ತುಮಕೂರು : ಗೃಹ ಸಚಿವರ ತವರು ತುಮಕೂರು ಜಿಲ್ಲೆಯಲ್ಲಿ ಬಡ್ಡಿ ಕಿರುಕುಳ ನಿಲ್ಲುತ್ತಿಲ್ಲ. ಮೀಟರ್ ಬಡ್ಡಿ ದಂಧೆ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಮಂಡ್ಯ ಮೂಲದ ಮುಜೀಬ್ ಎಂಬಾತ ವಿಷಸೇವಿಸಿದ್ದು, ವಿಷ ಸೇವಿಸುವುದನ್ನ ಲೈವ್ ವಿಡಿಯೋ ಮಾಡಿಟ್ಟಿದ್ದಾನೆ ಮಂಡ್ಯದಲ್ಲಿ ಹಣ್ಣಿನ ವ್ಯಾಪಾರ ಮಾಡಿಕೊಂಡಿದ್ದ ಮುಜಿಬ್, ವ್ಯಾಪಾರಕ್ಕಾಗಿ 10 ಲಕ್ಷ ರೂಪಾಯಿ ಮೀಟರ್ ಬಡ್ಡಿ ಪಡೆದಿದ್ದ. ಬಡ್ಡಿ ಕಿರುಕುಳ ತಾಳಲಾರದೆ ತುಮಕೂರಿಗೆ ಬಂದಿದ್ದ ಮುಜಿಬ್. ಸಾಲ ಕೊಟ್ಟವರು ತುಮಕೂರಿಗೂ ಬಂದು ಬಡ್ಡಿ ಕಟ್ಟುವಂತೆ ಕಿರುಕುಳ ನೀಡಿದ್ದಾರೆ. ಸಾಲ ಕೊಟ್ಟವರ ಕಿರಕುಳ ತಾಳಲಾರದೆ ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
Save bandipura – ಬಂಡೀಪುರದಲ್ಲಿ ರಾತ್ರೀ ಸಂಚಾರ ನಿರ್ಬಂಧ ಮುಂದುವರೆಸುವಂತೆ ಬೃಹತ್ ಪಾದಯಾತ್ರೆ
ಸುರೇಶ್, ಚನ್ನೆಗೌಡ, ರಾಜಣ್ಣ ಎಂಬುವರ ವಿರುದ್ಧ ಆರೋಪ ಮಾಡಿದ್ದಾನೆ. ಕೂಡಲೇ ಆತನನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಹೆಚ್ವಿನ ಚಿಕಿತ್ಸೆಗಾಗಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.