ನೆಲಮಂಗಲ:- ನೆಲಮಂಗಲ ನಗರದ ಸುತ್ತಮುತ್ತ ಬುಧವಾರ ರಾತ್ರಿ ಬಾರಿ ಮಳೆಯಾಗಿದೆ. ಸತತ ಅರ್ಧ ಗಂಟೆಯಿಂದ ಸುರಿದ ಮಳೆಗೆ ನೆಲಮಂಗಲ ನಗರದ ಅರಿಶಿನಕುಂಟೆ ಬೈಪಾಸ್ ಗೆ ಮಳೆಯ ನೀರು ನುಗ್ಗಿದೆ. ಬೈಪಾಸ್ ಗೆ ಮಳೆಯ ನೀರು ನುಗ್ಗಿದ ಹಿನ್ನೆಲೆ ವಾಹನ ಸವಾರರು ಪರದಾಟ ನಡೆಸಿದ್ದಾರೆ. ಮಳೆಯ ನೀರು ನುಗ್ಗಿದ ಪರಿಣಾಮ ವಾಹನಗಳು ಕೆಟ್ಟು ನಿಂತಿವೆ.
ಕ್ರಿಕೆಟ್ ಬಾಲ್ ವಿಚಾರಕ್ಕೆ ಕಿರಿಕ್: ಬಿಯರ್ ಬಾಟ್ಲಿಯಿಂದ ಶಿಕ್ಷಕನಿಗೆ ಥಳಿಸಿದ ಯುವಕ!
ಜಿಲ್ಲೆಯ ನಾನಾ ಭಾಗಗಳಲ್ಲಿ ನಿನ್ನೆ ಭಾರೀ ಮಳೆಯಾಗಿದ್ದು, ರಸ್ತೆಗಳಲ್ಲಿ ನೀರು ತುಂಬಿಕೊಂಡು ಭಾರೀ ಅವಾಂತರವೇ ಸೃಷ್ಟಿಯಾಗಿದೆ.
ಇಂದು ರಾತ್ರಿ ಸತತ ಅರ್ಧ ಗಂಟೆಯಿಂದ ಮಳೆ ಸುರಿಯುತ್ತಿದ್ದು, ಒಂದು ಅಡಿ ನೀರು ರಸ್ತೆ ಮೇಲೆ ನಿಂತಿದೆ. ಇದರಿಂದ ನೆಲಮಂಗಲ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಜಲಾವೃತಗೊಂಡಿದೆ. ಇನ್ನು ಅರಿಶಿನಕುಂಟೆ ಬೈಪಾಸ್ ಗೆ ಮಳೆ ನೀರು ನುಗ್ಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಇನ್ನು ಮಳೆ ನೀರು ಹೊಕ್ಕು ಕಾರು, ಬೈಕ್, ಆಟೋ ಗಳು ಕೆಟ್ಟು ನಿಂತಿದ್ದು, ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ.