ಒಬ್ಬ ಯುವಕ ಒಂದೇ ಮಂಟಪದಲ್ಲಿ ಇಬ್ಬರು ಯುವತಿಯನ್ನು ಪ್ರೀತಿಸಿ ಮದುವೆಯಾಗಿ ಎಲ್ಲರನ್ನೂ ಅಚ್ಚರಿಗೊಳಿಸಿದ ಘಟನೆ ತೆಲಂಗಾಣದಲ್ಲಿ ಜರುಗಿದೆ.
ತೆಲಂಗಾಣದ ಕೊಮರಂ ಭೀಮ್ ಆಸಿಫಾಬಾದ್ ಜಿಲ್ಲೆಯಲ್ಲಿ ಅಪರೂಪದ ಮದುವೆ ನಡೆದಿದೆ. ಈ ಸೂರ್ಯದೇವ ಒಂದೇ ಮಂಟಪದಲ್ಲಿ ತನ್ನ ಇಬ್ಬರು ಪ್ರೇಯಸಿಯರಾದ ಲಾಲ್ ದೇವಿ & ಝಲ್ಕರಿ ದೇವಿ ಕೈ ಹಿಡಿದಿದ್ದಾನೆ.
ಸೂರ್ಯದೇವ ಒಬ್ಬ ಸಾಮಾನ್ಯ ವ್ಯಕ್ತಿಯಲ್ಲ. ಬಹಳ ಶ್ರೀಮಂತ ರೈತ. ಈತ ಒಂದೇ ಸಮಯದಲ್ಲಿ ಇಬ್ಬರು ಯುವತಿಯರನ್ನು ಪ್ರೀತಿಸಿದ್ದಾನೆ. ಪ್ರೀತಿಯ ವಿಷಯವನ್ನು ಇಬ್ಬರು ಯುವತಿಯರಿಗೆ ತಿಳಿಸಿದ್ದಾನೆ. ಇಬ್ಬರು ಯುವತಿಯರು ಅವನನ್ನು ಮದುವೆಯಾಗಲು ಒಪ್ಪಿಕೊಂಡಿದ್ದಾರೆ.
ಇಬ್ಬರನ್ನು ಪ್ರೀತಿಸಿದ ಸೂರ್ಯದೇವ್ ಒಂದೇ ಸಮಯದಲ್ಲಿ ಒಟ್ಟಿಗೆ ಇಬ್ಬರನ್ನು ಮದುವೆಗೆ ಒಪ್ಪಿಸಿದ್ದಾನೆ. ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುವುದಾಗಿ ಬಾಂಡ್ ಕೂಡ ಬರೆದು ಕೊಟ್ಟಿದ್ದಾನೆ.
ಸೂರ್ಯದೇವ್ ಲಾಲ್ ದೇವಿ ಹಾಗೂ ಝಲ್ಕರಿ ದೇವಿ ಇಬ್ಬರನ್ನೂ ಪ್ರೀತಿಸಿದ್ದ, ಆದ್ರೆ ಗ್ರಾಮದ ಹಿರಿಯರಿಗೆ ಈ ಮದುವೆ ಇಷ್ಟ ಇರಲಿಲ್ಲ. ಆದರೆ ಇಬ್ಬರು ಯುವತಿಯರು ಸೂರ್ಯದೇವ್ನನ್ನೇ ಮದುವೆಯಾಗಿ ಒಟ್ಟಿಗೆ ಬಾಳುವುದಾಗಿ ಮಾತು ನೀಡಿದಾಗ ಗ್ರಾಮಸ್ಥರು ಮದುವೆಗೆ ಒಪ್ಪಿದ್ದಾರೆ.