ತಿರುವನಂತಪುರಂ:- ಕೇರಳದಲ್ಲಿ ಭಾರೀ ಮಳೆಯ ಆರ್ಭಟ ಹಿನ್ನೆಲೆ 5 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಪ್ರಯಾಣಿಕರ ಗಮನಕ್ಕೆ: ವಿಮಾನ ಹಾರಾಟದ ವೇಳೆ ಫೋನ್ ಫ್ಲೈಟ್ ಮೋಡ್ನಲ್ಲಿ ಇಡೋದು ಯಾಕೆ?
ಕಾಸರಗೋಡು, ಕಣ್ಣೂರು, ವಯನಾಡ್, ಕೋಝಿಕ್ಕೋಡ್ ಮತ್ತು ಮಲಪ್ಪುರಂನಲ್ಲಿ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ನೀಡಿದ್ದು, ಅಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಜೂನ್ 17ರವರೆಗೆ ಕೇರಳದ ಕೆಲವು ಸ್ಥಳಗಳಲ್ಲಿ ಭಾರೀ (24 ಗಂಟೆಗಳಲ್ಲಿ 20 ಸೆಂ.ಮೀ.) ಮಳೆಯಾಗುವ ಸಾಧ್ಯತೆ ಇದೆ. ಜೂನ್ 18ರಂದು ಕೇರಳದ ಕೆಲವು ಸ್ಥಳಗಳಲ್ಲಿ ಭಾರೀ (24 ಗಂಟೆಗಳಲ್ಲಿ 7-11 ಸೆಂ.ಮೀ.) ಮಳೆಯಾಗುವ ಸಾಧ್ಯತೆ ಇದೆ. ಜೂನ್ 15ರಂದು ಲಕ್ಷದ್ವೀಪದ ಕೆಲವು ಸ್ಥಳಗಳಲ್ಲಿ ಭಾರೀ (24 ಗಂಟೆಗಳಲ್ಲಿ 7-11 ಸೆಂ.ಮೀ.) ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಪ್ರಕಟಣೆ ತಿಳಿಸಿದೆ.
ಸುಮಾರು ಎರಡು ವಾರಗಳ ಬಿಡುವು ನೀಡಿದ್ದ ನೈಋತ್ಯ ಮಾನ್ಸೂನ್ ಮತ್ತೆ ಸಕ್ರಿಯವಾಗಿದೆ. ಗುರುವಾರ ಮುಂಜಾನೆ ಕರ್ನಾಟಕದ ಹಲವಾರು ಭಾಗಗಳಲ್ಲಿ ಮಳೆಯಾಗಿದೆ. ಭಾರತ ಹವಾಮಾನ ಇಲಾಖೆ (ಐಎಂಡಿ) ಕರ್ನಾಟಕಕ್ಕೆ 7 ದಿನಗಳ ಎಚ್ಚರಿಕೆ ನೀಡಿದ್ದು, ಜೂನ್ 17ರವರೆಗೆ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ