ಹಾವೇರಿ: ಬಾಕಿ ವೇತನ ಬಿಡುಗಡೆ ಮಾಡುವ ಸಂಬಂಧ ಶಿಕ್ಷಕರಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಹಾವೇರಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ ಶನಿವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಶಿಕ್ಷಕ ಪ್ರತಾಪ್ ಬಾರ್ಕಿ ಅವರ ಹಳೆಯ ವೇತನ ಮಾಡಿಕೊಡಲು ಬಿಇಒ ಮೌನೇಶ ಬಡಿಗೇರ 50 ಸಾವಿರ ರೂ., ಹಣಕ್ಕೆ ಬೇಡಿಕೆ ಇಟ್ಟು ಶನಿವಾರ ಮನೆಗೆ ಕರೆಯಿಸಿಕೊಂಡು 15ಸಾವಿರ ರೂ., ಮುಂಗಡವಾಗಿ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತರು ಬಂಧಿಸಿದ್ದಾರೆ. ಸದ್ಯ ಈ ಕುರಿತು ತನಿಖೆ ಮುಂದುವರೆದಿದೆ.