ಮಂಗಳೂರು:- ನಗರದಲ್ಲಿ ಸುರಿದ ಧಾರಾಕಾರ ಮಳೆಗೆ ಬೃಹದಾದ ಆವರಣ ಗೋಡೆ ಕುಸಿತವಾಗಿರುವ ಭಯಾನಕ ಘಟನೆ ಮಂಗಳೂರಿನ ಕಂಕನಾಡಿಯ ಸುವರ್ಣ ಲೇನ್ ಬಳಿ ಜರುಗಿದೆ.
ಆವರಣ ಗೋಡೆ ಕುಸಿತವಾದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೃಹದಾದ ಆವರಣ ಗೋಡೆ ಕುಸಿತ ಹಿನ್ನೆಲೆ ರಸ್ತೆಯ ಮೇಲೆ ಕಾಂಪೌಂಡ್ ವಾಲ್ ಕುಸಿದು ಬಿದ್ದಿದೆ. ಅದೃಷ್ಟವಶಾತ್ ರಸ್ತೆಯಲ್ಲಿ ಜನ, ವಾಹನ ಸಂಚಾರ ಇಲ್ಲದ ಕಾರಣ ಭಾರಿ ಅನಾಹುತ ತಪ್ಪಿದೆ
ಆವರಣ ಗೋಡೆ ರಸ್ತೆ ಮೇಲೆ ಕುಸಿದು ಎದುರು ಬದಿಯ ಕಾಂಪೌಂಡ್ ಗೆ ಹಾನಿ ಆಗಿದೆ. ಬಿದ್ದ ರಭಸಕ್ಕೆ ಮನೆಯ ಕಾಪೌಂಡ್ ಗೆ ಅಳವಡಿಸಿದ್ದ ಗೇಟ್ ಕಿತ್ತು ಹೋಗಿದೆ. ಜಲಸ್ಫೋಟದ ರೀತಿ ಭಯಾನಕ ದೃಶ್ಯ ಕಂಡು ಬಂದಿದೆ. ಘಟನೆಯಿಂದ ವಿದ್ಯುತ್ ಕಂಬ ಎರಡು ತುಂಡಾಗಿ ಧರೆಗೆ ಉರುಳಿದೆ. ಸಧ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.