43 ವರ್ಷದ ಧೋನಿ, ಐಪಿಎಲ್ 2025 ರಲ್ಲಿ ಮೊಣಕಾಲು ನೋವಿನ ಸಮಸ್ಯೆಯ ಹೊರತಾಗಿಯೂ ಆಡುತ್ತಿದ್ದಾರೆ. ಆದರೆ, ಸಿಎಸ್‌ಕೆ ಈ ಋತುವಿನಲ್ಲಿ ಕೇವಲ 2 ಗೆಲುವುಗಳೊಂದಿಗೆ (9 ಪಂದ್ಯಗಳಲ್ಲಿ) ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿದೆ, ಇದು ಪ್ಲೇಆಫ್‌ಗೆ ತಲುಪುವ ಸಾಧ್ಯತೆಯನ್ನು ಕ್ಷೀಣಗೊಳಿಸಿದೆ. ಧೋನಿಯ ಕಾಮೆಂಟ್‌ಗಳು, ವಿಶೇಷವಾಗಿ ಮುಂದಿನ ಪಂದ್ಯಕ್ಕೆ ಆಡುತ್ತೇನೋ ಇಲ್ಲವೋ” ಎಂಬ ಹೇಳಿಕೆ, ಅವರು ಐಪಿಎಲ್‌ಗೆ ವಿದಾಯ ಹೇಳುವ ಸಾಧ್ಯತೆಯನ್ನು ಸೂಚಿಸುತ್ತದೆಯೇ ಎಂಬ ಚರ್ಚೆಗೆ ಜೋರಾಗಿದೆ. ಸಿಎಸ್‌ಕೆ ಸಿಇಒ ಕಾಸಿ ವಿಶ್ವನಾಥನ್ ಈ ಹಿಂದೆ ಧೋನಿ ತಮ್ಮ ಕೊನೆಯ ಪಂದ್ಯವನ್ನು ಚೆನ್ನೈನಲ್ಲಿ ಆಡಲು ಬಯಸುತ್ತಾರೆ ಎಂದು ಸುಳಿವು ನೀಡಿದ್ದರು. ಇದು ಈ ಊಹಾಪೋಹಗಳಿಗೆ ಇಂಬು ನೀಡಿದೆ.
SSLCಯಲ್ಲಿ ಅಪ್ಪು ಬಾಡಿಗಾರ್ಡ್ ಚಲಪತಿ ಮಗನ ಸಾಧನೆ.. 625 ಅಂಕಗಳಿಗೆ ಗಳಿಸಿದೆಷ್ಟು?
IPL 2025ರ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹೀನಾಯ ಪ್ರದರ್ಶನ ತೋರಿದ್ದು, ಅಭಿಮಾನಿಗಳು ನಿರಾಸೆಗೊಂಡಿದ್ದಾರೆ. ಈ ಸೀಸನ್ನಲ್ಲಿ ಸಿಎಸ್‌ಕೆ ಅತ್ಯಂತ ಹೀನಾಯ ಪರ್ಫಾಮೆನ್ಸ್ ನೀಡ್ತಿದೆ. ಪಾಯಿಂಟ್ಸ್ ಟೇಬಲ್‌ನಲ್ಲಿ ಪಾತಾಳಕ್ಕೆ ಕುಸಿದಿದೆ. ಅಟ್ಟರ್ಫ್ಲಾಪ್ ಪ್ರದರ್ಶನ ಬದಲಾವಣೆಯ ಬಿರುಗಾಳಿಯನ್ನ ಬೀಸಿದೆ. ಈಗಾಗಲೇ ಯುವ ತಂಡ ಕಟ್ಟೋ ಪ್ರಯತ್ನಗಳು ನಡೀತಿವೆ. ಇದ್ರ ನಡುವೆ ಧೋನಿ ನಿವೃತ್ತಿಯ ಪ್ರಶ್ನೆಗೆ ಅಡ್ಡಗೋಡೆಯ ಮೇಲೆ ದೀಪವಿಟ್ಟಿದ್ದಾರೆ. ಈ ಆನ್ಸರ್ ನೋಡಿದ್ರೆ, ಧೋನಿಗೆ ಇದೇ ಕೊನೆ ಐಪಿಎಲ್ ಆಗೋ ಸಾಧ್ಯತೆ ಹೆಚ್ಚಿದೆ.
44 ವರ್ಷದ ಧೋನಿ, ನೋಡೋಕೆ ಫುಲ್ ಫಿಟ್ ಆಗಿದ್ದಾರೆ. ಆದ್ರೆ, ಪ್ರಾಕ್ಟಿಕಲ್ ಆಗಿ ಹೇಳೋದಾದ್ರೆ, ಧೋನಿ ತನ್ನ ಹಳೆ ಚಾರ್ಮ್ ಕಳೆದುಕೊಂಡಿದ್ದಾರೆ. ಮಂಡಿ ಶಸ್ತ್ರ ಚಿಕಿತ್ಸೆಯ ನಂತರ, ಧೋನಿ ಹಳೇ ಧೋನಿಯಾಗಿ ಕಾಣ್ತಿಲ್ಲ. ಇಂಜುರಿಯ ನೋವು ಮತ್ತೆ ಮತ್ತೆ ಕಾಡ್ತಿದೆ. ಪಂದ್ಯದ ಬಳಿಕ ಕುಂಟುತ್ತಾ ನಡಿಯೋದು ಪದೇ ಪದೇ ಕಾಣ್ತಿದೆ.
ಎಸ್, ಇದೀಗ ಐಪಿಎಲ್ ನಿವೃತ್ತಿ ವಿಚಾರದಲ್ಲೂ ಧೋನಿ ಮೈಂಡ್ ಕ್ಲಿಯರ್ ಆದಂತಿದೆ. ಮೇ 12ಕ್ಕೆ ಸಿಎಸ್‌ಕೆ ಚೆಪಾಕ್ನಲ್ಲಿ ಲೀಗ್ ಹಂತದ ಕೊನೆಯ ಪಂದ್ಯವನ್ನಾಡಲಿದೆ. ಇದೇ ಪಂದ್ಯವೇ ಧೋನಿ ಕೊನೆಯ ಐಪಿಎಲ್ ಪಂದ್ಯವಾಗೋ ಸಾಧ್ಯತೆ ದಟ್ಟವಾಗಿದೆ.
ಈ ಬಾರಿ ಐಪಿಎಲ್ ಟೂರ್ನಿಯಾಡಲು ಚೆನ್ನೈಗೆ ಬಂದಿಳಿದಾಗಲೇ ಧೋನಿ ಅಂತ್ಯದ ಸೂಚನೆ ನೀಡಿದ್ರು. ಅಂದು ಧೋನಿ ತೊಟ್ಟ ಟೀ ಶರ್ಟ್, ಅದ್ರ ಮೇಲಿದ್ದ Morse Code ನಿವೃತ್ತಿಯ ಸೂಚನೆ ನೀಡಿದ್ವು. ಅಂದು ತೊಟ್ಟಿದ್ದ ಟೀ-ಶರ್ಟ್ ಮೇಲಿದ್ದ ಮೊದಲ ಸಾಲು O N E ಎಂಬ ಅಕ್ಷರವನ್ನ ಹೊಂದಿದ್ರೆ, 2ನೇ ಸಾಲು L A S T ಎಂಬ ಪದವನ್ನ ಸೂಚಿಸ್ತಿತ್ತು. ಕೊನೆ ಸಾಲು T I M E ಅಲ್ಬಬೆಟಿಕ್ ನಾ ಸೂಚನೆಯಾಗಿತ್ತು. ಅಂದ್ರೆ, ಒನ್ ಲಾಸ್ಟ್ ಟೈಮ್ ಎಂಬ ಸಂದೇಶವನ್ನ ಆ ಟಿ ಶರ್ಟ್ ಮೇಲಿದ್ದ ಅಕ್ಷರಗಳು ನೀಡಿದ್ವು.
ಐಪಿಎಲ್ನಲ್ಲಿ ಧೋನಿ ದರ್ಬಾರ್ ಮುಗಿಯುವ ಟೈಮ್ ಹತ್ತಿರವಾದಂತಿದೆ. ಇದೇ ಸೀಸನ್ನಲ್ಲಿ ಧೋನಿ ಗುಡ್ ಬೈ ಹೇಳೋ ಸಾಧ್ಯತೆಯೂ ದಟ್ಟವಾಗಿದೆ.