Close Menu
Ain Live News
    Facebook X (Twitter) Instagram YouTube
    Sunday, June 8
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    45 ಸಾವಿರ ಕೋಟಿ ಆಸ್ತಿ ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಿದ ಶ್ರೀಮಂತ ಉದ್ಯಮಿಯ ಮಗ

    By Author AINNovember 27, 2024
    Share
    Facebook Twitter LinkedIn Pinterest Email
    Demo

    ಹಣ ಎಷ್ಟ್ರಿದ್ರು ಸಾಲನ್ನು. ಇನ್ನೂ ಬೇಕು, ಮತ್ತೆ ಬೇಕು ಅನ್ನಿಸೋಕೆ ಶುರುವಾಗಿದೆ. ಹಣ ಅನ್ನೋದು ಮನುಷ್ಯನ ಕೈಯಿಂದ ಎಂಥ ತಪ್ಪು ಕೆಲಸ ಬೇಕಾದ್ರು ಮಾಡಿಸುತ್ತೆ. ಆದರೆ ಮನೆಯಲ್ಲಿ ಕೋಟಿ ಕೋಟಿ ಆಸ್ತಿ ಇದ್ರು ಈ ಯುವಕ ಮಾತ್ರ ಎಲ್ಲವನ್ನೂ ತ್ಯಜಿಸಿ ಸನ್ಯಾಸಿಯಾಗಿದ್ದಾನೆ. ಅಂದ ಹಾಗೆ ಈ ಘಟನೆ ನಡೆದಿರೋದು ಮಲೆಷ್ಯಾಯದಲ್ಲಿ.

    45,339 ಕೋಟಿ ರೂ. ಸಂಪತ್ತು ಹೊಂದಿರುವ ಮಲೇಷ್ಯಾದ ಉದ್ಯಮಿ ಆನಂದ್ ಕೃಷ್ಣನ್​ರ ಏಕೈಕ ಪುತ್ರ ವೆನ್ ಆಜಾನ್ ಸಿರಿಮಾನ್ಯೊ ಇದೀಗ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಈ ಮೂಲಕ ಕೋಟಿ ಕೋಟಿ ಆಸ್ತಿ ತೊರೆದು ಅಚ್ಚರಿ ಮೂಡಿಸಿದ್ದಾರೆ.

    ಜಗತ್ತಿನ ಕೆಲವೇ ಕೆಲವು ಶ್ರೀಮಂತರ ಪಟ್ಟಿಯಲ್ಲಿ ಆನಂದ್ ಕೃಷ್ಣನ್ ಕೂಡ ಒಬ್ಬರು. ಮಲೇಷ್ಯಾದ 3ನೇ ಶ್ರೀಮಂತ ಆನಂದ್ ಕೃಷ್ಣನ್​ರ ಮಗ ವೆನ್ ಆಜಾನ್ ಸಿರಿಮಾನ್ಯೊ ಬರೋಬ್ಬರಿ 45 ಸಾವಿರ ಕೋಟಿ ಮೌಲ್ಯದ ಸಂಪತ್ತನ್ನೇ ತೊರೆದು ತಮ್ಮ 18ನೇ ವಯಸ್ಸಿನಲ್ಲಿ ಬೌದ್ಧ ಸನ್ಯಾಸತ್ವ ಸ್ವೀಕರಿಸಿದ್ದಾರೆ.

    ಮಲೇಷ್ಯಾದಲ್ಲಿ ಎಕೆ ಎಂದೇ ಹೆಸರಾಗಿರುವ ಉದ್ಯಮಿ ಆನಂದ್ ಕೃಷ್ಣನ್ ಹಲವು ಕ್ಷೇತ್ರಗಳಲ್ಲಿ ತಮ್ಮ ಉದ್ಯಮ ಬೆಳೆಸಿದ್ದವರು. ದೂರ ಸಂಪರ್ಕ, ಮಾಧ್ಯಮ, ತೈಲ & ಅನಿಲ, ರಿಯಲ್ ಎಸ್ಟೇಟ್ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲೂ ತಮ್ಮ ವ್ಯಾಪಾರ ವಿಸ್ತರಿಸಿದವರು. ಟೆಲಿಕಾಂ ಕ್ಷೇತ್ರದಲ್ಲಿ ತಮ್ಮ ಹೆಗ್ಗುರುತು ಮೂಡಿಸಿದವರು.

    ಆನಂದ್ ಕೃಷ್ಣನ್ ಅವರ ಕಂಪನಿ ಏರ್​​ಸೆಲ್, ಭಾರತದ ಪ್ರಮುಖ ದೂರಸಂಪರ್ಕ ಕಂಪನಿ. ಅಲ್ಲದೇ ಒಂದು ಕಾಲಕ್ಕೆ ಚೆನ್ನೈ ಸೂಪರ್ ಕಿಂಗ್ಸ್​ನ ಪ್ರಾಯೋಜಕರೂ ಕೂಡ ಆಗಿದ್ದವರು. ಸುಮಾರು 9 ಕಂಪನಿಗಳಲ್ಲಿ ಅಪಾರ ಹೂಡಿಕೆ ಮಾಡಿರುವ ಆನಂದ್ ಕೃಷ್ಣನ್, ಬೌದ್ಧ ಧರ್ಮಕ್ಕೆ ಸೇರಿದವರು. ಹಲವು ಸಾಮಾಜಿಕ ಕಾರ್ಯಗಳಿಂದ ಹೆಸರುವಾಸಿಯಾಗಿರುವ ಆನಂದ್ ಕೃಷ್ಣನ್ ಬೌದ್ಧ ಧರ್ಮ, ಶಿಕ್ಷಣ, ಮಾನವೀಯ ಕಾರ್ಯಗಳಿಗೆ ಧನ ಸಹಾಯ ಮಾಡುತ್ತಾರೆ.

    ಇಂತಹ ಉದ್ಯಮಿ, ತಮ್ಮ ಏಕೈಕ ಪುತ್ರ ವೆನ್​ ಅಜಾನ್ ಸಿರಿಪಾನ್ಯೋ ಅನುವಂಶಿಕವಾಗಿ ತಮ್ಮ ಉದ್ಯಮ ಬೆಳೆಸುತ್ತಾನೇ ಎಂದೇ ನಂಬಿದ್ದರು. ಆದರೆ ಆದದ್ದೇ ಬೇರೆ. ಲಂಡನ್​ನಲ್ಲಿ ತನ್ನ ಇಬ್ಬರು ಸಹೋದರಿಯೊಂದಿಗೆ ಬೆಳೆದ ಸಿರಿಪಾನ್ಯೋ ಅಸಾಧಾರಣ ಭಾಷಾ ಸಾಮರ್ಥ್ಯ ಹೊಂದಿದ್ದಾರೆ. 8 ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಾರೆ. ಕೋಟಿ ಡಾಲರ್ ಸಂಪತ್ತು ತೊರೆದು ಸನ್ಯಾಸತ್ವ ಸ್ವೀಕರಿಸುವ ಅವರ ನಿರ್ಧಾರ ಇಡೀ ಜಗತ್ತಿನಲ್ಲಿ ಅಚ್ಚರಿ ಮೂಡಿಸಿದೆ.

    ಒಮ್ಮೆ ಸಿರಿಪಾನ್ಯೋ ಥೈಲ್ಯಾಂಡ್​ಗೆ ಭೇಟಿ ನೀಡಿದಾಗ ಅವರು ಬೌದ್ಧ ಸನ್ಯಾಸತ್ವದೆಡೆಗೆ ಆಕರ್ಷಿತರಾದರು. ಅಲ್ಲಿ ಅವರು ತಾತ್ಕಾಲಿಕ ದೀಕ್ಷೆ ಪಡೆದರು. ಅಲ್ಪಾವಧಿಯ ಸನ್ಯಾಸತ್ವದ ದೀಕ್ಷೆ ಅವರನ್ನು ಸಂಪೂರ್ಣ ಆಧ್ಯಾತ್ಮಿಕ ಜೀವನದತ್ತ ನಡೆಯುವಂತೆ ಮಾಡಿತು.

    ಕಳೆದ 2 ದಶಕಗಳಿಂದ ಸಿರಿಪಾನ್ಯೋ ಸನ್ಯಾಸತ್ವ ಜೀವನಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. ಸದ್ಯ ಥಾಯ್​ಲ್ಯಾಂಡ್​ನ ಮ್ಯಾನ್ಮಾರ್ ಗಡಿಯಲ್ಲಿರುವ ಡಿಟಾವೊ ದಮ್ ಮಠದ ಮಠಾಧೀಶರಾಗಿದ್ದಾರೆ. ಸಿರಿಪಾನ್ಯೋ ಥೇರವಾಡ ಬೌದ್ಧ ಸಂಪ್ರದಾಯವನ್ನು ಅನುಸರಿಸುತ್ತಾರೆ. ಮಿಲಿಯನ್ ಡಾಲರ್ ವ್ಯವಹಾರ ಮುನ್ನಡೆಸುವ ಬದಲು ಕಳೆದ 20 ವರ್ಷಗಳಿಂದ ಸರಳವಾಗಿ ಸನ್ಯಾಸತ್ವ ಜೀವನ ನಡೆಸುತ್ತಿದ್ದಾರೆ. ಅವರು ತಮ್ಮ ಅನುಯಾಯಿಗಳಿಗೆ ಶಾಂತಿ, ಸಾವಧಾನತೆ, ಆಂತರಿಕ ಶಾಂತಿಯನ್ನು ಬೋಧಿಸುತ್ತಾರೆ. ಅವರ ಸನ್ಯಾಸಿ ಜೀವನದ ಹೊರತಾಗಿಯೂ ತಮ್ಮ ತಂದೆಯನ್ನು ಆಗಾಗ ಭೇಟಿಯಾಗುತ್ತಾರೆ. ಸಿರಿಪಾನ್ಯೋ ತಾಯಿ ಥಾಯ್ಲೆಂಡ್​ನ ಮೊಮ್ವಜಾರೊಂಗ್ಸೆ ಸುಪ್ರಿಂದಾ ಚಕ್ರಬನ್ ಅವರು ಥಾಯ್ಲೆಂಡ್​ನ ರಾಜಮನೆತನದವರಾಗಿದ್ದಾರೆ. ಸಿರಿಪಾನ್ಯೋ ಎಲ್ಲವನ್ನೂ ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    ಭಾರತದ ಇಬ್ಬರು ದಿಗ್ಗಜ ಕ್ರಿಕೆಟಿಗರಿಗೆ ವಿದಾಯ ನೀಡಲು ಸಿದ್ಧತೆ ನಡೆಸಿದ ಆಸ್ಟ್ರೇಲಿಯಾ ಕ್ರಿಕೆಟ್​..!

    June 8, 2025

    Elon Musk: ರಾಜಕೀಯಕ್ಕೆ ಎಲಾನ್ ಮಸ್ಕ್: ವಿಶ್ವದ ಕೋಟ್ಯಾಧಿಪತಿಯ ಹೊಸ ಪಕ್ಷದ ಹೆಸರೇನು ಗೊತ್ತಾ..?

    June 7, 2025

    ಟ್ರಂಪ್ ಜೊತೆ ಬಿರುಕು: ಟೆಸ್ಲಾ ಷೇರುಗಳು ಶೇ.14 ರಷ್ಟು ಕುಸಿತ – ಮಸ್ಕ್’ಗೆ 13 ಲಕ್ಷ ಕೋಟಿ ರೂ. ನಷ್ಟ

    June 6, 2025

    Pakistan Earthquake: 48 ಗಂಟೆಗಳಲ್ಲಿ 21 ಬಾರಿ ಕಂಪಿಸಿದ ಭೂಮಿ..! ಜನರಲ್ಲಿ ಹೆಚ್ಚಿದ ಆತಂಕ

    June 5, 2025

    ಛೀ.. ಹಣಕ್ಕಾಗಿ ಹೆತ್ತವರನ್ನು ಕೊಂದು 4 ವರ್ಷಗಳ ಕಾಲ ಶವಗಳೊಂದಿಗೆ ಬದುಕಿದ ಮಗಳು!

    June 5, 2025

    ಅಮೆರಿಕ ಅಧ್ಯಕ್ಷ ಟ್ರಂಪ್ ವಿರುದ್ಧ ಗಂಭೀರ ಆರೋಪ ಮಾಡಿದ ಮಸ್ಕ್..! ಕಾರಣವೇನು ಗೊತ್ತಾ..?

    June 4, 2025

    ಫೈನಲ್ ಫೈಟ್: RCBಗೆ ಶುಭ ಕೋರಿದ ಬ್ರಿಟನ್ ಮಾಜಿ ಪ್ರಧಾನಿ!

    June 3, 2025

    TikTok star: ಪಾಕಿಸ್ತಾನದ 17 ವರ್ಷದ ಟಿಕ್ ಟಾಕ್ ಸ್ಟಾರ್ ಮೇಲೆ ಗುಂಡಿಕ್ಕಿ ಹತ್ಯೆ..!

    June 3, 2025

    ಪಾಕಿಸ್ತಾನದಲ್ಲಿ ಭೂಕಂಪ: ಜೈಲಿನ ಗೋಡೆ ಕುಸಿತ, 216 ಕೈದಿಗಳು ಪರಾರಿ

    June 3, 2025

    ಬಾಂಗ್ಲಾ ಮಾಜಿ ಪ್ರಧಾನಿ ವಿರುದ್ಧ ವಿಚಾರಣೆ ಶುರು: ಶೇಖ್ ಹಸೀನಾಗೆ ಮರಣದಂಡನೆ ಸಾಧ್ಯತೆ!

    June 2, 2025

    ಲಕ್ಷಾಂತರ ಜೇನುನೊಣಗಳನ್ನು ಸಾಗಿಸುತ್ತಿದ್ದ ಟ್ರಕ್ ಪಲ್ಟಿ: ಆಗಿದ್ದೇನು? ಆಮೇಲೇನಾಯ್ತು?

    June 1, 2025

    Nigeria floods: ನೈಜೀರಿಯಾದಲ್ಲಿ ಪ್ರವಾಹ: 111 ಮಂದಿ ಸಾವು

    May 31, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.