ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಜೋರಾಗಿ ಮಳೆ ಸುರಿದಿದ್ದು ತಡರಾತ್ರಿಯಿಂದ ಹಿಡಿದು ಬೆಳಗಿನ ಜಾವದವರೆಗೂ ಭಾರೀ ಮಳೆ ಬಿದ್ದಿದೆ.
ಮಳೆನೀರಿನಂದಾಗಿ ಜನತಾ ಬಜಾರ್, ಹಳೇಹುಬ್ಬಳ್ಳಿ, ಆನಂದನಗರದ ಕೆಲವು ತಗ್ಗು ಪ್ರದೇಶಗಳಲ್ಲಿ ಮತ್ತು ಬಿ.ಆರ್.ಟಿ.ಎಸ್. ರಸ್ತೆಯಲ್ಲಿ ನೀರು ನಿಂತಿದ್ದು ಜನರು ಪರದಾಡುವ ಸ್ಥಿತಿ ನಿರ್ಮಾಣ ಇನ್ನು ನಗರದ ಲ್ಯಾಮಿಂಗ್ಟನ್ ರಸ್ತೆ, ದಾಜೀಬಾನಪೇಟೆ, ಸಂಗೊಳ್ಳಿ ರಾಯಣ್ಣ ಸರ್ಕಲ್ ಹಾಗೂ ಚೆನ್ನಮ್ಮ ವೃತ್ತದ ಸುತ್ತಲೂ ಮಳೆ ನೀರು ನಿಂತ ಪರಿಣಾಮವಾಗಿ ಜನರಿಗೆ ಹಾಗೂ ವ್ಯಾಪಾರಸ್ಥರಿಗೆ ತೀವ್ರ ಸ್ವರೂಪದ ತೊಂದರೆ ಆಗಿದೆ.