ಲಕ್ನೋ:- ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಯಶ್ ದಯಾಳ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ.
ಮಸ್ಕ್ ಒಬ್ಬ ಅದ್ಭುತ ವ್ಯಕ್ತಿಆದ್ರೆ ನಮ್ಮ ನಡುವಿನ ಭಿನ್ನಾಭಿಪ್ರಾಯಗಳು ಹಾಗೆ ಇವೆ: ಟ್ರಂಪ್
2025ರ ಐಪಿಎಲ್ ಆವೃತ್ತಿಯಲ್ಲಿ ಆರ್ಸಿಬಿ ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಸ್ಟಾರ್ ವೇಗಿ ಯಶ್ ದಯಾಳ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಈ ಬೆನ್ನಲ್ಲೇ ದೂರು ದಾಖಲಿಸಿದ್ದ ಗಾಜಿಯಾಬಾದ್ ಮಹಿಳೆಯಿಂದ ಹೊಸ ಆರೋಪ ಕೇಳಿಬಂದಿದೆ.
ನಾನು ಹಲವು ಬಾರಿ ಅವರ ಮನೆಗೆ ಹೋಗಿದ್ದೆ, ಕುಟುಂಬದೊಂದಿಗೆ ಸಮಯ ಕಳೆದಿದ್ದೆ. ಕಳೆದ 5 ವರ್ಷಗಳಿಂದ ದಯಾಳ್ ಜೊತೆ ಸಂಬಂಧ ಹೊಂದಿದ್ದು, ದಯಾಳ್ ಮದುವೆಯಾಗುವುದಾಗಿ ನಂಬಿಸಿದ್ದರು. ನನ್ನನ್ನು ನಿಮ್ಮ ಭಾವಿ ಸೊಸೆ ಎಂದು ಅವರ ಕುಟುಂಬಕ್ಕೆ ಪರಿಚಯಿಸಿದ್ದರು. ಇದರಿಂದ ಮದುವೆಯಾಗುತ್ತಾರೆ ಅನ್ನೋ ಭರವಸೆ ಇತ್ತು. ಆದರೆ ನನಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ದಯಾಳ್ ನನ್ನನ್ನೂ ಹೊರತುಪಡಿಸಿ ನಾಲ್ಕುವರೆ ವರ್ಷದಲ್ಲಿ ಹಲವು ಮಹಿಳೆಯರೊಟ್ಟಿಗೆ ಸಂಪರ್ಕ ಹೊಂದಿದ್ದ. ಅದಕ್ಕೆ ಸಾಕ್ಷಿಗಳೂ ಇವೆ. ಕನಿಷ್ಠ ಮೂವರೊಟ್ಟಿಗೆ ಅಫೇರ್ ಇಟ್ಟುಕೊಂಡಿದ್ದಾರೆ. ಇದೆಲ್ಲವೂ ಮೊದಲೇ ತಿಳಿದಿದ್ದರೆ ಹಿಂದೆ ಸರಿಯಬಹುದಿತ್ತು. ಆದ್ರೆ ಇದ್ಯಾವುದೂ ನನಗೆ ಗೊತ್ತಿರಲಿಲ್ಲ. ಅವನೂ ಸಹ ನನ್ನ ಬಳಿ ಇದೆಲ್ಲವನ್ನೂ ಮುಚ್ಚಿಟ್ಟಿದ್ದ. ಆ ದೇವರೇ ಎಲ್ಲ ನೋಡಿಕೊಳ್ಳಲಿ ಅಂತ ನಾನು ಸುಮ್ಮನಿದ್ದೆ. ಆದ್ರೆ ನನ್ನನ್ನ ಬಳಸಿಕೊಂಡು ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ವಂಚಿಸಿದ್ದಾರೆ ಎಂದು ಆಕೆ ದೂರಿದ್ದಾರೆ.
ಯಶ್ ದಯಾಳ್ ಈ ಪ್ರಕರಣವನ್ನ ಮುಚ್ಚಿಹಾಕಲು ಹಣ ಬಲ ಹಾಗೂ ತಮ್ಮ ಪ್ರಭಾವವನ್ನ ಬಳಸಿದ್ದಾರೆ. ಆದ್ರೆ ನನಗೆ ಕಾನೂನಿನ ಮೇಲೆ ಸಂಪೂರ್ಣ ನಂಬಿಕೆಯಿದೆ. ಹಲವು ಮಹಿಳೆಯರಿಗೆ ವಂಚನೆ ಮಾಡಿರೋದಕ್ಕೆ ಸಾಕ್ಷಿಗಳನ್ನು ಒದಗಿಸಿದ್ದೇನೆ. ಕಾನೂನು ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ