ಬೆಂಗಳೂರು: ನಮ್ಮದೇ ಗಾಡಿ ಫುಲ್ ಇದೆ, ಜೆಡಿಎಸ್ 14 ಜನರನ್ನು ತೆಗೆದುಕೊಂಡು ನಾವೇನು ಮಾಡೋಣ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಓವರ್ ಲೋಡೆಡ್ ಇದ್ರೂ ನಮ್ಮದು ಕಾಂಗ್ರೆಸ್ ಪಕ್ಷವೇ.
ಇಲ್ಲಿಯೇ ಅಧ್ಯಕ್ಷ ಆಗಬೇಕು ಇಲ್ಲಿಯೇ ಸಿಎಂ ಆಗಬೇಕು. ಸದ್ಯಕ್ಕೆ ವೈಟಿಂಗ್ ಲಿಸ್ಟ್ ನಲ್ಲಿ ಇದ್ದೇವೆ ಇಲ್ಲಿಯೇ ಕಾಯ್ತೇವೆ ಎಂದು ಹೇಳಿದ್ದಾರೆ.
ವಾಸ್ತು ಪ್ರಕಾರ ಈ ದಿಕ್ಕಿನಲ್ಲಿ ಮಲಗಿ: ಜೀವನದಲ್ಲಿ ಅನಿರೀಕ್ಷಿತ ಅದೃಷ್ಟ ನಿಮ್ಮದಾಗುತ್ತೆ.!
ನನ್ನದು ಆರ್.ಎಸ್.ಸಿ ಟಿಕೆಟ್. ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದು ಕಾಯುತ್ತೇನೆ. ಯಾರಾದ್ರೂ ಮೆಜೆಸ್ಟಿಕ್ ಜಾಂನಲ್ಲಿ ಸಿಕ್ಕಿಹಾಕಿಕೊಂಡು ಬರುವುದು ತಡವಾದರೆ ನಮಗೆ ಅವಕಾಶ ಸಿಗಬಹುದು. ಎಲ್ಲರೂ ಆರ್ ಎಸ್ ಸಿ ಟಿಕೆಟ್ ಇಟ್ಟುಕೊಂಡೇ ಕಾಯ್ತಿದ್ದಾರೆ ಎಂದು ಹೇಳಿದ್ದಾರೆ.
ನಾವು ಇಲ್ಲೇ ಮಂತ್ರಿ,ಮುಖ್ಯಮಂತ್ರಿ ಆಗಬೇಕು, ನಾವೇನು ಫೋಟೋ ತೆಗೆಸಿಕೊಂಡು ಆಕಬೇಕಿಲ್ಲ, ಇಲ್ಲಿ ಶಿಂಧೆ, ಪವಾರ್ ಯಾರು ಇಲ್ಲ ಆ ಸಾಮರ್ಥ್ಯ ಯಾರಿಗೂ ಇಲ್ಲ ಎಂದರು.