ಹುಬ್ಬಳ್ಳಿ: ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿದ ಹಿನ್ನೆಲೆ ಮನೆಗಳಿಗೆ ನೀರು ನುಗ್ಗಿದ ಹಿನ್ನೆಲೆ ಜನಜೀವನ ಅಸ್ತವ್ಯಸ್ತವಾಗಿದೆ. ಜಿಲ್ಲೆಯ ನವಲಗುಂದ ತಾಲೂಕಿನ ಯಮನೂರ ಗ್ರಾಮದಲ್ಲಿ ಭಾರೀ ಮಳೆ ಹಿನ್ನೆಲೆ ಮನೆಗಳಿಗೆ ನೀರು ನುಗ್ಗಿದೆ. ಪರಿಣಾಮ ಮನೆಯಿಂದ ನೀರು ಹೊರ ಹಾಕಲು ಜನ ಹರಸಾಹಸ ಪಟ್ಟಿದ್ದಾರೆ.
ಈ ರಾಶಿಯವರಿಗೆ ಕುಟುಂಬ ಕಲಹದಿಂದ ಮನಸ್ತಾಪ:ಗುರುವಾರದ ರಾಶಿ ಭವಿಷ್ಯ 12 ಜೂನ್ 2025
ಅಷ್ಟೇ ಅಲ್ಲ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಮನೆಯಲ್ಲಿನ ದವಸಧಾನ್ಯಗಳು ನೀರುಪಾಲಾಗಿದೆ. ಏಕಾಎಕಿ ಮಳೆಯಿಂದ ಜನತೆ ನಲುಗಿದ್ದಾರೆ. ಸುಮಾರು ಒಂದು ಗಂಟೆ ಸುರಿದ ಮಳೆಯಿಂದ ಇಡೀ ಗ್ರಾಮಕ್ಕೆ ನೀರು ನುಗ್ಗಿ ಅವಾಂತರ ಸೃಷ್ಟಿ ಆಗಿದೆ.
ಹುಬ್ಬಳ್ಳಿಯಲ್ಲಿನ ರಸ್ತೆಗಳು ಜಲಾವೃತ:
ಭಾರಿ ಮಳೆ ಹಿನ್ನೆಲೆ ಹುಬ್ಬಳ್ಳಿ ಹುಬ್ಬಳ್ಳಿಯಲ್ಲಿನ ರಸ್ತೆಗಳು ಜಲಾವೃತಗೊಂಡಿವೆ. ಹುಬ್ಬಳ್ಳಿಯ ಗಬ್ಬೂರ್ ಬೈಪಾಸ್ ಸೇರಿ ಹಲವಡೆ ಧಾರಾಕಾರ ಮಳೆಯಾಗಿದ್ದು, ವಾಹನ ಸವಾರರು ಪರದಾಡಿದ್ದಾರೆ.
ಧಾರವಾಡ ಜಿಲ್ಲೆಯ ನವಲಗುಂದ, ಕುಂದಗೋಳ, ಕಲಘಟಗಿಯಲ್ಲಿ ಸಹ ಭಾರೀ ಮಳೆ ಆಗಿದ್ದು ಅಪಾರ ಪ್ರಮಾಣದಲ್ಲಿ ಬಿತ್ತನೆ ಜಮೀನು ಹಾಳಾಗಿದೆ.
ಹಳ್ಳದ ನೀರಿನ ನಡುವೆ ಕೂಲಿಕಾರ್ಮಿಕರು:
ನವಲಗುಂದ ತಾಲ್ಲೂಕಿನಲ್ಲಿ ಬುಧವಾರ ಸುರಿದ ಮಳೆಯಿಂದಾಗಿ ಹಾಳಕುಸುಗಲ್ ಗ್ರಾಮ ಸಮೀಪದ ಗೌರಿ ಹಳ್ಳ ತುಂಬಿ ಹರಿಯಿತು.
ಹಳ್ಳ ತುಂಬಿದ್ದರಿಂದ ಗ್ರಾಮದಿಂದ ಜಮೀನಿಗೆ ಕೂಲಿ ಕೆಲಸಕ್ಕೆ ತೆರಳಿದ್ದ ಗ್ರಾಮಸ್ಥರು ವಾಪಸ್ ಮನೆಗೆ ಹೋಗಲು ಹರಸಾಹಸಪಟ್ಟರು.
ಗೌರಿ ಹಳ್ಳ ತುಂಬಿದಾಗ ಪ್ರತಿ ವರ್ಷ ಜಮೀನುಗಳಿಗೆ ನೀರು ನುಗ್ಗುವುದರಿಂದ ಫಸಲು ಹಾಳಾಗುತ್ತದೆ. ಸಮಸ್ಯೆ ಬಗೆಹರಿಸುವಂತೆ ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೂಡಲೇ ಸಂಬಂಧಿಸಿದವರು ಸೇತುವೆ ನಿರ್ಮಾಣಕ್ಕೆ ಮುಂದಾಗಬೇಕಿದೆ.