ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ರಾಜಕಾಲುವೆ ನೀರು ಮನೆಗಳಿಗೆ ನುಗ್ಗಿದ ಪರಿಣಾಮ ಜನತೆ ಹೈರಾಣಾಗಿದ್ದಾರೆ.
ಆಂಧ್ರಪ್ರದೇಶದಲ್ಲಿ ದುರಂತ: ಬಾವಿಗೆ ಕಾರು ಬಿದ್ದು ಕರ್ನಾಟಕದ ಮೂವರು ಸಾವು!
ಭಾನುವಾರ ರಾತ್ರಿ ಹೆಬ್ಬಾಳ, ಗೊರಗುಂಟೆಪಾಳ್ಯ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಗುಂಡಿಗಳಲ್ಲಿ ನೀರು ತುಂಬಿಕೊಂಡು ಸಂಚಾರ ಕಷ್ಟವಾಗಿದೆ. ಭಾನುವಾರ ರಾತ್ರಿ ಸುರಿದ ಧಾರಾಕಾರ ಸುರಿದ ಮಳೆಗೆ ವಾಹನ ಸವಾರರು ಪರದಾಡಿದರು. ಭಾನುವಾರ ಎಂದು ಹೊರಗೆ ಬಂದಿದ್ದವರೆಲ್ಲ ಫಜೀತಿ ಅನುಭವಿಸಿದ್ದಾರೆ.
ಶನಿವಾರ ಸುರಿದಿದ್ದ ಮಳೆಗೆ ಸಾಯಿ ಲೇಔಟ್ ಜನರು ಇನ್ನೂ ಪರದಾಡುತ್ತಿದ್ದಾರೆ. ಇಡೀ ಏರಿಯಾಗೇ ಏರಿಯಾನೇ ಜಲಾವೃತಗೊಂಡಿದೆ. ರಸ್ತೆ ತುಂಬ ನೀರು, ಮನೆಗಳಿಗೂ ನೀರು ನುಗ್ಗಿ ಸಾಯಿಲೇಔಟ್ ಕೆರೆಯಂತಾಗಿದೆ. ರಾತ್ರಿಯಿಡಿ ಜಾಗರಣೆ ಮಾಡಿ ಬೆಳಗ್ಗೆಯಾದ್ರೂ ಮನೆಗಳಿಗೆ ನುಗ್ಗಿದ್ದ ರಾಜಕಾಲುವೆ ನೀರು ತಗ್ಗದೇ ನಿವಾಸಿಗಳು ಹಿಂಸೆ ಅನುಭವಿಸಿದರು.
ಭಾನುವಾರ ಮಧ್ಯಾಹ್ನ ಸಾಯಿ ಲೇಔಟ್ಗೆ ಭೇಟಿ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಟ್ರ್ಯಾಕ್ಟರ್ ಏರಿ ಏರಿಯಾ ಪರಿಶೀಲಿಸಿದ್ದಾರೆ. ಇದೇ ವೇಳೆ ಬಿಬಿಎಂಪಿ ಕಮಿಷನರ್ ಎದುರು ಮಹಿಳೆಯೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.
ಸಿಲ್ಕ್ ಬೋರ್ಡ್ ಜಂಕ್ಷನ್ನಿಂದ ನಗರದ ಹೊರ ಹೋಗುವ ಮತ್ತು ಒಳ ಬರುವ ಕಡೆಗೆ ನಿಧಾನಗತಿಯ ಸಂಚಾರ ಇದೆ. ವಿದ್ಯಾಶಿಲ್ಪ ರೈಲ್ವೆ ಅಂಡರ್ಪಾಸ್ ನಿಂದ ಏರ್ಪೋರ್ಟ್ ಕಡೆಗೂ ಸಂಚಾರ ನಿಧಾನ ಇದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ. ಇಷ್ಟೇ ಅಲ್ಲದೆ, ಇನ್ನೂ ಅನೇಕ ಪ್ರದೇಶಗಳಲ್ಲಿ ನಿಧಾನಗತಿಯ ಸಂಚಾರ ಇರುವುದಾಗಿ ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ.