ಹಾಸನ:- ಹೃದಯಾಘಾತದಿಂದ 19 ವರ್ಷದ ಯುವಕ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಜೆಪಿ ನಗರದಲ್ಲಿ ಜರುಗಿದೆ. 19 ವರ್ಷದ ನಿಶಾಂತ್ ಮೃತಪಟ್ಟ ಯುವಕ.
ನಿಶಾಂತ್ ಡಿಪ್ಲೋಮಾ ಮುಗಿಸಿ ಕೈಗಾರಿಕಾ ತರಬೇತಿ ಸಲುವಾಗಿ 15 ದಿನದ ಹಿಂದೆ ಬೆಂಗಳೂರಿಗೆ ತೆರಳಿದ್ದರು. ಇಂದು ರೂಂನಲ್ಲಿದ್ದಾಗ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತದೇಹವನ್ನು ಬೆಂಗಳೂರಿನ ಸೆಂಟ್ ಜಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ಮರಣೋತ್ತರ ಪರೀಕ್ಷೆ ಬಳಿಕ ಹಾಸನಕ್ಕೆ ತರಲಾಗುತ್ತದೆ.