ವಿಜಯನಗರ : ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, ಅನಾಹುತ ಸಂಭವಿಸಿವೆ. ರೇಷ್ಮೆ ಗೂಡಿಗೆ ಸಿಡಿಲು ಬಡಿದು ರೈತನೋರ್ವ ಸಾವನಪ್ಪಿದ್ದಾನೆ.
ಮಳೆಯ ಪರಿಣಾಮ ಸಿಡಿಲು ಬಡಿದು ಹುಣಸೆಕಟ್ಟೆಯ ರೈತ ಬಸವರಾಜಪ್ಪ ಸಾವನ್ನಪ್ಪಿದ್ದಾರೆ. ಬಸವರಾಜಪ್ಪ ರೇಷ್ಮೆ ಗೂಡಿನ ಬಳಿ ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಗಾಳಿ ಸಹಿತ ಮಳೆ ಶುರುವಾಗಿದ್ದು, ಏಕಾಏಕಿ ಸಿಡಿಲು ಬಡಿದು ದುರಂತ ಸಂಭವಿಸಿದೆ.
ಅಲ್ಲದೇ ಅಡವಿಹಳ್ಳಿಯ ಸಮೀಪದ ಹೊಂಬಳಗಟ್ಟೆ, ನಂದಿಬೇವೂರಿನಲ್ಲಿ ಬಳಿ ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿವೆ. ವಿದ್ಯುತ್ ಕಂಬಗಳು ಧರೆಗುರುಳಿವೆ.