ಬೆಂಗಳೂರು:- ನಗರದಲ್ಲಿ ಸುರಿದ ಭಾರೀ ಮಳೆಗೆ ಬೃಹತ್ ಗಾತ್ರದ ಮರವೊಂದು ಧರೆಗುರಳಿದ ಘಟನೆ ರಾಜಾಜಿನಗರದಲ್ಲಿ ಜರುಗಿದೆ.
ಮರ ಬಿದ್ದ ಪರಿಣಾಮ, ರಸ್ತೆ ಬದಿ ನಿಂತಿದ್ದ ಎರಡು ಕಾರು ಜಖಂಗೊಂಡಿದೆ. ಸ್ಕಾರ್ಫಿಯೋ ಮತ್ತು ಸ್ವಿಫ್ಟ್ ಕಾರಿನ ಮೇಲೆ ಮರು ಬಿದ್ದು, ಕಾರುಗಳು ಅಪ್ಪಚ್ಚಿಯಾಗಿದೆ. ಇಂದು ಮಧ್ಯಾಹ್ನ ಬಿದ್ದ ಭಾರೀ ಮಳೆಗೆ ಈ ದುರಂತ ಸಂಭವಿಸಿದೆ. ಕಾರಿನ ಜೊತೆಗೆ ಬೈಕ್ ಗಳು ಜಖಂ ಆಗಿರುವ ಮಾಹಿತಿ ಲಭ್ಯವಾಗಿದೆ. ಸದ್ಯ ಮರ ಬಿದ್ದು ರಸ್ತೆ ಬ್ಲಾಕ್ ಆಗಿದ್ದು, ಸ್ಥಳಕ್ಕೆ ಬಿಬಿಎಂಪಿ ಹಾಗೂ ಕೆ.ಇ.ಬಿ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಅಲ್ಲದೇ ಮರ ತೆರವುಗೊಳಿಸುವ ಪ್ರಯತ್ನ ಮಾಡಲಾಗ್ತಿದೆ.