ರಾಜಸ್ಥಾನ್ ರಾಯಲ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 2 ರನ್ ಗಳ ರೋಚಕ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಬೀಸಿದ ಲಕ್ನೋ 5 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ರಾಜಸ್ಥಾನ 20 ಓವರ್‌ಗಳಲ್ಲಿ 5 ವಿಕೆಟಿ ನಷ್ಟಕ್ಕೆ 178 ರನ್ ಹೊಡೆದು ಸೋಲನ್ನು ಒಪ್ಪಿಕೊಂಡಿತ್ತು.
ಕೊನೆಯ ಓವರ್‌ವರೆಗೂ ಗೆಲುವು ರಾಜಸ್ಥಾನ ಕಡೆಗೆ ವಾಲಿತ್ತು. ಕೊನೆಯ 6 ಎಸೆತಗಳಲ್ಲಿ 9 ರನ್ ಬೇಕಿತ್ತು.ಕ್ರೀಸ್‌ನಲ್ಲಿ ಹೆಟ್ಮೇಯರ್ ಮತ್ತು ಧ್ರುವ್ ಜುರೇಲ್ ಇದ್ದರು. ಮೊದಲ ಎರಡು ಎಸೆತದಲ್ಲಿ ಸಿಂಗಲ್ ಮತ್ತು 2 ರನ್ ತೆಗೆದ ಹೆಟ್ಮೇಯರ್ ಮೂರನೇ ಎಸೆತದಲ್ಲಿ ಕ್ಯಾಚ್ ನೀಡಿ ಔಟಾಗುವ ಮೂಲಕ ಪಂದ್ಯ ರೋಚಕ ಘಟ್ಟದತ್ತ ತಿರುಗಿತು.
4ನೇ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. 5 ಎಸೆತದಲ್ಲಿ ದುಬೆ ಸಿಕ್ಸ್ ಸಿಡಿಸಲು ಹೋದರು. ಆದರೆ ಮಿಲ್ಲರ್ ಕ್ಯಾಚ್ ಡ್ರಾಪ್ ಮಾಡಿದ ಕಾರಣ 2 ರನ್ ಓಡಿದರು. ಕೊನೆಯ ಎಸೆತದಲ್ಲಿ 4 ರನ್ ಬೇಕಿತ್ತು. ಆದರೆ ದುಬೆ ಸಿಂಗಲ್ ರನ್ ತೆಗೆದ ಕಾರಣ ಲಕ್ನೋ ಪಂದ್ಯವನ್ನು ಗೆದ್ದುಕೊಂಡಿತು.