ಬೆಂಗಳೂರು:- ಕೋರಮಂಗಲ, ಆಡುಗೋಡಿ ಸೇರಿ ಹಲವೆಡೆ ಭಾರೀ ಮಳೆ ಆಗಿದೆ. ಕೋರಮಂಗಲ, ಆಡುಗೋಡಿ, ಎಲೆಕ್ಟ್ರಾನ್ ಸಿಟಿ ಸುತ್ತಮುತ್ತ ಇಂದು ಮಳೆಯಾಗಿದ್ದು, ಬಿಸಿಲ ಬೇಗೆಗೆ ಕಾದಿದ್ದವರು ಫುಲ್ ಕೂಲ್ ಆಗಿದ್ದಾರೆ.
ನಗರದ ಹಲವೆಡೆ ಇಂದು ಸಂಜೆ ಮುಂಗಾರು ಪೂರ್ವ ಮಳೆಯಾಗಿದ್ದು, ರಸ್ತೆಯಲ್ಲಿ ಸಿಲುಕಿದ್ದ ವಾಹನ ಸವಾರರು ಪರದಾಡುವ ದೃಶ್ಯ ಕಂಡು ಬಂದಿದೆ.
ಕೆಲ ದಿನಗಳಿಂದ ರಾಜ್ಯದ ಹಲವೆಡೆ ಮುಂಗಾರು ಪೂರ್ವ ಮಳೆ ಉತ್ತಮವಾಗಿದೆ. ಬೆಂಗಳೂರಲ್ಲಿ ಮುಂದಿನ ಕೆಲವು ದಿನಗಳು ವರುಣನ ಅಬ್ಬರ ಮುಂದುವರೆಯುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದ್ದು, ಏಪ್ರಿಲ್ 24, 25ರಂದು ಮತ್ತೆ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ಇನ್ನು ಮುಂದಿನ 3 ಗಂಟೆಗಳಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಿಕ್ಕಬಳ್ಳಾಪುರ, ದಾವಣಗೆರೆ, ರಾಮನಗರ, ಚಿತ್ರದುರ್ಗ, ತುಮಕೂರು, ಶಿವಮೊಗ್ಗ ಜಿಲ್ಲೆಯ ಒಂದು ಅಥವಾ ಎರಡು ಕಡೆ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ.