ಇಂದು, 11 ಮೇ 2025 ರಂದು ವಿಶ್ವ ತಾಯಂದಿರ ದಿನ. ಜಗತ್ತಿನಲ್ಲಿ ತಾಯಿಯ ಸ್ಥಾನ ವಿಶಿಷ್ಠ ಹಾಗೂ ವಿಶೇಷ ಎಂಬ ಪ್ರಜ್ಞೆ ಜಗತ್ತಿನ ಬಹುತೇಕ ಎಲ್ಲಾ ಭಾಗಗಳಲ್ಲಿಯೂ ಇದೆ. ಇಂದು ಎಲ್ಲಾ ಕಡೆ ತಾಯಂದಿರ ದಿನವನ್ನು ಆಚರಿಸುತ್ತಿದ್ದಾರೆ. ಜನಸಾಮಾನ್ಯರು, ಸಿನಿಮಾ ತಾರೆಯರು ಹಾಗೂ ಎಲ್ಲಾ ಕ್ಷೇತ್ರಗಳ ಪ್ರತಿಭಾನ್ವಿತರು ಎಂಬ ಯಾವುದೇ ಬೇಧ-ಭಾವ ಇಲ್ಲದೇ ತಾಯಂದಿರ ದಿನವನ್ನು ಆಚರಣೆ ಮಾಡಲಾಗುತ್ತಿದೆ.
View this post on Instagram
ಅದೇ ರೀತಿ ಮುದ್ದಾದ ಮಕ್ಕಳು ಮತ್ತು ಅಮ್ಮ ಮಂಗಳ ಪಂಡಿತ್ ಜೊತೆಗಿನ ಫೋಟೋ ಶೇರ್ ಮಾಡಿ, ಅವಳ ಕೈ ಹಿಡಿದು, ಕೈ ಹಿಡಿಯುವ ಕೈಯಾಗಿ ಬದಲಾಗುವವರೆಗೆ. ತಾಯ್ತನವು ಹೃದಯದಿಂದ ಹೃದಯಕ್ಕೆ ಹಾದುಹೋಗುವ ಕಥೆ. ಪಾಠಗಳಿಗೆ, ಪ್ರೀತಿಗೆ ಮತ್ತು ಪರಂಪರೆಗೆ ಕೃತಜ್ಞತೆ. ಪೀಳಿಗೆಗಳನ್ನು ರೂಪಿಸುವ ಮಹಿಳೆಯರಿಗೆ ಅಮ್ಮಂದಿರ ದಿನದ ಶುಭಾಶಯಗಳು ಎಂದು ರಾಧಿಕಾ ಪಂಡಿತ್ ಬರೆದುಕೊಂಡಿದ್ದಾರೆ.
ಪಿಂಕ್ ಬಣ್ಣದ ಉಡುಗೆಯಲ್ಲಿ ನಟಿ ಮಿಂಚಿದ್ದಾರೆ. ಮಕ್ಕಳಾದ ಐರಾ ಮತ್ತು ಯಥರ್ವ್ ಹಾಗೂ ಅಮ್ಮನ ಜೊತೆ ನಿಂತು ರಾಧಿಕಾ ಫೋಟೋಗೆ ಪೋಸ್ ನೀಡಿದ್ದಾರೆ. ನಟಿಯ ಹೊಸ ಪೋಸ್ಟ್ ನೋಡಿ ಅಭಿಮಾನಿಗಳು ಸಂತೂರ್ ಮಮ್ಮಿ ಎಂದು ಹೊಗಳಿದ್ದಾರೆ. ರಾಧಿಕಾ ಅವರ ಬಾಲ್ಯದಿಂದ ಇಂದಿನವರೆಗೂ ನಟಿಯ ಜರ್ನಿಗೆ ತಾಯಿ ಮಂಗಳ ಪಂಡಿತ್ ಸಾಥ್ ನೀಡುತ್ತಲೇ ಬಂದಿದ್ದಾರೆ.