ದಾವಣಗೆರೆ:- ಬೆಣ್ಣೆ ನಗರಿ ದಾವಣಗೆರೆಯಲ್ಲಿ ಜನರ ಹೃದಯ ಹಿಂಡಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ಕಳೆದ ಮೂರು ತಿಂಗಳಲ್ಲಿ 75 ಜನರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಏಪ್ರಿಲ್ ನಲ್ಲಿ 22, ಮೇ ನಲ್ಲಿ 29 ಹಾಗೂ ಜೂನ್ ನಲ್ಲಿ 24 ಜನ ಮೃತಪಟ್ಟಿದ್ದಾರೆ.
ನಿವೃತ ಯೋಧನಿಗೆ ಕೊಡಗಿನಲ್ಲಿ ಅದ್ದೂರಿ ಸ್ವಾಗತ: ಊರಿನ ಪ್ರಮುಖ ಬೀದಿಯಲ್ಲಿ ಮೆರವಣಿಗೆ!
ಈ ಮೂರು ತಿಂಗಳಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿಯೇ 75 ಜನ ಸಾವನ್ನಪ್ಪಿದ್ದಾರೆ. ಮೂರು ತಿಂಗಳಲ್ಲಿ ಹೃದಯಾಘಾತಕ್ಕೆ 75 ಜನರ ದುರಂತ ಸಾವು ಇದು ಸಣ್ಣ ಸಂಖ್ಯೆಯಲ್ಲ. ದಾವಣಗೆರೆ ಜಿಲ್ಲಾ ಆಸ್ಪತ್ರೆಯಿಂದ ಮಾಹಿತಿ. ಜಿಲ್ಲಾ ಆಸ್ಪತ್ರೆಯಲ್ಲಿನ ಸಾವಿನ ಸಂಖ್ಯೆ 75. ಇನ್ನು ತಾಲೂಕವಾರು ಕಳೆದ ವರ್ಷ 15, ಈ ವರ್ಷ 9 ಸಾವು. ಜಗಳೂರು ಕಳೆದ ವರ್ಷ 03, ಈ ವರ್ಷ 01, ಹರಿಹರ ಕಳೆದ ವರ್ಷ 05 ಈ ವರ್ಷ 03, ಹೊನ್ನಾಳಿ ಕಳೆದ ವರ್ಷ 07 ಈ ವರ್ಷ 05, ಇಸಿಜಿ ಮತ್ತು ಹೃದಯ ಸಂಬಂಧಿ ತಪಾಸಣೆಗೆ ಸಂಖ್ಯೆ ಹೆಚ್ಚಳ ಮುಂಜಾಗೃವಾಗಿ ಬೆಡ್ ಸಂಖ್ಯೆ ಹೆಚ್ಚಳ. ದಾವಣಗೆರೆ ಸಿಜೆ ಆಸ್ಪತ್ರೆಯಲ್ಲಿ 50 ಬೆಡ್ ಮೀಸಲು, ಪ್ರತಿ ತಾಲೂಕಾ ಆಸ್ಪತ್ರೆಯಲ್ಲಿ ಐದರಿಂದ ಹತ್ತರವರಗೆ ಬೆಡ್ ಮೀಸಲಿಡಲಾಗಿದೆ.
ದಾವಣಗೆರೆ ಪ್ರಸಿದ್ಧಿ ಪಡೆದಿದ್ದು ಬೆಣ್ಣೆ ದೋಸೆಯಿಂದ. ಬೆಣ್ಣೆಯಲ್ಲಿ ಕೊಬ್ಬಿನಂಶ ಜಾಸ್ತಿ. ಇದೇ ಕಾರಣಕ್ಕೆ ಹೃದಯಕ್ಕೆ ಕೊಬ್ಬಿಣ ಕಾಟ ಅಂದುಕೊಳ್ಳಬೇಡಿ. ರಾಜ್ಯದ ಬೇರೆ ಜಿಲ್ಲೆಗಳಿಗೆ ಹೊಲಿಕೆ ಮಾಡಿದ್ರೆ ದಾವಣಗೆರೆಪ ಸ್ವಲ್ಪ ಕಡಿಮೆ.ಇನ್ನು ಹೃದಯಾಘಾತದ ಸುದ್ದಿ ಹಬ್ಬುತ್ತಿದ್ದಂತೆ ಜನರ ನೇರವಾಗಿ ಜಿಲ್ಲಾ ಆಸ್ಪತ್ರೆ ಮೆಟ್ಟಿಲೇರುತ್ತಿದ್ದು. ಬೆಳಿಗ್ಗೆಯಿಂದ ಸಾಲು ಸಾಲಾಗಿ ನಿಂತು ಇಸಿಜಿ ಮಾಡಿಕೊಂಡು ಹೋಗುತ್ತಿದ್ದಾರೆ. ಇತ್ತೀಚಿಗೆ ಎದೆ ನೋವು ಕಾಣಿಸಿಕೊಂಡವರು, ಕಿರಿಯ ಹಾಗೂ ಹಿರಿಯ ವಯಸ್ಸಿನವರು ಆಸ್ಪತ್ರೆಯತ್ತ ಮುಖಮಾಡಿದ್ದು, ಆರ್ಟ್ ಚೆಕಪ್ ಮಾಡಿಸಿಕೊಳ್ಳುತ್ತಿದ್ದಾರೆ.