ಚಿತ್ರದುರ್ಗ:- ಜಿಲ್ಲೆ ಹೊಳಲ್ಕೆರೆ ತಾಲೂಕಿನ ಅರಸನಘಟ್ಟ ಗ್ರಾಮದಲ್ಲಿ ಹೃದಯಾಘಾತದಿಂದ ಸರ್ಕಾರಿ ಆಸ್ಪತ್ರೆಯ ವೈದ್ಯರೋರ್ವರು ಸಾವನ್ನಪ್ಪಿರುವ ಘಟನೆ ಜರುಗಿದೆ.
48 ವರ್ಷದ ಡಾ. ಎನ್. ಸಂದೀಪ ಮೃತ ವೈದ್ಯ. ಇವರು ಶಿವಮೊಗ್ಗದ ಹೊಳೆಹೊನ್ನೂರು ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದರು. ಇದ್ದಕ್ಕಿದ್ದಂತೆ ಸುಸ್ತು ಕಾಣಿಸಿಕೊಂಡ ಹಿನ್ನೆಲೆ ಜುಲೈ 28 ರಂದು ಶಿವಮೊಗ್ಗದಲ್ಲಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು.
ಆದರೆ ಚಿಕಿತ್ಸೆ ಫಲಕಾರಿಯಾಗದೇ ಇದೀಗ ಡಾ. ಸಂದೀಪ ಸಾವನ್ನಪ್ಪಿದ್ದಾರೆ. ಸ್ವಗ್ರಾಮ ಅರಸನಘಟ್ಟದಲ್ಲಿ ಡಾ. ಸಂದೀಪ ಅಂತ್ಯಸಂಸ್ಕಾರ ನೆರವೇರಿದೆ. ವೈದ್ಯನೇ ಹೃದಯಾಘಾತಕ್ಕೆ ಬಲಿ ಹಿನ್ನೆಲೆ ಜನರಲ್ಲಿ ಆತಂಕ ಹೆಚ್ಚಾಗಿದೆ.
ಇನ್ನೂ ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಮೃತಪಡುವವರ ಸಂಖ್ಯೆ ಹೆಚ್ಚಾಗಿದ್ದು, ರಾಜ್ಯದ ಜನ ಭಯಭೀತರಾಗಿದ್ದಾರೆ.