ಬೆಂಗಳೂರು :- ಇತ್ತೀಚಿನ ದಿನಗಳಲ್ಲಿ ದಿನನಿತ್ಯ ಚಿನ್ನ, ಬೆಳ್ಳಿ, ಬೈಕ್, ಕಾರು ಕಳ್ಳತನ ಅಲ್ಲದೇ, ಮನೆ, ಬ್ಯಾಂಕ್ ದರೋಡೆ ಮಾಡಿ ಹಣ ಕಳ್ಳತನ ಮಾಡುವ ಸುದ್ದಿಯನ್ನು ಕೇಳುತ್ತಿರುತ್ತೀರಾ. ಆದರೆ ಇಲ್ಲೊಬ್ಬ ಖತರ್ನಾಕ್ ಖದೀಮ, ಮಹಿಳೆಯರ ತಲೆ ಕೂದಲು ಕದ್ದಿದ್ದಾನೆ.
ಹೌದು, ಇಲ್ಲೊಬ್ಬಳು ಮಹಿಳೆ ಬಾಚಿದ ತಲೆಕೂದಲನ್ನು ಕಳ್ಳತನ ಮಾಡಿರುವ ಘಟನೆ ಬೆಂಗಳೂರಿನ ಸೋಲದೇವನಹಳ್ಳಿಯ ಲಕ್ಷ್ಮೀಪುರ ಕ್ರಾಸ್ನಲ್ಲಿ ಬೆಳಕಿಗೆ ಬಂದಿದೆ.
ಮಾ.1 ರಂದು ಲಕ್ಷ್ಮೀಪುರ ಕ್ರಾಸ್ನ ಗೋದಾಮಿನಿಂದ ಆರೋಪಿ ಯಲ್ಲಪ್ಪ ಸೇರಿದಂತೆ ಐದು ಜನರ ತಂಡ ಗೋದಾಮಿನ ಬೀಗ ಮುರಿದು ಕೂದಲನ್ನು ಕದ್ದಿದ್ದರು. ಗೂಡ್ಸ್ ವಾಹನದ ಮೂಲಕ ಸುಮಾರು 25 ಲಕ್ಷ ರೂ. ಬೆಲೆಬಾಳುವ 400 ಕೆ.ಜಿ ಕೂದಲನ್ನು ಕದ್ದು ಪರಾರಿಯಾಗಿದ್ದರು.
ಈ ಕುರಿತು ಗೋದಾಮಿನ ಮಾಲೀಕ ವೆಂಕಟರಮಣ ಕಳ್ಳತನ ಕುರಿತು ಸೋಲದೇವನಹಳ್ಳಿ ಠಾಣೆಗೆ ದೂರು ನೀಡಿದ್ದು, ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ತನಿಖೆ ವೇಳೆ ಆರೋಪಿಗಳು ಕದ್ದ ಕೂದಲನ್ನು ಚನ್ನರಾಯಪಟ್ಟಣ ಹಾಗೂ ಆಂಧ್ರಗೆ ಸಾಗಿಸಿರುವುದಾಗಿ ತಿಳಿದು ಬಂದಿದೆ. ಅಲ್ಲದೇ ಕೂದಲನ್ನು ಚೀನಾ, ಬರ್ಮಾ ಮತ್ತು ಹಾಂಕಾಂಗ್ಗೆ ರಫ್ತು ಮಾಡಬೇಕಾಗಿತ್ತು ಎನ್ನೋದು ಗೊತ್ತಾಗಿದೆ. ಸಧ್ಯ ಓರ್ವ ಅರೆಸ್ಟ್ ಆಗಿದ್ದು, ಉಳಿದವರಿಗೆ ಶೋಧ ನಡೆದಿದೆ.