ಬಿಸಿನೀರು ರಕ್ತನಾಳಗಳನ್ನು ವಿಸ್ತರಿಸುತ್ತದೆ, ಇದರಿಂದಾಗಿ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ರಕ್ತದ ಉತ್ತಮ ಪರಿಚಲನೆಯು ಸ್ನಾಯುಗಳನ್ನು ವಿಶ್ರಾಂತಿ ಮಾಡಲು ಮತ್ತು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೆಚ್ಚಗಿನ ನೀರಿನ ದೈನಂದಿನ ಪ್ರಮಾಣವು ಕೊಬ್ಬಿನ ನಿಕ್ಷೇಪಗಳನ್ನು ಒಡೆಯಲು, ಸ್ನಾಯುಗಳನ್ನು ವಿಶ್ರಾಂತಿ ಮಾಡಲು ಮತ್ತು ರಕ್ತದ ಹರಿವನ್ನು ಹೆಚ್ಚಿಸಲು ದೇಹಕ್ಕೆ ಸಹಾಯ ಮಾಡುತ್ತದೆ. ಜೊತೆಗೆ, ರಕ್ತ ಪರಿಚಲನೆಯಲ್ಲಿನ ಹೆಚ್ಚಳವು ಚರ್ಮದ ಕೋಶಗಳನ್ನು ಸಂಪೂರ್ಣವಾಗಿ ಪೋಷಿಸುವಾಗ ಅವುಗಳನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡುತ್ತದೆ
ಡೆಲ್ಲಿಗೆ ಆಘಾತ: ಮುಂಬೈ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದ DC, ಪ್ಲೇ ಆಫ್ ಗೆ MI ಎಂಟ್ರಿ!
ನೀರಿನಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು ಎಂದು ಎಷ್ಟೋ ಮಂದಿಗೆ ಗೊತ್ತಿಲ್ಲ. ರುಚಿಯಿಲ್ಲದ ಶುದ್ಧ ನೀರು ನಮ್ಮ ಬಾಯಾರಿಕೆಯನ್ನು ನೀಗಿಸುತ್ತದೆ. ಇದು ದೇಹವನ್ನು ಹೈಡ್ರೇಟ್ ಆಗಿ ಇಡುತ್ತದೆ. ಆದರೆ ತಣ್ಣೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಾ ಅಥವಾ ಬಿಸಿ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದೋ ಎಂದು ನಾವಿಂದು ನೋಡೋಣ ಬನ್ನಿ.
ಬಿಸಿನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳು: ಬೆಳಗ್ಗೆ ಎದ್ದ ಕೂಡಲೇ ಬಿಸಿನೀರು ಕುಡಿಯುವ ಅಭ್ಯಾಸ ನಿಮಗಿದ್ಯಾ? ಅನೇಕ ಮಂದಿ ಇದನ್ನು ಆಚರಣೆಯಂತೆ ಪಾಲಿಸುತ್ತಾರೆ. ಬೆಳಗ್ಗೆ ಎದ್ದ ನಂತರ ಬಿಸಿ ನೀರು ಕುಡಿಯುವುದರಿಂದ ನಿಮ್ಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಬಿಸಿನೀರು ಕುಡಿಯುವುದರಿಂದ ರಕ್ತದ ಹರಿವು ಮತ್ತು ನಿರ್ವಿಶೀಕರಣಕ್ಕೆ ಸಹಕಾರಿಯಾಗುತ್ತದೆ ಎಂದು ಡಾ.ಉಷಾಕಿರಣ್ ಸಿಸೋಡಿಯಾ ಹೇಳುತ್ತಾರೆ
ತಣ್ಣೀರಿನ ಬದಲು ಬಿಸಿನೀರು ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ ಎಂದು ಅನೇಕ ಅಧ್ಯಯನಗಳು ತಿಳಿಸಿವೆ. ಬಿಸಿ ನೀರು ತೂಕ ಇಳಿಸಿಕೊಳ್ಳಲು ತುಂಬಾ ಸಹಕಾರಿ ಆಗಿದೆ. ನಾವು ತಿನ್ನುವ ಅರ್ಧ ಗಂಟೆಗೂ ಮುನ್ನ ಬಿಸಿನೀರನ್ನು ಸೇವಿಸಿದರೆ, ಅದು ನಮ್ಮ ಚಯಾಪಚಯವನ್ನು 30% ರಷ್ಟು ಹೆಚ್ಚಿಸುತ್ತದೆ. ನೀರು ಬಿಸಿ ಕುಡಿದಷ್ಟೂ ಚಯಾಪಚಯ ಕ್ರಿಯೆ ಉತ್ತಮವಾಗಿ ನಡೆಯುತ್ತದೆ. ಆದರೆ ತುಂಬಾ ಬಿಸಿಯಾಗಿರುವ ನೀರನ್ನು ಕುಡಿಯುವುದು ಗಂಭೀರ ಅಡ್ಡ ಪರಿಣಾಮಗಳನ್ನು ಎದುರಿಸಬೇಕಾಗಬಹುದು.
ಬಿಸಿ ನೀರು ಕುಡಿಯುವುದಕ್ಕೆ ಸರಿಯಾದ ಸಮಯ ಯಾವುದು?: ಬೆಳಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರನ್ನು ಕುಡಿಯುವುದು ಉತ್ತಮ. ಅದೇ ರೀತಿ ಜೀರ್ಣಕ್ರಿಯೆ ಉತ್ತಮವಾಗಿರಲಿ ಎಂದು ಬಯಸುವವರು ಊಟಕ್ಕೂ ಮುನ್ನ ಬಿಸಿನೀರು ಕುಡಿಯಬೇಕು ಎಂದು ಡಾ.ಸಿಸೋಡಿಯಾ ಹೇಳುತ್ತಾ
ಬಿಸಿನೀರು ಕುಡಿಯುವುದು ನಮ್ಮ ಆರೋಗ್ಯಕ್ಕೆ ಒಳ್ಳೆಯದು ಆದರೂ, ಇದು ತಣ್ಣೀರು ಅಥವಾ ಕೋಣೆಯ ಉಷ್ಣಾಂಶದ ನೀರಿಗಿಂತ ಉತ್ತಮವಾಗಿದೆ ಎಂಬುದಕ್ಕೆ ಯಾವುದೇ ವೈದ್ಯಕೀಯ ಪುರಾವೆಗಳಿಲ್ಲ. ನೀವು ಎಲ್ಲಾ ಸಮಯದಲ್ಲೂ ಹೈಡ್ರೀಕರಿಸಿರುವುದು ಮುಖ್ಯ. ಆದರೆ ತಣ್ಣೀರು ಅಥವಾ ಬಿಸಿನೀರು ಒಬ್ಬರ ಆದ್ಯತೆ ಮತ್ತು ಸೌಕರ್ಯವನ್ನು ಅವಲಂಬಿಸಿರುತ್ತದೆ.
ಬಿಸಿ ನೀರು ಕುಡಿಯುವುದರಿಂದ ಯಾವುದಾದರೂ ಅಡ್ಡ ಪರಿಣಾಮಗಳಿದ್ಯಾ?: ಬಿಸಿನೀರು ಕುಡಿಯುವುದು ನಮ್ಮ ಆರೋಗ್ಯಕ್ಕೆ ಒಳ್ಳೆಯದಾದರೂ, ಅತಿಯಾಗಿ ಬಿಸಿ ನೀರು ಕುಡಿಯುವುದು ಹಾನಿಕಾರಕವಾಗಿದೆ. ಹೆಚ್ಚು ಬಿಸಿನೀರು ಕುಡಿಯುವುದರಿಂದ ಬಾಯಿ ಮತ್ತು ಗಂಟಲು ಸುಡಬಹುದು. ಹಾಗಾಗಿ ನೀರು ತುಂಬಾ ಬಿಸಿಯಾಗಿರಬಾರದು.
ಮಿತವಾಗಿ ಬಿಸಿನೀರು ಕುಡಿಯುವುದು ಅಪಾಯಕಾರಿ ಅಲ್ಲ, ಆದರೆ ಕಡಿಮೆ ಸಮಯದಲ್ಲಿ ಹೆಚ್ಚು ಬಿಸಿನೀರು ಕುಡಿಯುವುದು ನಿರ್ಜಲೀಕರಣಕ್ಕೆ ಕಾರಣವಾಗಬಹುದು