ಬೆಂಗಳೂರು: ನಟಿ ವೈಷ್ಣವಿ ಗೌಡ ಹೊಸ ಬಾಳಿಗೆ ಹೆಜ್ಜೆ ಇಡೋದಿಕ್ಕೆ ಸಜ್ಜಾಗಿದ್ದಾರೆ. ಸೀತಾರಾಮ ಸೀರಿಯಲ್ ನಲ್ಲಿ ಬ್ಯುಸಿಯಾಗಿದ್ದ ವೈಷ್ಣವಿ ಸೀರಿಯಲ್ ಮುಗಿಯುತ್ತಿದ್ದಂತೆ ತಮ್ಮ ವೈಯಕ್ತಿಕ ಜೀವನಕ್ಕೆ ಸಮಯ ಕೊಡಲು ಮುಂದಾಗಿದ್ದಾರೆ.
ಉದ್ಯಮಿ ಅಕಾಯ್ ಜೊತೆ ಕಳೆದ ತಿಂಗಳು ಏಪ್ರಿಲ್ 14ರಂದು ನಟಿ ವೈಷ್ಣವಿ ಗೌಡ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಸದ್ಯದಲ್ಲೇ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡೋದಕ್ಕೆ ಈ ಜೋಡಿ ಸಜ್ಜಾಗಿದೆ. ವೈಷ್ಣವಿ ಮನೆಯಲ್ಲೀಗ ಮದುವೆ ಸಂಭ್ರಮ ಮನೆ ಮಾಡಿದೆ.
View this post on Instagram
ನಟಿ ವೈಷ್ಣವಿ ಗೌಡ ಮನೆಯಲ್ಲಿ ಚಪ್ಪರ ಶಾಸ್ತ್ರ ಹಾಗೂ ಅರಿಶಿಣಿ ಶಾಸ್ತ್ರ ನಡೆದಿದ್ದು, ಆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ತಮ್ಮ ಮದುವೆ ಶಾಸ್ತ್ರದ ಫೋಟೋ ಹಂಚಿಕೊಂಡು ವೈಷ್ಣವಿ ಇದು ಆರಂಭ ಎಂಬ ಕ್ಯಾಪ್ಷನ್ ಹಾಕಿದ್ದಾರೆ.
View this post on Instagram