ಹಾಸನ: ಸಾಮಾನ್ಯವಾಗಿ ಹೃದಯಾಘಾತ ಸಮಸ್ಯೆ, ಮೊದಲೆಲ್ಲಾ ವಯಸ್ಸಾದವರಲ್ಲಿ ಕಂಡುಬರುತ್ತಿದ್ದವು. ಕೆಲವರಲ್ಲಿ ಮಾತ್ರ ಸಣ್ಣ ವಯಸ್ಸಿನಲ್ಲಿ ಹೃದಯ ಸಂಬಂಧಿತ ಕಾಯಿಲೆಗಳಿಂದ ಪ್ರಾಣ ಬಿಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ, ಇದು ಬದಲಾಗಿದೆ. ಯುವಜನತೆ ಮತ್ತು ಮಕ್ಕಳು ಸಹ ಹೃದಯಾಘಾತದಿಂದ ಸಾಯುತ್ತಿದ್ದಾರೆ.
ಇದೀಗ ಹೃದಯಾಘಾತದಿಂದ ಯುವತಿ ಸಾವನ್ನಪ್ಪಿದ ಘಟನೆ ಹೊಳೆನರಸೀಪುರ ಪಟ್ಟಣದಲ್ಲಿ ನಡೆದಿದೆ. ಸಂಧ್ಯಾ (19) ಮೃತ ದುರ್ಧೈವಿಯಾಗಿದ್ದು, ಹೊಳೆನರಸೀಪುರ ಪಟ್ಟಣದ ಮಡಿವಾಳ ಬಡಾವಣೆಯ ನಿವಾಸಿಗಳಾದ ವೆಂಕಟೇಶ್-ಪೂರ್ಣಿಮ ದಂಪತಿ ಪುತ್ರಿ ಸಂಧ್ಯಾ ಅಂತಿಮ ವರ್ಷದ ಡಿಪ್ಲೊಮಾ ಮುಗಿಸಿದ್ದಳು.
ನಿಮಗೂ ಈ ಸಮಸ್ಯೆ ಇದ್ಯಾ!? ಹಾಗಿದ್ರೆ ಆಲೂಗಡ್ಡೆ ಮುಟ್ಟಲೇಬೇಡಿ! ಇದು ತಿಳಿದ್ರೆ ಶಾಕ್ ಆಗ್ತೀರಾ!?
ಬಾತ್‌ರೂಂಗೆ ತೆರಳಿದ್ದ ವೇಳೆ ಸಂಧ್ಯಾ ಕುಸಿದು ಬಿದ್ದಿದ್ದಾಳೆ. ಕೂಡಲೇ ಬಾತ್‌ರೂಂ ಬಾಗಿಲು ಒಡೆದು ಪೋಷಕರು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದ್ದರು. ಆದರೆ ಅಷ್ಟು ಹೊತ್ತಿಗೆ ಸಂಧ್ಯಾಳ ಪ್ರಾಣ ಹೋಗಿತ್ತು.