಲು ಉದ್ದವಾಗಿ, ಹೊಳೆಯುತ್ತಿರಬೇಕು ಎಂದು ಎಲ್ಲಾ ಹೆಣ್ಣು ಮಕ್ಕಳು ಬಯಸುತ್ತಾರೆ. ಯಾಕೆಂದರೆ ತಲೆಯ ಕೂದಲು ಹೆಣ್ಣಿನ ಅಂದವನ್ನು ಹೆಚ್ಚಿಸುತ್ತದೆ. ಮಹಿಳೆಯೊಬ್ಬಳು ಉದ್ದವಾದ ಕೂದಲನ್ನು ಬಿಟ್ಟುಕೊಂಡು ಬೀದಿಯಲ್ಲಿ ನಡೆದುಕೊಂಡು ಹೋದರೆ ಎಲ್ಲರೂ ಒಮ್ಮೆಲೆ ಅವಳನ್ನೇ ಕಣ್ಣು ಬಿಟ್ಟುಕೊಂಡು ನೋಡುತ್ತಿರುತ್ತಾರೆ. ಆದರೆ ಇಂದಿನ ದಿನಗಳಲ್ಲಿ ವಾತಾವರಣದ ಕೊಳೆ, ಧೂಳು, ಹಾಗೂ ಹಾರ್ಮೋನ್ಗಳ ಸಮಸ್ಯೆ ಮತ್ತು ರಾಸಾಯನಿಕಯುಕ್ತ ಹೇರ್ ಪ್ರೊಡಕ್ಟ್ಗಳನ್ನು ಬಳಸುವುದರಿಂದ ಕೂದಲುದುರುವ ಸಮಸ್ಯೆ ಕಾಡುತ್ತಿದೆ. ಹಾಗಾಗಿ ಕೂದಲು ಬಾಚುವಾಗ ನೆಲದ ಮೇಲೆ ಕೂದಲಿನ ರಾಶಿ ಬಿದ್ದಿರುವುದು ನೋಡಿದರೆ ಮನಸ್ಸಿಗೆ ಬೇಸರವಾಗುತ್ತದೆ.

    ಇದರಿಂದ ಕೆಲವು ಮಹಿಳೆಯರು ಚಿಂತೆಗೀಡಾಗುತ್ತಾರೆ. ಆದರೆ ಈ ರೀತಿ ಚಿಂತೆ ಮಾಡುವುದರಿಂದ ಕೂಡ ಕೂದಲುದುರುತ್ತದೆ. ಹಾಗಾಗಿ ನೀವು ಈ ರೀತಿ ಚಿಂತಿಸುವ ಬದಲು ಕೂದಲಿನ ಆರೋಗ್ಯವನ್ನು ಹೆಚ್ಚಿಸುವಂತಹ ಕೆಲಸ ಮಾಡಿ. ಕೂದಲಿನ ಸಮಸ್ಯೆಗಳನ್ನು ನಿವಾರಿಸಿ ಹೊಳೆಯುವ ಕೂದಲನ್ನು ಪಡೆಯಲು ಇಲ್ಲಿ ಒಂದು ವಿಶೇಷವಾದ ಹೇರ್ ಮಾಸ್ಕ್ ಬಗ್ಗೆ ತಿಳಿಸಲಾಗಿದೆ. ಈ ವಿಶೇಷವಾದ ಹೇರ್ ಮಾಸ್ಕ್ ಅನ್ನು ಬಳಸಿ.

    1 ಕಪ್ ಮೆಂತ್ಯಕಾಳನ್ನು ರಾತ್ರಿಯಿಡಿ ನೀರಿನಲ್ಲಿ ನೆನೆಸಿಡಿ. ನಂತರ ಅದಕ್ಕೆ ಬೇಯಿಸಿದ ಅನ್ನ ಒಂದು ಕಪ್ ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ಇದಕ್ಕೆ ಬೀಟ್ ರೋಟ್ ರಸ ಹಾಗೂ ಸ್ವಲ್ಪ ತಾಜಾ ಅಲೋವೆರಾ ಜೆಲ್ ಅನ್ನು ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ ಕೂದಲಿಗೆ ಹಚ್ಚಿ. 30 ನಿಮಿಷ ಬಿಟ್ಟು ಕೂದಲನ್ನು ತೊಳೆಯಿರಿ. ಇದರಿಂದ ಕೂದಲು ಉದ್ದವಾಗಿ ಬೆಳೆಯುತ್ತದೆ. ಹಾಗೇ ಕೂದಲಿನ ಹೊಳಪು ಕೂಡ ಹೆಚ್ಚಾಗುತ್ತದೆ. ಇದನ್ನು ವಾರದಲ್ಲಿ ಎರಡು ಬಾರಿ ಬಳಸಿದರೆ ಇದರಿಂದ ಕೂದಲುದುರುವುದು ಕಡಿಮೆಯಾಗುತ್ತದೆ. ಕೂದಲಿಗೆ ಒಳ್ಳೆಯ ಹೊಳಪು ಬರುತ್ತದೆ.

    ಮೆಂತ್ಯ ಬೀಜಗಳು ಔಷಧೀಯ ಗುಣಗಳನ್ನು ಹೊಂದಿದೆ. ಹಾಗಾಗಿ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮಾತ್ರವಲ್ಲ ಇದು ಕೂದಲಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಇದರಲ್ಲಿ ಪ್ರೋಟೀನ್ಗಳು, ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿದೆ, ಇದು ಕೂದಲಿಗೆ ಹಲವಾರು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಮೆಂತ್ಯವು ಪ್ರೋಟೀನ್ಗಳು ಮತ್ತು ನಿಕೋಟಿನಿಕ್ ಆಮ್ಲವನ್ನು ಹೊಂದಿರುತ್ತದೆ, ಇದು ಕೂದಲಿನ ಕಿರುಚೀಲಗಳನ್ನು ಬಲಪಡಿಸಿ ಕೂದಲಿನ್ನು ಬುಡದಿಂದಲೇ ಗಟ್ಟಿಗೊಳಿಸುತ್ತದೆ.

    ಇದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ ಮತ್ತು ಕೂದಲಿನ ತುದಿ ಒಡೆಯುವುದನ್ನು ತಡೆಯುತ್ತದೆ. ಇದರಿಂದ ಕೂದಲು ಉದ್ದವಾಗಿ ಬೆಳೆಯುತ್ತದೆ. ಅಲ್ಲದೇ ಇದು ನೆತ್ತಿಯಲ್ಲಿ ರಕ್ತದ ಹರಿವನ್ನು ಹೆಚ್ಚಿಸುವುದರ ಮೂಲಕ ಕೂದಲು ಬೆಳೆಯಲು ಸಹಾಯ ಮಾಡುತ್ತದೆ ಮತ್ತು ಇದರಿಂದ ಕೂದಲುದುರುವುದು ಸಹ ಕಡಿಮೆಯಾಗುತ್ತದೆ. ಅಲ್ಲದೇ ಮೆಂತ್ಯವು ಹಲವಾರು ಶಿಲೀಂಧ್ರ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ, ಇದು ನೆತ್ತಿಯನ್ನು ತಂಪಾಗಿಸಿ ತಲೆಹೊಟ್ಟನ್ನು ಕಡಿಮೆ ಮಾಡುತ್ತದೆ.

    ತಜ್ಞರ ಪ್ರಕಾರ, ಬೇಯಿಸಿದ ಅನ್ನದಲ್ಲಿ ಅಮೈನೋ ಆಮ್ಲಗಳು, ಇನೋಸಿಟಾಲ್ ಇರುತ್ತದೆ. ಇವು ಕೂದಲನ್ನು ಬಲಪಡಿಸಲು ಸಹಾಯ ಮಾಡುತ್ತವೆ. ಅಲ್ಲದೇ ಇದು ವಿಟಮಿನ್ ಬಿ, ವಿಟಮಿನ್ ಸಿ, ವಿಟಮಿನ್ ಇ, ಖನಿಜಗಳು ಮತ್ತು ಆ್ಯಂಟಿ ಆಕ್ಸಿಡೆಂಟ್ಗಳಂತಹ ಪೋಷಕಾಂಶಗಳಿಂದ ತುಂಬಿರುತ್ತದೆ.

    ಇದು ಕೂದಲಿಗೆ ಹಲವಾರು ಪ್ರಯೋಜಗಳನ್ನು ನೀಡುತ್ತದೆ. ಇದು ಮಂದ ಕೂದಲಿಗೆ ಹೊಳಪನ್ನು ನೀಡುತ್ತದೆ, ಮತ್ತು ಕೂದಲನ್ನು ಮೃದುವಾಗಿಸುತ್ತದೆ. ಮತ್ತು ಕೂದಲನ್ನು ಬಲಪಡಿಸಿ, ಕೂದಲಿನ ಪ್ರತಿಯೊಂದು ಎಳೆಗಳನ್ನು ದಪ್ಪವಾಗಿಸುತ್ತದೆ. ಇದರಿಂದ ಆರೋಗ್ಯಕರ ಕೂದಲು ಬೆಳೆಯಲು ಸಹಾಯ ಮಾಡುತ್ತದೆ.

    ಕೂದಲಿನ ಆರೋಗ್ಯಕ್ಕೆ ಅಲೋವೆರಾ ಬಹಳ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಔಷಧೀಯ ಗುಣಗಳಿವೆ. ಇದರಲ್ಲಿ ಅನೇಕ ಪೋಷಕಾಂಶ, ಜೀವಸತ್ವಗಳು ಮತ್ತು ಅಮೈನೋ ಆಮ್ಲಗಳು ಸಮೃದ್ಧವಾಗಿದೆ. ಇದನ್ನು ಬಳಸಿಕೊಂಡು ಕೂದಲಿಗೆ ಸೂಕ್ತ ಆರೈಕೆ ಮಾಡಬಹುದು. ಇದು ಕೂದಲನ್ನು ಬಲಪಡಿಸಲು ಮತ್ತು ಕೂದಲಿನ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಅಲೋವೆರಾದಲ್ಲಿ ವಿಟಮಿನ್ ಇ ಸಮೃದ್ಧವಾಗಿರುತ್ತವೆ. ಇದು ಕೂದಲನ್ನು ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ.

    ಅಲೋವೆರಾ ಬ್ಯಾಕ್ಟೀರಿಯಾ ಸೋಂಕು ಮತ್ತು ಶಿಲೀಂಧ್ರಗಳ ವಿರುದ್ಧ ಹೋರಾಡುವುದರಿಂದ ತಲೆಹೊಟ್ಟು ಮತ್ತು ಹೇನಿನ ಸಮಸ್ಯೆಗಳು ಕಾಡುವುದಿಲ್ಲ. ಈ ರೀತಿಯಲ್ಲಿ ಕೂದಲಿಗೆ ಈ ವಿಶೇಷವಾದ ಹೇರ್ ಮಾಸ್ಕ್ ಬಳಸುವುದರ ಮೂಲಕ ಕೂದಲಿನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಿ. ಆದರೆ ಈ ಹೇರ್ ಮಾಸ್ಕ್ ಅನ್ನು ಕೂದಲಿಗೆ ಹಚ್ಚುವ ಮುನ್ನ ಪ್ಯಾಚ್ ಟೆಸ್ಟ್ ಮಾಡಿಸಿ. ಹಾಗೇ ಇದನ್ನು ಅತಿಯಾಗಿ ಬಳಸಬೇಡಿ. ಇದರಿಂದ ಕೂದಲಿಗೆ ಹಾನಿಯಾಗುವ ಸಂಭವವಿರುತ್ತದೆ

    ಕೂದಲನ್ನು ಆರೋಗ್ಯವಾಗಿಟ್ಟುಕೊಳ್ಳಲು ಬೀಟ್ರೋಟ್ ಸಹಕಾರಿಯಾಗಿದೆ. ಇದು ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುವುಲ್ಲದೆ ಕೂದಲಿನ ಅನೇಕ ಸಮಸ್ಯೆಗಳನ್ನು ನಿವಾರಿಸಲು ಸಹಕಾರಿಯಾಗಿದೆ. ಬೀಟ್ರೂಟ್ಗಳಲ್ಲಿ ವಿಟಮಿನ್ ಬಿ 6, ಸಿ, ಪೊಟ್ಯಾಸಿಯಮ್ ಮತ್ತು ಕ್ಯಾರೊಟಿನಾಯ್ಡ್ಗಳು ಸಮೃದ್ಧವಾಗಿವೆ. ನೀವು ಬೀಟ್ರೂಟ್ ರಸವನ್ನು ನೆತ್ತಿಯ ಮೇಲೆ ಹಚ್ಚಿ ಮಸಾಜ್ ಮಾಡಿದರೆ, ಇದು ನೆತ್ತಿಯಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ.

    ಇದರಿಂದ ಕೂದಲಿನ ಕಿರುಚೀಲಗಳಿಗೆ ಆಮ್ಲಜನಕದ ಪೂರೈಕೆಯಾಗುತ್ತದೆ. ಇದು ಕೂದಲಿನ ಬೇರುಗಳನ್ನು ಬಲಪಡಿಸಿ ಕೂದಲುದುರುವುದನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಬೀಟ್ರೋಟ್ನಲ್ಲಿ ವಿಟಮಿನ್ ಎ, ಸಿ, ಇ ಮತ್ತು ಎಲೆಕ್ಟ್ರೋಲೈಟ್ಗಳು ಇರುತ್ತವೆ, ಇದು ಕೂದಲನ್ನು ಹೈಡ್ರೀಕರಿಸುತ್ತದೆ. ಇದರಿಂದ ಒಣಕೂದಲಿನ ಸಮಸ್ಯೆ ಕಾಡುವುದಿಲ್ಲ

    Demo
    Share. Facebook Twitter LinkedIn Email WhatsApp

    Related Posts

    ತಲೆಯಲ್ಲಿ ವಿಪರೀತ ಹೇನಿದ್ಯಾ? ಹಾಗಿದ್ರೆ ಹೀಗೆ ಮಾಡಿ, ತಕ್ಷಣವೇ ಒಂದೂ ಉಳಿಯದಂತೆ ಉದುರಿಹೋಗುತ್ತೆ!

    June 25, 2025

    ಬೆಳಿಗ್ಗೆ ಎದ್ದಾಕ್ಷಣ ಈ ರೀತಿಯ ಲಕ್ಷಣ ಕಂಡುಬಂದ್ರೆ ಇದು ಥೈರಾಯ್ಡ್ ಸಮಸ್ಯೆ ಎಂದರ್ಥ

    June 25, 2025

    ಅಬ್ಬಬ್ಬಾ.. ಜನರು ಹೆಚ್ಚು ಖರ್ಚು ಮಾಡೋದು ಇದಕ್ಕೇನಾ..? ವರದಿಯಲ್ಲಿ ಶಾಕಿಂಗ್ ವಿಷಯ ಬಯಲು

    June 25, 2025

    ಚಳಿಗಾಲದಲ್ಲಿ ಮೂಲಂಗಿ ಸೇವನೆ ಒಳ್ಳೆಯದು, ಆದ್ರೆ ತಪ್ಪಿಯೂ ಈ ಆಹಾರಗಳ ಜೊತೆ ತಿನ್ನಬೇಡಿ..!

    June 25, 2025

    ಮಳೆಗಾಲದಲ್ಲಿ ಮೊಸರು ಸೇವನೆ ಒಳ್ಳೆಯದೇ? ತಜ್ಞರು ಹೇಳಿದಿಷ್ಟು!

    June 24, 2025

    ಮೊಡವೆಯಿಂದ ಮುಖದ ಕಳೆ ಕುಂದಿದ್ಯಾ!? ಹಾಗಿದ್ರೆ ವಾರ ಪೂರ್ತಿ ಹೀಗೆ ಮಾಡಿ!

    June 24, 2025

    ಮುಟ್ಟಿನ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸುವುದು ಸರಿಯೋ ತಪ್ಪೋ? ತಜ್ಞರು ಹೇಳೋದು ಹೀಗೆ

    June 24, 2025

    Healthy Food: ಎಲ್ಲಕ್ಕಿಂತ ಮಿಗಿಲು ಆರೋಗ್ಯ ಸಂಪತ್ತು; ಮೆಂತ್ಯ ನೀರು ಕುಡಿದ್ರೆ ಸಿಗುತ್ತೆ ಸೂಪರ್ ಪ್ರಯೋಜನಗಳು..!

    June 24, 2025

    ಮಂಗಳವಾರ ಸಂಜೆ ಹೀಗೆ ಮಾಡಿದ್ರೆ ಕಷ್ಟಗಳೆಲ್ಲಾ ಕ್ಷಣಾರ್ಧದಲ್ಲಿ ಮಾಯವಾಗತ್ತೆ!

    June 24, 2025

    ಬೆಳಗ್ಗೆ ಎದ್ದ ಕೂಡಲೇ ತಲೆನೋವು ಬರುತ್ತಾ!? ಹಾಗಿದ್ರೆ ರಾತ್ರಿ ಮಾಡುವ ಈ ತಪ್ಪು ಕಾರಣ!

    June 23, 2025

    ನಿಮಗಿದು ಗೊತ್ತಾ!? ಕರಿಬೇವಿನ ಎಲೆಗಳನ್ನು ನೆನೆಸಿ ನೀರು ಕುಡಿಯುವುದರಿಂದ, ಸಿಗುವ ಆರೋಗ್ಯ ಬೆನಿಫಿಟ್ ಎಷ್ಟು ಗೊತ್ತಾ!?

    June 23, 2025

    ಒಂದೇ ತಿಂಗಳಲ್ಲಿ ಹೊಟ್ಟೆಯ ಕೊಬ್ಬು ಕರಗಿಸಬೇಕಾ? ಹಾಗಿದ್ರೆ ಏಲಕ್ಕಿಯನ್ನು ಹೀಗೆ ತಿನ್ನಿರಿ!

    June 23, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.